Advertisement

ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಸಮಗ್ರ ತನಿಖೆ ನಡೆಯಲಿ: ಬಿಎಸ್‌ವೈ

08:28 AM Sep 07, 2017 | Team Udayavani |

ಮಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆ ನೋವು ತಂದಿದೆ. ಈ ಪ್ರಕರಣದ ಸಮಗ್ರ ತನಿಖೆ ನಡೆದು ಸತ್ಯ ಹೊರಬರಲಿ ಎಂದು ಮಾಜಿ ಮುಖ್ಯ ಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಒತ್ತಾಯಿಸಿದ್ದಾರೆ.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೊಲೆಯಾದ ವಿಮರ್ಶಕ ಎಂ.ಎಂ. ಕಲುºರ್ಗಿ ಪ್ರಕರಣವೂ ಇದುವರೆಗೆ ಬಗೆಹರಿದಿಲ್ಲ. ಇದೀಗ ಗೌರಿ ಹತ್ಯೆ ನಡೆದಿದೆ. ರಾಜ್ಯದಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಗಣಪತಿ ಪ್ರಕರಣ: ಜಾರ್ಜ್‌ ರಾಜೀನಾಮೆ ನೀಡಲಿ
ಡಿವೈಎಸ್ಪಿ ಗಣಪತಿ ಅವರ ಸಂಶಯಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸಿಬಿಐ ಸಮಗ್ರ ತನಿಖೆಗೆ ಆದೇಶಿ ಸಿದೆ. ನ್ಯಾಯಯುತ ತನಿಖೆ ನಡೆದು ಸತ್ಯ ಹೊರ ಬರುವ ವಿಶ್ವಾಸವಿದೆ. ಸಂಶಯ ಇರುವ ಹಿನ್ನೆಲೆಯಲ್ಲಿ ಕೆ.ಜೆ. ಜಾರ್ಜ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಇದೇ ವೇಳೆ ಒತ್ತಾಯಿಸಿದರು. ಒಂದು ವೇಳೆ ತನಿಖೆಯಲ್ಲಿ ಜಾರ್ಜ್‌ ನಿರಪರಾಧಿ ಎಂದು ಬಹಿರಂಗವಾದರೆ ಮತ್ತೆ ಮಂತ್ರಿಮಂಡಲಕ್ಕೆ ಸೇರ್ಪಡೆಗೊಳಿಸಲು ನಮ್ಮ ಅಭ್ಯಂತರವಿಲ್ಲ ಎಂದು ಅವರು ತಿಳಿಸಿದರು. ಹಿಂದೆ ತನಿಖೆ ನಡೆಸಿದ್ದ ಸಿಐಡಿಯವರು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು. ದಾಖಲೆ ತಿರುಚುವ ಕೆಲಸ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ ಎಂದವರು ವಿವರಿಸಿದರು.

ಮಂಗಳೂರು ಚಲೋ ಮಾಡುತ್ತೇವೆ
ಸೆ. 7ರಂದು ಮಂಗಳೂರಿನಲ್ಲಿ ಹಮ್ಮಿ ಕೊಂಡಿ ರುವ ಮಂಗಳೂರು ಚಲೋ ರ್ಯಾಲಿ ನಡೆದೇ ನಡೆಯುತ್ತದೆ. ಜಿಲ್ಲೆಯ ವಿವಿಧೆಡೆ ಗಳಿಂದ ಕಾರ್ಯಕರ್ತರು ಆಗಮಿಸ ಲಿದ್ದಾರೆ. ರಮಾನಾಥ ರೈ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದ ಅವರು, ರಾಜ್ಯದಲ್ಲಿ ನಡೆದ 24 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆಯಾಗುತ್ತಾರೆ ಎಂದು ಆಪಾದಿಸಿದರು. ಬಿಜೆಪಿಯವರು ಶಾಂತಿಯುತವಾಗಿ ಬೈಕ್‌ ರ್ಯಾಲಿ ಮಾಡಲು ಹೊರಟಿದ್ದರು. ಆದರೆ ಪೊಲೀಸ ರನ್ನು ಬಳಸಿ ಅವರನ್ನು ತಡೆಯುವ ಮೂಲಕ ಸರಕಾರ ಅಮಾನುಷವಾಗಿ ವರ್ತಿಸಿದೆ ಎಂದು ಬಿಎಸ್‌ ಯಡಿಯೂರಪ್ಪ ಅವರು ಟೀಕಿಸಿದರು.

ತಲವಾರು, ಪಿಸ್ತೂಲ್‌ ಇತ್ತೇ?
ಮಂಗಳೂರು ಚಲೋ ತಡೆ ಯಲು ಯತ್ನಿಸಿರುವ ಸರಕಾರ, ಬಂಧಿತ ಕಾರ್ಯ ಕರ್ತ ರಿಗೆ ಊಟ ವನ್ನೂ ನೀಡ ಬಾರದು ಎಂದು ಪೊಲೀಸ ರಿಗೆ ಸೂಚಿಸುವ ಮೂಲಕ ಅಮಾನ ವೀಯ ವಾಗಿ ನಡೆದುಕೊಂಡಿದೆ. ನಮ್ಮ ಬೈಕ್‌ ಗಳಲ್ಲಿ ತಲವಾರು, ಚೂರಿ, ಪಿಸ್ತೂಲ್‌ ಇತ್ತೇ? ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next