Advertisement
ಕೋಲಾರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದು ಕಾಲದ ಆಪ್ತ ಎಚ್.ಸಿ. ಮಹದೇವಪ್ಪ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಅಚ್ಚರಿಯಿಲ್ಲ.ವಿಧಾನಸಭೆ ಚುನಾವಣೆಯಲ್ಲಿ ಟಿ.ನರಸೀಪುರ ಕ್ಷೇತ್ರದಿಂದ ಸೋಲು ಅನುಭವಿಸಿದ ನಂತರ ರಾಜಕೀಯವಾಗಿ ತೆರೆಮರೆಗೆ ಸರಿದಿರುವ ಎಚ್.ಸಿ.ಮಹದೇವಪ್ಪ ಮತ್ತೆ ಮುಖ್ಯವಾಹಿನಿಗೆ ಬರಲು ಲೋಕಸಭೆ ಚುನಾವಣೆಯಲ್ಲಿ ಕೋಲಾರ ಮೂಲಕ ರಂಗಪ್ರವೇಶಕ್ಕೆ ಮಾನಸಿಕವಾಗಿ ಸಿದಟಛಿತೆ ನಡೆಸಿದ್ದಾರೆ.
Related Articles
Advertisement
ಲೆಕ್ಕಾಚಾರದ ಅಂಕಿ-ಅಂಶ ಹೈಕಮಾಂಡ್‌ಗೆ: ಕೋಲಾರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಂಟು ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐವರು ಶಾಸಕರು ಆಯ್ಕೆಯಾದರೂ ಜೆಡಿಎಸ್‌ಗೆ ಒಟ್ಟು 5,03,627 ಮತ ಬಂದಿದ್ದು,ಕಾಂಗ್ರೆಸ್‌ಗೆ 4,28,280 ಮತ ಬಂದಿದೆ. ಮುಳಬಾಗಿಲಿನಲ್ಲಿ ಕೊತ್ತನೂರು ಮಂಜುನಾಥ್ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಮಾಡಿದ್ದ ನಾಗೇಶ್ 74213 ಮತ, ಚಿಂತಾಮಣಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಧಾಕರ್ 82080 ಮತ ಪಡೆದಿದ್ದು, ಈ ಇಬ್ಬರೂ ಕೆ.ಎಚ್.ಮುನಿಯಪ್ಪ ವಿರೋಧ ಬಣದಲ್ಲಿರುವುದರಿಂದ ಆ ಮತಗಳು ಜೆಡಿಎಸ್‌ಗೆ ಬರಲಿವೆ. ಹೀಗಾಗಿ, ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿದರೆ ಜಯ ಖಚಿತ ಎಂಬ ಲೆಕ್ಕಾಚಾರ ಅಂಕಿ-ಅಂಶದ ಸಮೇತ ಕಾಂಗ್ರೆಸ್ ಹೈಕಮಾಂಡ್ ಮುಂದೆ ಗೌಡರು ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಮಹದೇವಪ್ಪಗೆ ಆದ್ಯತೆ: ಕೋಲಾರದಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವಿಧಾನಸಭೆ ಟಿಕೆಟ್ ತಪ್ಪಿದ ಕೊತ್ತನೂರು ಮಂಜುನಾಥ್ ಜಾತಿ ಪ್ರಮಾಣ ಪತ್ರ ವಿವಾದ ಇತ್ಯರ್ಥಗೊಂಡರೆ ಜೆಡಿಎಸ್ ಅಭ್ಯರ್ಥಿಯಾಗಲು ಉತ್ಸುಕರಾಗಿದ್ದಾರೆ. ಕೆ.ಎಚ್. ಮುನಿಯಪ್ಪ ಅವರ ಕುಟುಂಬ ಸದಸ್ಯರೊಬ್ಬರೂ ಜೆಡಿಎಸ್ ಜತೆ ಸಂಪರ್ಕದಲ್ಲಿದ್ದು, ಸ್ಪರ್ಧೆಗೆ ಆಸಕ್ತಿ ಹೊಂದಿದ್ದಾರೆ. ಆದರೆ, ಗೌಡರ ಕುಟುಂಬಕ್ಕೆ ಆಪ್ತರಾಗಿರುವ ಎಚ್.ಸಿ.ಮಹದೇವಪ್ಪ ಅವರಿಗೆ ಜೆಡಿಎಸ್‌ನ ಮೊದಲ ಆದ್ಯತೆಯಾಗಿದೆ ಎಂದು ಹೇಳಲಾಗಿದೆ. ಹಿಂದುಳಿದವರಿಗೂ ಸ್ಥಾನ: ಲೋಕಸಭೆ ಚುನಾವಣೆಯಲ್ಲಿ ಒರ್ವ ದಲಿತ, ಹಿಂದುಳಿದ, ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಜೆಡಿಎಸ್ ಲೆಕ್ಕಾಚಾರ. ಹೀಗಾಗಿಯೇ ರಾಜ್ಯದಲ್ಲಿ ಮೀಸಲು ಕ್ಷೇತ್ರವೊಂದು ಬಿಟ್ಟುಕೊಡಲು ಹಠ ಹಿಡಿದಿದೆ. ಚಾಮರಾಜನಗರ, ಕಲಬುರಗಿ, ವಿಜಯಪುರ,ಬಳ್ಳಾರಿ, ಕೋಲಾರ, ರಾಯಚೂರು, ಚಿತ್ರದುರ್ಗ ಕ್ಷೇತ್ರಗಳ ಪೈಕಿ ಜೆಡಿಎಸ್ ಶಕ್ತಿಯುತವಾಗಿರುವುದು ಕೋಲಾರದಲ್ಲಿ. ಹೀಗಾಗಿ, ಕೋಲಾರ ಮೀಸಲು ಕ್ಷೇತ್ರಕ್ಕೆ ಬೇಡಿಕೆ ಇಟ್ಟಿದೆ. ಅಲ್ಲಿ ಎಸ್‌ಸಿ ಅಭ್ಯರ್ಥಿ ಕಣಕ್ಕಿಳಿಸಿ, ಶಿವಮೊಗ್ಗದಲ್ಲಿ ಹಿಂದುಳಿದ ವರ್ಗದ ಮಧು ಬಂಗಾರಪ್ಪ ಅವರಿಗೆ ಟಿಕೆಟ್ ಕೊಟ್ಟು ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿಗೆ ಉತ್ತರಪ್ರದೇಶದಲ್ಲಿ ಟಿಕೆಟ್ ನೀಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹಾಸನಕ್ಕೆ ಪ್ರಜ್ವಲ್ ಆದರೆ ಮಂಡ್ಯಕ್ಕೆ ನಿಖೀಲ್?
ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದು ಖಚಿತವಾಗಿದ್ದು, ಮಂಡ್ಯದಿಂದ ನಿಖೀಲ್ ಕುಮಾರಸ್ವಾಮಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಈಗಾಗಲೇ ಮಂಡ್ಯ ಕ್ಷೇತ್ರದಲ್ಲಿ ಒಂದೆರಡು ಬಾರಿ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ತಮ್ಮ ಆಗಮನದ ಮುನ್ಸೂಚನೆ ಸಹ ನೀಡಿದ್ದಾರೆ. ಹಾಸನ ಮೊಮ್ಮಗನಿಗೆ ಬಿಟ್ಟುಕೊಟ್ಟು ಮಂಡ್ಯ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧೆಗೆ ಬಯಸಿದ್ದರಾದರೂ ನಿಖೀಲ್ ಅಲ್ಲಿಂದ ಸ್ಪರ್ಧೆ ಮಾಡುವ ಬಯಕೆ ಹೊಂದಿರುವುದರಿಂದ ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಶಿಫ್ಟ್ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೂಂದು ಮೂಲದ ಪ್ರಕಾರ ದೇವೇಗೌಡರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದು ಇನ್ನೂ ಅಂತಿಮಗೊಂಡಿಲ್ಲ. ಕಾಂಗ್ರೆಸ್ ಸೇರಿ ಮಹಾಘಟಬಂಧನ್ ನಾಯಕರು ದೇಶವ್ಯಾಪಿ ಪ್ರಚಾರದಲ್ಲಿ ತೊಡಗುವಂತೆ ಗೌಡರಿಗೆ ಮನವಿ ಮಾಡಿವೆ. ಹೀಗಾಗಿ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ. – ಎಸ್. ಲಕ್ಷ್ಮಿನಾರಾಯಣ