ಮುಂಬಯಿ: ಗೌಡ ಸಾರಸ್ವತ ಬ್ರಾಹ್ಮಣ ಸ್ಕಾಲರ್‌ಶಿಪ್ ಲೀಗ್ ಮುಂಬಯಿ ವತಿಯಿಂದ ಸಂಸ್ಥೆಯ ದಾನಿಗಳಿಗೆ ಗೌರ ವಾರ್ಪಣೆ ಕಾರ್ಯಕ್ರಮವು ಎ. 8ರಂದು ವಡಾಲದ ದ್ವಾರಕಾನಾಥ್ ಭವನದ ಸಭಾಗೃಹದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಮಾಜಪರ ಕಾರ್ಯಗಳಿಗೆ ಸದಾ ಸ್ಪಂದಿಸುತ್ತಿರುವ ಮುಂಬಯಿಯ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ ಗಣ್ಯರಾದ ಅನಿಲ್ ಪೈ ಕಾಕೋಡೆ, ಚಂದ್ರಕಲಾ ಬಾಳಿಗಾ, ಸುನಿಲ್ ಶೆಣೈ, ಸುಮನ್ ಶೆಣೈ, ಗಣೇಶ್ ಬಿ. ಪೈ ಅವರು ಸಂದಭೋìಚಿತವಾಗಿ ಮಾತನಾಡಿ, ತಮ್ಮ ಬದುಕು-ಸಾಧನೆಗಳ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿದರು.
ಎಂಎಸ್‌ಡಿ ಫಾರ್ಮಸ್ಯೂಟಿಕಲ್ಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ವಿವೇಕ್ ವಿ. ಕಾಮತ್ ಇವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಹಕರಿಸಿದಾಗ ಸಮುದಾಯ ಬಲಾಡ್ಯಗೊ ಳ್ಳುವುದಲ್ಲದೆ ಸಮಾಜವು ಉದ್ಧಾರವಾಗುತ್ತದೆ. ಇಂತಹ ಕಾರ್ಯವನ್ನು ಕಳೆದ ಹಲವಾರು ವರ್ಷಗಳಿಂದ ನೀವೆಲ್ಲರು ಒಟ್ಟಾಗಿ ಮಾಡುತ್ತಿದ್ದೀರಿ. ಇದು ನಿಜವಾಗಿಯೂ ಅಭಿನಂದನೀಯ. ಭವಿಷ್ಯದಲ್ಲೂ ಇಂತಹ ಒಳ್ಳೆಯ ಕಾರ್ಯಗಳಿಗೆ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ. ನಾವೆಲ್ಲರು ಒಂದಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರನ್ನು ಆದರ್ಶ ಪ್ರಜೆಗಳನ್ನಾಗಿ ಮಾಡೋಣ ಎಂದರು.
ಜಿಎಸ್‌ಬಿ ಲೀಗ್ ಇದರ ಅಧ್ಯಕ್ಷ ಎಸ್. ಎಸ್. ಭಟ್ ಇವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ಆನಂದ್ ಶ್ಯಾನ್‌ಭಾಗ್ ಇವರು ಅತಿಥಿ-ಗಣ್ಯರುಗಳನ್ನು ಪರಿಚಯಿಸಿದರು. ಗೀತಾ ಆರ್. ಪೈ ಇವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಗಣೇಶ್ ಶ್ಯಾನ್‌ಭಾಗ್ ವಂದಿಸಿದರು. ವಡಾಲ ರಾಮ ಮಂದಿರದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಗೌಡ ಸಾರಸ್ವತ ಬ್ರಾಹ್ಮಣ ಸ್ಕಾಲರ್‌ಶಿಪ್ ಲೀಗ್ ಮುಂಬಯಿ ಇದರ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.