Advertisement
ತಮ್ಮ, ಅಧಿಕೃತ ಟ್ವೀಟರ್ ಖಾತೆಯ ಮೂಲಕ ಟ್ವೀಟ್ ಮಾಡಿರುವ ಗಾಂಧಿ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ ಎ) ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್ ಎಸಿ) ಮತ್ತೆ ದಾಟಿದ್ದು, ಭಾರತ ಹಾಗೂ ಚೀನಾ ದೇಶಗಳ ನಡುವೆ ಘರ್ಷಣೆ ನಡೆದಿದೆ ಎಂಬ ಮಾಧ್ಯಮ ವರದಿಯ ತುಣುಕನ್ನು ಉಲ್ಲೇಖಿಸಿ ಕೇಂದ್ರದ ವಿರುದ್ಧ ಟ್ವೀಟ್ ದಾಳಿ ಮಾಡಿದ್ದಾರೆ.
Related Articles
ಏತನನ್ಮಧ್ಯೆ, ಪೂರ್ವ ಲಡಾಖ್ ನಲ್ಲಿ ಚೀನಾ ಪಡೆ ಭಾರತ ಸೇನೆ ಜತೆ ಮತ್ತೆ ಘರ್ಷಣೆ ನಡೆಸಿದೆ ಎಂಬ ಮಾಧ್ಯಮಗಳ ವರದಿಯನ್ನು ಭಾರತೀಯ ಸೇನಾ ಪಡೆ ಬುಧವಾರ(ಜುಲೈ14) ನಿರಾಕರಿಸಿದೆ.
Advertisement
ನೈಜತೆಯನ್ನು ತಿಳಿಯದೇ ಈ ಸುದ್ದಿಯನ್ನು ಪ್ರಕಟಿಸಲಾಗಿದೆ ಎಂದು ಸೇನೆ ತಿಳಿಸಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದೆ. ಇದೊಂದು ಸುಳ್ಳು ಮಾಹಿತಿಯಾಗಿದೆ ಎಂದು ವಿವರಿಸಿದೆ. ಘರ್ಷಣೆಯ ಮೂಲಕ ಚೀನಾದೊಂದಿಗಿನ ಒಪ್ಪಂದ ಮುರಿದು ಬಿದ್ದಿರುವುದಾಗಿ ಉಲ್ಲೇಖಿಸಿರುವ ಸುದ್ದಿ ಸುಳ್ಳು ಮತ್ತು ಆಧಾರರಹಿತವಾದದ್ದು ಎಂದು ಸೇನೆ ಹೇಳಿದೆ.
ಈ ವರ್ಷದ ಫೆಬ್ರವರಿಯಿಂದ ಸೇನೆಯನ್ನು ಹಿಂಪಡೆಯುವ ಒಪ್ಪಂದದ ನಂತರ ಕೈಗೊಂಡ ನಿರ್ಧಾರದ ಬಳಿಕ ಯಾವುದೇ ಪ್ರದೇಶಗಳಲ್ಲಿ ಉಭಯ ಸೇನೆಗಳು ಅತಿಕ್ರಮಿಸುವ ಪ್ರಯತ್ನ ನಡೆಸಿಲ್ಲ ಎಂದು ತಿಳಿಸಿದೆ. ವರದಿಯಲ್ಲಿ ತಿಳಿಸಿರುವಂತೆ ಗಾಲ್ವಾನ್ ಅಥವಾ ಬೇರೆ ಯಾವುದೇ ಪ್ರದೇಶದಲ್ಲಿ ಘರ್ಷಣೆಗಳು ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರಿ ನೌಕರರಿಗೆ,ಪಿಂಚಣಿದಾರರಿಗೆ ಗುಡ್ ನ್ಯೂಸ್:ತುಟ್ಟಿಭತ್ಯೆ ಶೇ.28ರಷ್ಟು ಹೆಚ್ಚಳ