Advertisement
ಕೇಂದ್ರ ಸರ್ಕಾರವು, 3 ವರ್ಷಗಳಲ್ಲಿ ರೈತರು ಹಾಗೂ ಅವರ ಜಮೀನುಗಳ ವ್ಯಾಪ್ತಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಸುಗಮಗೊಳಿಸುತ್ತಿದೆ. ಈ ವರ್ಷ 400 ಜಿಲ್ಲೆಗಳಲ್ಲಿ ಖಾರಿಫ್(ಮುಂಗಾರು) ಬೆಳೆಗಳಿಗೆ ಡಿಜಿಟಲ್ ಬೆಳೆ ಸಮೀಕ್ಷೆಯನ್ನು ನಡೆಸಲಾಗುವುದು.
ಕೃಷಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಿಂದ ಅನ್ನದಾತರಿಗೆ ಬೆಳೆಗೆ ಸಂಬಂಧಿಸಿದಂತೆ ಮಾಹಿತಿಗಳು ತ್ವರಿತಗತಿಯಲ್ಲಿ ಸಿಗಲಿವೆ. ಬೆಳೆ ಸಲಹಾ ಸೇವೆಗಳು, ಯಂತ್ರೋಪಕರಣಗಳು, ಬೆಳೆ ಸಮೀಕ್ಷೆ, ರೈತರಿಗೆ ಹವಾಮಾನ ಮುನ್ಸೂಚನೆ, ಸರ್ಕಾರಿ ಯೋಜನೆಗಳ ಸೌಲಭ್ಯಗಳು, ಮಾರುಕಟ್ಟೆ, ಬೆಳೆ ದಾಸ್ತಾನು ಮತ್ತಿತರರ ವಿವರಗಳು ಸುಲಭವಾಗಿ ಸಿಗಲಿವೆ.
Related Articles
ದೇಶದಲ್ಲಿ ಸುಸ್ಥಿರ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸಲು ಮುಂದಿನ 2 ವರ್ಷಗಳ ಅವಧಿಯಲ್ಲಿ 1 ಕೋಟಿ ರೈತರಿಗೆ ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಳ್ಳಲು ನೆರವು ನೀಡಲು ಉದ್ದೇಶಿಸಲಾಗಿದೆ. ಹೊಸ 109 ಅಧಿಕ ಇಳುವರಿ ನೀಡುವ ಹಾಗೂ ಹವಾಮಾನ ಸ್ಥಿತಿಸ್ಥಾಪಕ ತೋಟಗಾರಿಕೆ ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಅತಿ ಕಡಿಮೆ ವೆಚ್ಚದಲ್ಲಿ ಕೃಷಿ ಕೈಗೊಂಡು ಲಾಭದಾಯಕತೆಯನ್ನು ಹೆಚ್ಚಿಸಲಾಗುತ್ತಿದೆ. ಇದರಿಂದ ಮಣ್ಣಿನ ಆರೋಗ್ಯ ಹೆಚ್ಚಿಸುವುದರ ಜೊತೆಗೆ ಜೀವ ವೈವಿಧ್ಯತೆಯನ್ನು ಸುಸ್ಥಿರಗೊಳಿಸಲಿದೆ. ಪ್ರಮಾಣೀಕರಣ ಹಾಗೂ ಬ್ರ್ಯಾಂಡಿಂಗ್ ಬೆಂಬಲದೊಂದಿಗೆ 1 ಕೋಟಿ ರೈತರು ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜನ ನೀಡಲಾಗುತ್ತಿದೆ ಎಂದು ವಿತ್ತ ಸಚಿವರು ತಿಳಿಸಿದ್ದಾರೆ.
Advertisement