Advertisement

16ನೇ ಹಣಕಾಸು ಆಯೋಗ ರಚನೆ ಪ್ರಕ್ರಿಯೆ ಆರಂಭ

10:51 PM Apr 09, 2023 | Team Udayavani |

ಹೊಸದಿಲ್ಲಿ: ಈ ವರ್ಷದಲ್ಲೇ ಕೇಂದ್ರ ಸರಕಾರವು 16ನೇ ಹಣ­ಕಾಸು ಆಯೋಗವನ್ನು ರಚಿಸುವ ನಿರೀಕ್ಷೆಯಿದೆ. ಈಗಾಗಲೇ ಆಯೋಗ ರಚನೆಯ ಕುರಿತ ಪ್ರಕ್ರಿಯೆ ಆರಂಭವಾಗಿದ್ದು, ಆಯೋಗದ ಸದಸ್ಯರು ಮತ್ತು ಉಲ್ಲೇಖಿತ ನಿಯಮಗಳ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಆದಾಯ ಹಂಚಿಕೆಯ ಸೂತ್ರವನ್ನು ಈ ಆಯೋಗ ಶಿಫಾರಸು ಮಾಡಲಿದೆ. ಹಣಕಾಸು ಆಯೋಗ ಎನ್ನುವುದು ಕೇಂದ್ರ-ರಾಜ್ಯಗಳ ಹಣಕಾಸು ಸಂಬಂಧದ ಕುರಿತು ಸಲಹೆ ನೀಡುವ ಸಾಂವಿಧಾನಿಕ ಸಂಸ್ಥೆಯಾಗಿದೆ.

2026ರ ಎಪ್ರಿಲ್‌ 1ರಿಂದ ಐದು ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ತೆರಿಗೆ ಮೊತ್ತವು ಯಾವ ಅನುಪಾತದಲ್ಲಿ ಹಂಚಿಕೆಯಾಗಬೇಕು ಎಂಬುದನ್ನು ಈ ಆಯೋಗವು ತಿಳಿಸಲಿದೆ.

ಈ ಹಿಂದಿನ ಹಣಕಾಸು ಆಯೋಗವು 2020ರ ನವೆಂಬರ್‌ 9ರಂದು ತನ್ನ ವರದಿಯನ್ನು ಸಲ್ಲಿಸಿತ್ತು. 2021-22ರಿಂದ 2025-26ರ ವರೆಗಿನ ಒಟ್ಟು 5 ಹಣಕಾಸು ವರ್ಷಗಳ ವರದಿಯನ್ನು ರಾಷ್ಟ್ರಪತಿಯವರಿಗೆ ಹಸ್ತಾಂತರಿಸಿತ್ತು. ಎನ್‌.ಕೆ.ಸಿಂಗ್‌ ನೇತೃತ್ವದ 15ನೇ ಹಣಕಾಸು ಆಯೋಗವು ತೆರಿಗೆ ಹಂಚಿಕೆ ಅನುಪಾತವನ್ನು ಶೇ.42ರಲ್ಲಿಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next