Advertisement

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

10:21 PM Oct 25, 2021 | Team Udayavani |

ನವದೆಹಲಿ: ಏರ್‌ ಇಂಡಿಯಾದ ಷೇರುಗಳನ್ನು 18,000 ಕೋಟಿ ರೂಪಾಯಿಗೆ ಟಾಟಾ ಸನ್ಸ್‌ ಸಂಸ್ಥೆಗೆ ಮಾರಾಟ ಮಾಡುವ ಒಪ್ಪಂದದ ಪತ್ರಕ್ಕೆ ಸರ್ಕಾರ ಸೋಮವಾರ ಸಹಿ ಹಾಕಿದೆ.

Advertisement

ಇತ್ತೀಚೆಗಷ್ಟೇ ಟಾಟಾದ ಟಲೇಸ್‌ ಪ್ರೈ. ಲಿ. ಅಂಗಸಂಸ್ಥೆಯು ಸರ್ಕಾರಕ್ಕೆ 2,700 ಕೋಟಿ ರೂ. ಕೊಟ್ಟು, 15,300 ಕೋಟಿ ರೂ. ಸಾಲದ ಹೊರೆಯನ್ನು ಹೊತ್ತುಕೊಳ್ಳುವ ಮನವಿಯನ್ನು ಸರ್ಕಾರ ಒಪ್ಪಿಕೊಂಡಿತ್ತು.

ನಂತರ ಅ.11ರಂದು ಟಾಟಾ ಸಂಸ್ಥೆಗೆ ಶೇ. 100 ಷೇರು ಮಾರಾಟ ಮಾಡುವ ಪತ್ರವನ್ನು ಸರ್ಕಾರ ಕಳುಹಿಸಿಕೊಟ್ಟಿತ್ತು.

ಅದರ ನಂತರದ ಪ್ರಕ್ರಿಯೆಯಾಗಿ ಸೋಮವಾರ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗಿದೆ. ಇನ್ನೂ ಹಲವು ಪ್ರಕ್ರಿಯೆಗಳಿದ್ದು, ಡಿಸೆಂಬರ್‌ ಅಂತ್ಯದ ವೇಳೆಗೆ ಏರ್‌ ಇಂಡಿಯಾ ಸಂಪೂರ್ಣವಾಗಿ ಟಾಟಾ ಸಂಸ್ಥೆಗೆ ಹಸ್ತಾಂತರವಾಗಲಿದೆ.

ಇದನ್ನೂ ಓದಿ:ಕೋವಿಡ್‌ ಲಸಿಕೆ ಕಡ್ಡಾಯ ಪ್ರಶ್ನಿಸಿದ ಅರ್ಜಿ ವಜಾ: ಅರ್ಜಿದಾರ ವಕೀಲರಿಗೆ ಹೈಕೋರ್ಟ್‌ ತರಾಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next