Advertisement
ತಾಲೂಕಿನ ಶಾಲೆಗಳ ಅಂಕಿ ಅಂಶ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಒಟ್ಟು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಗಳು ಸೇರಿ 435 ಶಾಲೆಗಳಿವೆ. ಒಟ್ಟು 350 ಸರ್ಕಾರಿ ಶಾಲೆಗಳಲ್ಲಿ 208 ಕಿರಿಯ, 125 ಹಿರಿಯ ಪ್ರಾಥಮಿಕ ಹಾಗೂ 17ಪ್ರೌಢಶಾಲೆಗಳಿವೆ. ಇದ ರೊಂದಿಗೆ ಅನು ದಾನಿತವಾಗಿ 6 ಪ್ರಾಥಮಿಕ ಶಾಲೆ, 12 ಪ್ರೌಢ ಶಾಲೆ ಗಳಿವೆ. ಅನುದಾನ ರಹಿತವಾಗಿ 25 ಪ್ರಾಥಮಿಕ ಶಾಲೆ ಹಾಗೂ 37 ಪ್ರೌಢಶಾಲೆಗಳಿವೆ. ಇದರೊಂದಿಗೆ ಸಿಬಿಎಸ್‌ಸಿ ಪಠ್ಯಕ್ರಮದ 4, ಐಸಿಎಸ್‌ಸಿ 1 ಶಾಲೆಗಳಿವೆ. 2022-23ನೇ ಸಾಲಿನಲ್ಲಿ ಸಾಲಿನ ಅಂಕಿ-ಅಂಶದಂತೆ ಕಿರಿಯ ಪ್ರಾಥಮಿಕ ಎಲ್ಲಾ ಶಾಲೆಗಳಲ್ಲಿ 20,913 ವಿದ್ಯಾರ್ಥಿಗಳು, ಹಿರಿಯ ಪ್ರಾಥಮಿಕ ಶಾಲೆಯಲ್ಲಿ (6ರಿಂದ8) 12,153 ಹಾಗೂ ಪ್ರೌಢ ಶಾಲೆಗಳಲ್ಲಿ (9ಮತ್ತು 10) 6.600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ತಾಲೂಕಿನಲ್ಲಿ 1ರಿಂದ 10ರವರೆಗೆ ಒಟ್ಟು 39,666 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
Related Articles
Advertisement
ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು: ತಾಲೂಕಿನ ದೊಡ್ಡಬೆಳವಂಗಲದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಬಾಶೆಟ್ಟಿಹಳ್ಳಿಯ ಅಜಾಕ್ಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಸಾಲಿನಲ್ಲಿ 831 ವಿದ್ಯಾರ್ಥಿಗಳು ದಾಖಲಾಗಿದ್ದು, ಈ ಬಾರಿ ದಾಖಲಾತಿ 1000 ದಾಟಲಿದೆ. ಇದರೊಂದಿಗೆ ತಾಲೂಕಿನ ಹುಲಿಕುಂಟೆ, ಹೊಸಹಳ್ಳಿ, ಮುತ್ಸಂದ್ರ, ಹಾಡೋನಹಳ್ಳಿ, ಆರೂಢಿ, ಸಾಸಲು, ಕನಸವಾಡಿ, ಮುತ್ತೂರು, ರಾಜಘಟ್ಟ, ತೂಬಗೆರೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿವೆ.
ಸರ್ಕಾರಿ ಶಾಲೆಗಳ ಉತ್ತಮ ಸಾಧನೆ: ಏಪ್ರಿಲ್ ನಲ್ಲಿ ನಡೆದ 2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಲ್ಲಿ ಸರ್ಕಾರಿ ಪ್ರೌಢಶಾಲೆ ಗಳು ಶೇ.93, ಸರ್ಕಾರಿ ವಸತಿ ಶಾಲೆಗಳು ಶೇ.100 ಫಲಿತಾಂಶ ಗಳಿಸಿ ಉತ್ತಮ ಸಾಧನೆ ಮಾಡಿವೆ.
ಗುಣಾತ್ಮಕ ಶಿಕ್ಷಣಕ್ಕೆ ಒತ್ತು: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನಲಿ ಕಲಿ ಯೋಜನೆ, ಶಿಕ್ಷಕರಿಗೆ ವಿವಿಧ ತರಬೇತಿಗಳನ್ನು ನೀಡ ಲಾಗುತ್ತಿದೆ. ಕಳೆದ ವರ್ಷ ಕಲಿಕಾ ಚೇತರಿಕೆ ವರ್ಷವನ್ನಾಗಿ ಆಚರಿಸ ಲಾಗಿತ್ತು. ಈ ಸಾಲಿನಲ್ಲಿ ಗುಣಾತ್ಮಕ ಶೈಕ್ಷಣಿಕ ವರ್ಷ ವನ್ನಾಗಿ ಆಚರಿಸಲಾಗುತ್ತಿದೆ. ಅನುಭವಿ ಹಾಗೂ ನುರಿತ ಶಿಕ್ಷಕರಿಂದ ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಕ್ಷೇತ್ರ ಸಮನ್ವಯಾ ಧಿಕಾರಿ ಹನುಮಂತಪ್ಪ.ಬಿ.ಹಿಂದಿನ ಮನಿ ತಿಳಿಸಿದ್ದಾರೆ.
ದಾಖಲಾತಿ ಆಂದೋಲನ, ಸರ್ಕಾರದ ಸೌಲಭ್ಯಗಳು: ಸರ್ಕಾರಿ ಶಾಲೆಗಳಲ್ಲಿ ಇರುವ ಸೌಲಭ್ಯಗಳ ಕುರಿತು ಪ್ರಚಾರ ಕೈಗೊಂಡು ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲಾ ಮಕ್ಕಳನ್ನು ಶಾಲಾ ಪ್ರಾರಂಭದ ದಿನದಿಂದಲೇ ಶಾಲೆಗೆ ಹಾಜರಾಗುವಂತೆ ಮಾಡಲು ದಾಖಲಾತಿ ಆಂದೋಲನ ನಡೆಸಲಾಗುತ್ತಿದೆ. ಕೋವಿಡ್-19 ನಂತರದಲ್ಲಿ ದಾಖಲಾತಿ ಪ್ರಮಾಣ ಹಚ್ಚಾಗುತ್ತಿವೆ. ಸರ್ಕಾರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಕಷ್ಟು ಕ್ರಮ ಗಳನ್ನು ಕೈಗೊಂಡಿದೆ. ವಿವಿಧ ಸರ್ಕಾರಿ ಶಾಲೆಗಳಲ್ಲಿ 27 ಹೆಚ್ಚುವರಿ ಕೊಠಡಿಗಳ ಕಾಮಗಾರಿಗಳು ಆರಂಭ ವಾಗಿವೆ. ಈಗಾಗಲೇ ಸಮವಸ್ತ್ರ ಹಾಗೂ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ರಂಗಪ್ಪ ತಿಳಿಸಿದ್ದಾರೆ.
ಸರ್ಕಾರಿ ಶಾಲೆ ಬಗ್ಗೆ ಅಸಡ್ಡೆ ಏಕೆ ?: ಸರ್ಕಾರಿ ಶಾಲೆ ಗಳಿಗೆ ದಾಖಲಾತಿ ಕಡಿಮೆ ಯಾಗಲು ಪೋಷಕರ ಮನಸ್ಥಿತಿ ಒಂದಡೆ ಯಾದರೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಜನಸಾಂದ್ರತೆ ಕಡಿಮೆ ಇರುವುದು ಸಹ ಕಾರಣವಾಗಿದೆ. ನುರಿತ ಶಿಕ್ಷಕರು, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಹಲವಾರು ವಿದ್ಯಾರ್ಥಿ ವೇತನಗಳು, ಬೈಸಿ ಕಲ್ ಮೊದಲಾಗಿ ಉಚಿತ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಏಕೆ ಸೇರಿಸುತ್ತಿಲ್ಲ ಎಂದು ಮಧ್ಯಮ ವರ್ಗದವರನ್ನು ಕೇಳಿದರೆ, ಮೊದಲನೆಯದಾಗಿ ಇಂಗ್ಲಿಷ್ ಭಾಷೆ ಸರ್ಕಾರಿ ಶಾಲೆಗಳಲ್ಲಿ ಕಲಿಸೋಲ್ಲ. ಮೂಲ ಸೌಕರ್ಯ ಇಲ್ಲ. ಸರ್ಕಾರಿ ಶಾಲೆಗೆ ಕಲಿಸುತ್ತಿದ್ದೇವೆಂದು ಹೇಳಿ ಕೊಳ್ಳುವುದು ಘನತೆಗೆ ಕಡಿಮೆ ಎನ್ನುತ್ತಾರೆ ಪೋಷಕರು.
ಸರ್ಕಾರಿ ಶಾಲೆಗಳು ಬಡವರಿಗಷ್ಟೇ ಸೀಮಿತ ಎಂಬಂತಾಗಿದೆ. ಆದರೆ ಈಗ 1 ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳಿದ್ದರೆ, ಆರ್‌ಟಿಇ ವ್ಯಾಪ್ತಿಗೆ ಬರು ವುದಿಲ್ಲ ಎನ್ನುವ ತಿದ್ದುಪಡಿಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗುವ ಸಂಭವವಿದೆ.
ಶಾಲೆಗಳಲ್ಲಿ ಗುಣ ಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಇದಕ್ಕೆ ಸಮುದಾಯ ಹಾಗೂ ಸರ್ಕಾ ರದ ಇಚ್ಛಾ ಶಕ್ತಿ ಕೊರತೆಯಿದೆ. ರ್ಕಾರಿ ಶಾಲೆಗಳನ್ನು ಉಳಿಸಬೇಕೆನ್ನುವ ಕೂಗಿದೆ. ಆದರೆ ಇದು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ಎಂಬಂತಾಗಿದೆ. ಸರ್ಕಾರಿ ಶಾಲೆಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಬೇಕು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಮುದಾಯ ಹಾಗೂ ಸರ್ಕಾರ ಮುಂದಾಗಬೇಕು. – ಸಂತೋಷ್, ಆರೂಢಿ ಪೋಷಕ