Advertisement

3 ಈಶಾನ್ಯ ರಾಜ್ಯಗಳ ವಿಶೇಷಾಧಿಕಾರ ವಾಪಸ್‌

11:13 PM Mar 31, 2022 | Team Udayavani |

ಹೊಸದಿಲ್ಲಿ: ಈಶಾನ್ಯ ರಾಜ್ಯಗಳಾಗಿರುವ ನಾಗಾಲ್ಯಾಂಡ್‌, ಅಸ್ಸಾಂ ಮತ್ತು ಮಣಿಪುರದ ಕೆಲವು ಭಾಗಗಳಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯ ಮಿತಿಯನ್ನು ತಗ್ಗಿಸಲಾಗುತ್ತದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಟ್ವೀಟ್‌ ಮಾಡಿದ್ದಾರೆ.

Advertisement

ಅತ್ಯಂತ ಮಹತ್ವದ ನಿರ್ಧಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ವ್ಯಾಪ್ತಿಯಲ್ಲಿ ಇದ್ದ ಮಣಿಪುರ, ಅಸ್ಸಾಂ ಮತ್ತು ನಾಗಾಲ್ಯಾಂಡ್‌ನ‌ ಪ್ರದೇಶಗಳ ಮಿತಿ ತಗ್ಗಿಸಲಾಗುತ್ತದೆ. ಏ.1ರಿಂದ ಹೊಸ ನಿರ್ಧಾರ ಜಾರಿಯಾಗಲಿದೆ. ದಶಕಗಳ ಬಳಿಕ ಇಂಥ ನಿರ್ಧಾರ ಎಂದು ಬರೆದುಕೊಂಡಿದ್ದಾರೆ.

ಕಾಯ್ದೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಸುರಕ್ಷತಾ ವ್ಯವಸ್ಥೆ ಉತ್ತಮವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಉಗ್ರವಾದದ ಛಾಯೆಯ ಬದಲು ನೆಮ್ಮದಿ ಮತ್ತು ಸುರಕ್ಷಿತ ವಾತಾವರಣ ನೆಲೆಸುವಂತೆ ಮಾಡುವುದೇ ಸರಕಾರದ ಆಶಯವಾಗಿದೆ ಎಂದಿದ್ದಾರೆ ಅಮಿತ್‌ ಶಾ. ಅಸ್ಸಾಂನ 23 ಜಿಲ್ಲೆಗಳಿಂದ ಪೂರ್ಣವಾಗಿ, 1 ಜಿಲ್ಲೆಯಿಂದ, ಮಣಿಪುರದ 6, ನಾಗಾಲ್ಯಾಂಡ್‌ನ‌ 7 ಜಿಲ್ಲೆಗಳ ವ್ಯಾಪ್ತಿಯಿಂದ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂಪಡೆಯಲಾಗಿದೆ. ಮೂರು ರಾಜ್ಯಗಳ ಸಿಎಂಗಳು ನಿರ್ಧಾರವನ್ನು ಸ್ವಾಗತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next