Advertisement

ಎಪಿಎಂಸಿ ಅಭಿವೃದ್ಧಿಗೆ ಸರಕಾರ ಬದ್ಧ: ಶೆಟ್ಟರ

01:38 PM Dec 27, 2020 | Suhan S |

ಹುಬ್ಬಳ್ಳಿ: ಎಪಿಎಂಸಿ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಹು-ಧಾ ಮಹಾನಗರ ಪಾಲಿಕೆಯಿಂದ ಎಪಿಎಂಸಿ ವರ್ತಕರಿಗೆ ವಿಧಿಸಲಾಗಿರುವ ಆಸ್ತಿಕರ ಮನ್ನಾ ಮಾಡುವ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಎಪಿಎಂಸಿ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದಅವರು, ಬಹಳ ವರ್ಷಗಳಿಂದ ಎಪಿಎಂಸಿ ಆಸ್ತಿ ಕರ ಬಾಕಿಉಳಿದಿದೆ. ನೀರು, ವಿದ್ಯುತ್‌, ಒಳಚರಂಡಿ ಸೇರಿದಂತೆಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲಎಂದು ಆರೋಪಿಸಿ ವರ್ತಕರು ಕರ ಪಾವತಿ ಮಾಡಿಲ್ಲ.ಈಗ ಬಡ್ಡಿ ಸಹಿತ ಆಸ್ತಿ ಕರ ಮನ್ನಾ ಮಾಡಲು ಸಚಿವಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಿದೆ.ಪಾಲಿಕೆ ಆಯುಕ್ತರು ಈ ಕುರಿತು ಸರಕಾರಕ್ಕೆ ವರದಿಸಲ್ಲಿಸಬೇಕು ಎಂದರು.

ಎಪಿಎಸಿ ಅಂಗಳ ವಿನ್ಯಾಸ ರಚನೆ ಕುರಿತು ಹುಡಾ, ಪಾಲಿಕೆ ಹಾಗೂ ಎಪಿಎಂಸಿ ವರ್ತಕ ಸಂಘದವರು ಒಂದು ಸಾಮಾನ್ಯ ಒಪ್ಪಂದಕ್ಕೆ ಬರಬೇಕು. ಸರಕಾರದ ನಿಯಮಾವಳಿಗಳ ಪಾಲನೆಯಾಗಬೇಕು. ವರ್ತಕರಿಗೆಸೇಲ್‌ಡೀಡ್‌ ಮಾತ್ರ ನೀಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ಆಸ್ತಿ ಪರಭಾರೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಎಪಿಎಂಸಿ ಅಧ್ಯಕ್ಷ ಸಹದೇವ ಸುಡಕೇನವರ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ತಹಶೀಲ್ದಾರ್‌ ರಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ ಸೇರಿದಂತೆ ಎಪಿಎಂಸಿ ಸದಸ್ಯರಾದ ಚನ್ನು ಹೊಸಮನಿ, ಬಸವರಾಜ ಯಕಲಾಸಪೂರ, ಪ್ರಭುದೇವ ಅಂಕಲಕೋಟೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next