Advertisement
ಅಧಿಸೂಚನೆ ಹೊರಬೀಳುವ ಮುನ್ನ, ಯಾವ ರಫ್ತು ಶಿಪ್‌ಮೆಂಟ್‌ಗಳಿಗೆ ಬದಲಾಯಿಸಲಾಗದ ಸಾಲ ಪತ್ರ(ಎಲ್‌ಒಸಿ) ವಿತರಿಸಿಯಾಗಿದೆಯೋ, ಅಂಥ ರಫ್ತಿಗೆ ಅನುಮತಿ ನೀಡಲಾಗಿದೆ. ಜತೆಗೆ ನೆರೆಹೊರೆಯ ಕಡುಬಡ ರಾಷ್ಟ್ರಗಳ ಆಹಾರ ಭದ್ರತಾ ಅಗತ್ಯತೆ ಪೂರೈಸುವ ನಿಟ್ಟಿನಲ್ಲಿ ಸರಕಾರ ಅನುಮತಿ ನೀಡಿದ್ದರೆ, ಅಂಥವುಗಳಿಗೆ ರಫ್ತು ನಿಷೇಧದಿಂದ ವಿನಾಯಿತಿ ನೀಡಲಾಗಿದೆ.
-ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿ ದರ ದಿಢೀರ್ ಹೆಚ್ಚಳವಾಗಿದ್ದು
-ಉತ್ಪಾದನೆಯ ಕೊರತೆ. ಆಹಾರ ನಿಗಮದಲ್ಲಿನ ದಾಸ್ತಾನಿನಲ್ಲಿ ಅಭಾವ
-ದೇಶೀಯವಾಗಿ ಗೋಧಿಯ ದರ ಹೆಚ್ಚಳವನ್ನು ನಿಯಂತ್ರಿಸಲು
-ದೇಶದ ಒಟ್ಟಾರೆ ಆಹಾರ ಭದ್ರತೆಯ ನಿರ್ವಹಣೆ ಮತ್ತು ನೆರೆಯ ಬಡ ರಾಷ್ಟ್ರಗಳಿಗೆ ನೆರವಾಗುವ ಉದ್ದೇಶ
Related Articles
ವಿಶ್ವದ 2ನೇ ಅತೀ ದೊಡ್ಡ ಗೋಧಿ ಉತ್ಪಾದಕ ರಾಷ್ಟ್ರವಾಗಿರುವ ಭಾರತವು ಗೋಧಿಯ ರಫ¤ನ್ನು ನಿಷೇಧಿಸಿರುವುದನ್ನು ಜರ್ಮನಿಯಲ್ಲಿ ನಡೆಯುತ್ತಿ ರುವ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಜಿ-7 ರಾಷ್ಟ್ರಗಳ ಕೃಷಿ ಸಚಿವರು ತೀವ್ರವಾಗಿ ವಿರೋಧಿಸಿದ್ದಾರೆ. ಶೃಂಗಸಭೆಯ ನಡುವೆ ಪತ್ರಿಕಾಗೋಷ್ಠಿ ನಡೆಸಿರುವ ಜರ್ಮನಿಯ ಕೃಷಿ ಸಚಿವರಾದ ಸೆಮ್ ಒಜೆxಮಿರ್, ಪ್ರತಿಯೊಂದು ದೇಶವೂ ತಮ್ಮ ಧಾನ್ಯಗಳ ರಫ್ತಿನ ಮೇಲೆ ಹೀಗೆ ನಿಷೇಧ ಹೇರುತ್ತಾ ಹೋದರೆ, ಜಗತ್ತಿನಲ್ಲಿ ಆಹಾರ ಅಭಾವ ಏರ್ಪಡುತ್ತದೆ ಎಂದಿದ್ದಾರೆ.
Advertisement