Advertisement

ಪಕ್ಷದ ಟ್ವೀಟರ್ ಖಾತೆ ಬ್ಲಾಕ್: ಮೋದಿ ಸರ್ಕಾರದ ಒತ್ತಡದಲ್ಲಿ ಟ್ವೀಟರ್ ಇದೆ : ಕಾಂಗ್ರೆಸ್ ಆರೋಪ

03:10 PM Aug 12, 2021 | Team Udayavani |

ನವ ದೆಹಲಿ : ರಾಷ್ಟ್ರೀಯ ಕಾಂಗ್ರೆಸ್ ನ ಅಧಿಕೃತ ಟ್ವೀಟರ್ ಖಾತೆಯನ್ನು(INCIndia) ಬ್ಲಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ಇಂದು(ಗುರವಾರ, ಆಗಸ್ಟ್ 12) ಆರೋಪ ಮಾಡಿದೆ.

Advertisement

ಪಕ್ಷದ ಅಧಿಕೃತ ಟ್ವೀಟರ್ ಖಾತೆ ಹಾಗೂ ಪಕ್ಷದ ಪ್ರಮುಖ ನಾಯಕರ ಖಾತೆಗಳನ್ನು ಟ್ವೀಟರ್ ಇಂಡಿಯಾ ಬ್ಲಾಕ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಟ್ವೀಟರ್ ಇಂಡಿಯಾ ಈ ಕೆಲಸಕ್ಕೆ ಮಾಡಿದೆ ಎಂದು ಗಂಭೀರ ಆರೋಪ ಮಾಡಿದೆ.

ಇದನ್ನೂ ಓದಿ : ಎರಡು ದಿನಗಳ ಕರಾವಳಿ ಜಿಲ್ಲೆ ಪ್ರವಾಸ : ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ

ಕಳೆದ ವಾರ ಅತ್ಯಾಚಾರ ಮತ್ತು ಕೊಲೆಗೀಡಾದ ದೆಹಲಿಯ ಒಂಬತ್ತು ವರ್ಷದ ದಲಿತ ಬಾಲಕಿಯ ಕುಟುಂಬವನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಕುಟುಂಬಕ್ಕೆ ಸಾಂತ್ವಾನ ಹೇಳುತ್ತಿರುವ ಫೋಟೋವನ್ನು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ರಾಹುಲ್ ಗಾಂಧಿ ಅವರ ಆ ಪೋಸ್ಟ್ ಕಾನೂನಿಗೆ ವಿರುದ‍್ಧವಾಗಿದೆ ಹಾಗೂ ಟ್ವೀಟರ್ ಇಂಡಿಯಾ ಪಾಲಿಸಿಗೆ ವಿರುದ್ಧವಾಗಿದೆ ಎಂಬ ಕಾರಣಕೊಟ್ಟು ರಾಹುಲ್ ಗಾಂಧಿಯವರ ಖಾತೆಯನ್ನು ತಾತ್ಕಾಲಿಕವಾಗಿ ಟ್ವೀಟರ್ ಇಂಡಿಯಾ ಬ್ಲಾಕ್ ಮಾಡಿತ್ತು.

Advertisement

ಇದೇ ಸಮರ್ಥನೆಯನ್ನು ನಿನ್ನೆ(ಬುಧವಾರ, ಆಗಸ್ಟ್  11) ದೆಹಲಿ ಹೈಕೋರ್ಟ್ ಗೆ ಟ್ವೀಟರ್ ಇಂಡಿಯಾ ತಿಳಿಸಿತ್ತು.

ಈ ಬೆನ್ನಿಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವೀಟರ್ ಖಾತೆಯನ್ನು ಕೂಡ ಟ್ವೀಟರ್ ಇಂಡಿಯ ಬ್ಲಾಕ್ ಮಾಡಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆರೋಪಿಸಿದ್ದು, ಇದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒತ್ತಡದಿಂದಲೇ ಟ್ವೀಟರ್ ಈ ಕೆಲಸ ಮಾಡುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ಕಿಡಿ ಕಾರಿದೆ.

ಇದನ್ನೂ ಓದಿ : ಯೋಗರಾಜ್ ಭಟ್ ನಿರ್ಮಾಣದ ‘ಪದವಿ ಪೂರ್ವ’ಕ್ಕೆ ಚಂದನವನದ ಹೊಸ ಕ್ರಶ್ ಸೋನಲ್ ಮೊಂಥೆರೋ ಗೆಸ್ಟ್

Advertisement

Udayavani is now on Telegram. Click here to join our channel and stay updated with the latest news.

Next