Advertisement
ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಯುಪಿಎ ಸರಕಾರವು ಎನ್‌ಡಿಆರ್‌ಎಫ್ ಮೂಲಕ ರಾಜ್ಯಕ್ಕೆೆ ಪರಿಹಾರ ನೀಡಿದ್ದು 3,233 ಕೋ. ರೂ. 2014ರ ಅನಂತರ ಎನ್‌ಡಿಎ ಸರಕಾರ ಎನ್‌ಡಿಆರ್‌ಎಫ್ ಮೂಲಕ 11,603 ಕೋ. ರೂ. ಪರಿಹಾರ ಮೊತ್ತವನ್ನು ನೀಡಿ ರಾಜ್ಯದ ಜನತೆಯ ಸಂಕಷ್ಟಕ್ಕೆೆ ಸ್ಪಂದಿಸಿದೆ. ರಾಜ್ಯದ ಎಸ್‌ಡಿಆರ್‌ಎಫ್‌ಗೆ ಯುಪಿಎ ನೀಡಿದ್ದು 812 ಕೋ. ರೂ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 2,557 ಕೋ. ರೂ. ಪರಿಹಾರ ನೀಡಿದೆ. ಕೇಂದ್ರ ಸರಕಾರವು ರಾಜ್ಯದ ಜನರು, ರೈತರ ಹಿತವನ್ನು ಕಾಪಾಡಿರುವುದು ಇಲಾಖೆಯ ಈ ಅಂಶಗಳೇ ಹೇಳುತ್ತಿವೆ. ಆದರೆ ರಾಜ್ಯ ಸರಕಾರ ಅಲ್ಪಸಂಖ್ಯಾತರಿಗೆ 10 ಸಾವಿರ ಕೋ. ರೂ ಅನುದಾನ ಮೀಸಲಿಡುವ ಹೇಳಿಕೆ ನೀಡಿ ರಾಜ್ಯ ರೈತರನ್ನು ನಿರ್ಲಕ್ಷ್ಯ ಮಾಡುತ್ತಾರೆ. ಬರ ಪರಿಹಾರಕ್ಕೆೆ ಕೇಂದ್ರ ಸರಕಾರವನ್ನು ಟೀಕಿಸುತ್ತ ಜವಾಬ್ಧಾರಿ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವ ಕಾಂಗ್ರೆೆಸ್ ಸರಕಾರವು ಆಡಳಿತ ವ್ಯವಸ್ಥೆೆಯ ಸಾಕಷ್ಟು ಲೋಪ ಒಳಗೊಂಡಿದೆ ಎಂದರು.
ನಮ್ಮ ಪಕ್ಷದ ಸಿದ್ದಾಂತದ ಜೊತೆ ಸುದೀರ್ಘಕಾಲ ಗುರುತಿಸಿಕೊಂಡಿದ್ದ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರಳುತ್ತಾರೆ ಎಂಬ ನಿರೀಕ್ಷೆೆ ಇತ್ತು. ಶೆಟ್ಟರ್‌ರಂತಹ ಸೈದ್ಧಾಂತಿಕ ಹಿನ್ನೆೆಲೆಯವರಿಗೆ ಬೇರೆ ಪಕ್ಷ ಒಗ್ಗುವುದಿಲ್ಲ. ಪಕ್ಷದ ಶಕ್ತಿ ವೃದ್ಧಿಯಾಗುತ್ತದೆ ನಮ್ಮ ವಿಶ್ವಾಸ ಹೆಚ್ಚಾಗಿದೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಶೆಟ್ಟರ್ ಮರು ಸೇರ್ಪಡೆಯಿಂದ ಮತ್ತಷ್ಟು ನಾಯಕರು ಬಿಜೆಪಿಗೆ ಮರಳುತ್ತಾರೆ. ಜನಸಂಘ ಕಾಲದಿಂದಲೂ ಬಿಜೆಪಿಯನ್ನು ಕಟ್ಟಿದವರು ಅವರ ಮರು ಆಗಮನದಿಂದ ಸಮಾಧಾನ, ಸಂತೋಷವಾಗಿದೆ. ಶೆಟ್ಟರ್ ಪಕ್ಷಕ್ಕೆೆ ಮರಳಿದ ಕ್ರೆೆಡಿಟ್ ಪಕ್ಷಕ್ಕೆೆ ಸಲ್ಲುತ್ತದೆ. ಸಣ್ಣಪುಟ್ಟ ಮುನಿಸಿದ್ದರೂ ಸಿದ್ಧಾಂತಕ್ಕೆೆ ಬದ್ಧತೆ ಇದೆ ಎಂಬುದಕ್ಕೆೆ ಶೆಟ್ಟರ್ ಸಾಕ್ಷಿ ಎಂದು ಬಣ್ಣಿಸಿದರು.