Advertisement

ಎಫ್ಡಿಐ ನಿಯಮ ಸಡಿಲಿಕೆಗೆ ಕೇಂದ್ರ ಇಂಗಿತ

09:49 AM Mar 20, 2017 | Team Udayavani |

ಹೊಸದಿಲ್ಲಿ: ಹಿಂದೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ವಿರೋಧಿಸಿದ್ದ ಬಿಜೆಪಿ, ಪ್ರಸ್ತುತ ಎಫ್ಡಿಐ ನಿಯಮಗಳನ್ನು ಸಡಿಲಿಸಿ ವಿದೇಶಿ ಕಂಪೆನಿಗಳು ದೇಶದಲ್ಲಿ ತಮ್ಮ ರಿಟೇಲ್‌ ಮಳಿಗೆ ತೆರೆಯಲು ಅವಕಾಶ ನೀಡಲು ಚಿಂತನೆ ನಡೆಸಿದೆ. ದೇಶದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಅಧಿಕ ಪ್ರಮಾಣದ ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಲು ಮುಂದಾಗಿರುವ ಕೇಂದ್ರ ಸರಕಾರ, ವಿದೇಶಿ ರೀಟೇಲರ್‌ಗಳು ಭಾರತದಲ್ಲಿ ಮಲ್ಟಿ ಬ್ರಾಂಡ್‌ ರಿಟೇಲ್‌ ಮಳಿಗೆಗಳನ್ನು ತೆರೆಯಲು ಅವಕಾಶ ನೀಡುವ ಚಿಂತನೆ ನಡೆಸಿದೆ. ಆದರೆ ಭಾರತದಲ್ಲಿ ಮಳಿಗೆ ಆರಂಭಿಸುವ ವಿದೇಶಿ ಕಂಪೆನಿಗಳು ‘ಮೇಡ್‌ ಇನ್‌ ಇಂಡಿಯಾ’ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸರಕಾರ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next