Advertisement
ಗೃಹ ಕಚೇರಿ ಕೃಷ್ಣಾದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷಿಯನ್ ಗೇಮ್ಸ್, ಪ್ಯಾರಾ ಏಷಿಯನ್ ಗೇಮ್ಸ್ ಹಾಗೂ ಕಾಮನ್‍ವೆಲ್ತ್ ಗೇಮ್ಸ್ಗಳಲ್ಲಿ ಪದಕ ಗೆದ್ದಿದ್ದ ರಾಜ್ಯದ 12 ಕ್ರೀಡಾಪಟುಗಳಿಗೆ ನೇಮಕಾತಿ ಪತ್ರ ಹಸ್ತಾಂತರಿಸಿದರು.
ಕ್ರೀಡಾಪಟುಗಳಿಗೆ ಆದೇಶ ಪತ್ರ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ವಿವಿಧ ಕ್ರೀಡಾಕೂಟಗಳಲ್ಲಿ ಪದಕ ಪಡೆದವರಿಗೆ ರಾಜ್ಯ ಸರ್ಕಾರ ನೆರವಾಗಲಿದೆ. ಅದರಂತೆ ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ನೀಡಲು ತೀರ್ಮಾನಿಸಿದ್ದೇವೆ. ಸುಮಾರು 12 ಜನರಿಗೆ ಅವಕಾಶ ಪತ್ರ ನೇರ ನೇಮಕಾತಿಗೆ ನೀಡುತ್ತಿದ್ದೇವೆ. 2016- 17 ಒಲಿಂಪಿಕ್ಸ್ ಅಸೋಸಿಯೇಷನ್ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವೇಳೆ ಒಲಿಂಪಿಕ್ಸ್, ಏಷ್ಯಾಡ್ ಮತ್ತು ಕಾಮನ್‌ವೆಲ್ತ್‌ನಂತಹ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿ ಒದಗಿಸುವುದಾಗಿ ಘೋಷಣೆ ಮಾಡಿದ್ದೆ.
Related Articles
Advertisement
45 ವರ್ಷಗಳ ವಯೋಮಿತಿ ನಿಗದಿ: ನಾನು ಅಧಿಕಾರಕ್ಕೆ ಬಂದ್ಮೇಲೆ ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಶೇ. 3 ರಷ್ಟು ಮೀಸಲಾತಿ ಹೆಚ್ಚಿಸಿದ್ದೇನೆ. ಅಲ್ಲದೆ ಪದವಿ ಪಡೆದವರಿಗೆ ಗ್ರೂಪ್ ಸಿ ಉದ್ಯೋಗ ನೀಡಲು ತೀರ್ಮಾನ ಮಾಡಿದ್ದೇವೆ. ಅದರಂತೆ 12 ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗ ನೀಡುತ್ತಿದ್ದೇವೆ. ಇದರಲ್ಲಿ ಒಬ್ಬರಿಗೆ ಮಾತ್ರ ಗ್ರೂಪ್ ಎ ಉದ್ಯೋಗ ನೀಡಲಾಗುತ್ತಿದ್ದು, ಬಾಕಿ ಉಳಿದವರಿಗೆ ಗ್ರೂಪ್ ಬಿ ಹುದ್ದೆ ನೀಡುತ್ತಿದ್ದೇವೆ. ಹಾಗೆಯೇ ಉದ್ಯೋಗಕ್ಕೆ ಸೇರಿಕೊಳ್ಳಲು 45 ವರ್ಷಗಳ ವಯೋಮಿತಿ ನಿಗದಿಪಡಿಸಿದ್ದೇವೆ ಎಂದು ಸಿದ್ದರಾಮಯ್ಯ, ಉದ್ಯೋಗ ಪತ್ರ ಪಡೆದ, ಪದಕ ವಿಜೇತರಿಗೆ ತುಂಬು ಹೃದಯದ ಅಭಿನಂದನೆಗಳ ಸಲ್ಲಿಸಿದರು.
ಸರ್ಕಾರಿ ಹುದ್ದೆ ಸಿಕ್ಕಿದ ಕ್ರೀಡಾಪಟುಗಳು: 1. ಗಿರೀಶ್ ಎಚ್.ಎನ್ – ಕ್ಲಾಸ್ ಒನ್ ಆಫೀಸರ್ ಹುದ್ದೆ
2. ದಿವ್ಯಾ.ಟಿ.ಎಸ್ – ಗ್ರೂಪ್ ಬಿ ಹುದ್ದೆ
3. ಉಷಾರಾಣಿ .ಎನ್ – ಗ್ರೂಪ್ ಬಿ
4. ಸುಷ್ಮಿತಾ ಪವಾರ್ – ಗ್ರೂಪ್ ಬಿ
5. ನಿಕ್ಕಿನ್ ತಿಮ್ಮಯ್ಯ ಸಿ.ಎ ಗ್ರೂಪ್ ಬಿ
6. ಎಸ್.ವಿ.ಸುನೀಲ್ ಗ್ರೂಪ್ ಬಿ
7. ಕಿಶನ್ ಗಂಗೊಳ್ಳಿ ಗ್ರೂಪ್ ಬಿ
8. ರಾಘವೇಂದ್ರ ಗ್ರೂಪ್ ಬಿ
9. ರಾಧಾ ವಿ ಗ್ರೂಪ್ ಬಿ
10. ಶರತ್ ಎಂ.ಎಸ್ ಗ್ರೂಪ್ ಬಿ
11. ಗುರುರಾಜ – ಗ್ರೂಪ್ ಬಿ
12. ಮಲಪ್ರಭಾ ಯಲ್ಲಪ್ಪ ಜಾಧವ - ಗ್ರೂಪ್ ಬಿ