Advertisement

ಪ್ರವಾಸಿ ವಾಹನಗಳ ಶುಲ್ಕ ಇಳಿಕೆಗೆ ಪ್ರಸ್ತಾಪ; ಕೇಂದ್ರದಿಂದ ಹೊಸ ಕರಡು ನಿಯಮಗಳ ಬಿಡುಗಡೆ

07:16 PM Nov 15, 2022 | Team Udayavani |

ನವದೆಹಲಿ: ಹೆಚ್ಚು ವರ್ಗೀಕರಣ ಇರುವ ಪ್ರವಾಸಿ ವಾಹನಗಳು, ಕಡಿಮೆ ಪ್ರಯಾಣಿಕರ ಸಾಗಿಸುವ ವಾಹನಗಳಿಗೆ ಪರವಾನಗಿ ಶುಲ್ಕ ಇಳಿಕೆ ಸೇರಿದಂತೆ ಹಲವಾರು ಸುಧಾರಣಾವಾದಿ ಕರಡು ನಿಯಮಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

Advertisement

ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಕರಡು ನಿಯಮಗಳನ್ನು ಪ್ರಕಟಿಸಿದೆ.

ಹೊಸ ನಿಯಮಗಳಿಗೆ ಅಂಗೀಕಾರ ದೊರಕಿದಲ್ಲಿ ಅಖಿಲ ಭಾರತ ಪ್ರವಾಸಿ ವಾಹನ (ಪರವಾನಗಿ )ನಿಯಮಗಳು 2021ರ ಬದಲಾಗಿ ಜಾರಿಯಾಗಲಿದೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.

ಪ್ರವಾಸಿ ಕ್ಷೇತ್ರದ ಉದ್ದಿಮೆದಾರರು ಮತ್ತು ಇತರರು ಕೇಂದ್ರ ಸರ್ಕಾರದ ಹೊಸ ಪ್ರಸ್ತಾಪಕ್ಕೆ ಆಕ್ಷೇಪಗಳು ಅಥವಾ ಸಲಹೆಗಳನ್ನು ಆಹ್ವಾನಿಸಲಾಗಿದೆ. ಅದನ್ನು Joint Secretary (MVL), Ministry of Road Transport and Highways, Transport Bhawan, Parliament Street, New Delhi- 110001 ಅಂಚೆ ಮೂಲಕ, ಇ-ಮೇಲ್‌ comments-morth@gov.in.ಗೆ ಕಳುಹಿಸಬೇಕು ಎಂದೂ ತಿಳಿಸಿದೆ.

ಉದ್ದೇಶಿತ ಬದಲಾವಣೆಗಳು ಹೀಗಿವೆ:
– ಪ್ರವಾಸಿ ವಾಹನಗಳಿಗೆ ಅಖಿಲ ಭಾರತ ವ್ಯಾಪ್ತಿಯಲ್ಲಿ ಪರವಾನಗಿ ನೀಡುವ ವಿಧಾನದಲ್ಲಿ ಸರಳತೆ ಅನುಸರಿಸಲು ಒತ್ತು. ದೇಶಕ್ಕೆ ಅನ್ವಯವಾಗುವಂತೆ ಪ್ರವಾಸಿ ವಾಹನಗಳಿಗೆ ಪರವಾನಗಿ ನೀಡುವ ನೀಡುವ ಅಂಶ ಸ್ವತಂತ್ರವಾಗಿ ಇರಿಸಲಾಗಿದೆ.
– ಹತ್ತಕ್ಕಿಂತ ಕಡಿಮೆ ಮಂದಿ ಪ್ರಯಾಣಿಸುವ ವಾಹನಗಳಿಗೆ ಪರವಾನಗಿ ನೀಡುವಾಗ ಪರವಾನಗಿ ಶುಲ್ಕ ಇಳಿಕೆ ಮಾಡುವ ಪ್ರಸ್ತಾಪ. ಇದರಿಂದಾಗಿ ಸಣ್ಣ ಪ್ರಮಾಣದ ಪ್ರವಾಸಿ ವಾಹನಗಳನ್ನು ನಿರ್ವಹಿಸುವವರಿಗೆ ಆರ್ಥಿಕವಾಗಿ ನೆಮ್ಮದಿ ಸಿಗಲಿದೆ.
– ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ. ಇದರಿಂದ ಪ್ರವಾಸಿ ವಾಹನಗಳನ್ನು ನಿರ್ವಹಿಸುವವರಿಗೆ ಹೆಚ್ಚಿನ ವೆಚ್ಚ ಇಲ್ಲದೆ ನಿರ್ವಹಣೆಗೆ ಅನುಕೂಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next