Advertisement

ವರ್ಷ ಕಳೆದರೂ ಸಾರ್ವಜನಿಕ ಆಸ್ಪತ್ರೆ ದುರಸ್ತಿ ಕಾರ್ಯ ಅಪೂರ್ಣ

04:41 PM Aug 04, 2021 | Team Udayavani |

ಎಚ್‌.ಡಿ.ಕೋಟೆ: ದುರಸ್ತಿ ಉದ್ದೇಶದಿಂದ ಸ್ಥಳಾಂತರಗೊಂಡ ತಾಲೂಕು ಕೇಂದ್ರ ಸ್ಥಾನದ ಸಾರ್ವಜನಿಕ ಆಸ್ಪತ್ರೆ ಸೇವೆ ವರ್ಷ ಕಳೆದರೂ
ಮೂಲ ಆಸ್ಪತ್ರೆಗೆ ಸ್ಥಳಾಂತರಗೊಳ್ಳದೇ ರೋಗಿಗಳು ಪರದಾಡುತ್ತಿದ್ದಾರೆ.

Advertisement

ಕೋಟೆ ಪಟ್ಟಣದಲ್ಲಿದ್ದ ಸಾರ್ವಜನಿಕ ಆಸ್ಪತ್ರೆ ಕಟ್ಟಡ ಶಿಥಿಲಗೊಂಡ ಕಾರಣ 2 ಕೋಟಿ ರೂ. ವೆಚ್ಚದಲ್ಲಿ ದುರಸ್ತಿಗೊಳಿಸಲು ಸರ್ಕಾರದ ಆದೇಶ
ದಂತೆ ಕಳೆದ ಒಂದೂವರೆ ವರ್ಷದ ಹಿಂದೆ ಆಸ್ಪತ್ರೆ ಸೇವೆಯನ್ನು ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.

ತಾಯಿ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆ ಕಟ್ಟಡ ಕೂಡ ಆಗತಾನೆ ನೂತನವಾಗಿ ನಿರ್ಮಾಣಗೊಂಡು ಉದ್ಘಾಟನೆಗೊಳ್ಳುತ್ತಿದ್ದಂತೆಯೇ ಅದೇ ಆಸ್ಪತ್ರೆಗೆ ತಾತ್ಕಾಲಿಕವಾಗಿ ಸಾರ್ವಜನಿಕ ಆಸ್ಪತ್ರೆಕಾ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ತಾಯಿ ಮಕ್ಕಳ ಆರೋಗ್ಯದ ಆಸ್ಪತ್ರೆಯಲ್ಲಿ ಅಂದಿನಿಂದ ಇಂದಿನ ತನಕ ತಾಯಿ ಮತ್ತು ಮಕ್ಕಳಿಗಷ್ಟೇ ಆಸ್ಪತ್ರೆ ಸೀಮಿತವಾಗಿರದೆ ಸಾರ್ವಜನಿಕ ಸೇವೆಯನ್ನೂ ನೀಡಲಾಗುತ್ತಿದೆ. ಇದರಿಂದ ತಾಯಿ ಮಕ್ಕಳ ಆರೈಕೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿಲ್ಲ. ಇಕ್ಕಟ್ಟಾದ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವಾಸ್ತವ್ಯ ಸೇರಿದಂತೆ ವಿಶ್ರಾಂತಿಗೂ
ಕೊಠಡಿಗಳಿಲ್ಲದೆ ಪರಿತಪಿಸುವ ಸ್ಥಿತಿ ಇದೆ. ಇದರಿಂದ ವಿಶಾಲವಾದ ಮೂಲ ಸಾರ್ವಜನಿಕ ಆಸ್ಪತ್ರೆಗೆ ಎಷ್ಟುಬೇಗ ಸೇವೆ ಸ್ಥಳಾಂತರಗೊಳ್ಳುತ್ತದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ:ತಮಿಳುನಾಡಿನ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆಯವರಿಂದ ದಾಳಿ..!

ಕಾಮಗಾರಿ ಪೂರ್ಣವಾದರೂ ಸ್ಥಳಾಂತರ ವಿಳಂಬ: 2 ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ದುರಸ್ತಿ ಕಾಮಗಾರಿ 6 ತಿಂಗಳಲ್ಲಿ ಪೂರ್ಣಗೊಳಿಸಬೇಕೆಂಬ ನಿಯಮ ಇತ್ತು. ಆದರೆ, ಕಾಮಗಾರಿ ಆರಂಭಗೊಂಡು ಒಂದೂವರೆ ವರ್ಷ ಪೂರ್ಣಗೊಳ್ಳುತ್ತಿದ್ದರೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಾ ಬಂತು. ಈಗ ಕಾಮಗಾರಿ ಪೂರ್ಣಗೊಂಡಿದೆಯಾದರೂ ಮೂಲ ಆಸ್ಪತ್ರೆಗೆ ಸಾರ್ವಜನಿಕ ಆಸ್ಪತ್ರೆ ಸೇವೆ ಸ್ಥಳಾಂತರಗೊಂಡಿಲ್ಲ.

Advertisement

ಬೀದಿನಾಯಿಗಳ ಆವಾಸ ಸ್ಥಾನ: ಜನಸಾಮಾನ್ಯರ ಆರೋಗ್ಯಕ್ಕೆ ಆದ್ಯತೆ ನೀಡಬೇಕಾದ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆ ಕಟ್ಟಡದಲ್ಲಿ ಆರೋಗ್ಯ ಸೇವಾ ಕಾರ್ಯ ಆರಂಭಿಸದೇ ಇರುವುದರಿಂದ ಬೀದಿ ನಾಯಿಗಳ ಆವಾಸ ಸ್ಥಾನವಾಗಿದೆ. ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಇತ್ತ ಗಮನ ಹರಿಸಿ ಸಾರ್ವಜನಿಕ ಆಸ್ಪತ್ರೆ ಸೇವೆ ಯನ್ನು ಮೂಲ ಕಟ್ಟಡಕ್ಕೆ ಸ್ಥಳಾಂತರ ಗೊಳಿಸಬೇಕು ಎಂದು ಜೀವಿಕ ಉಮೇಶ್‌ ಸೇರಿದಂತೆ ನಾಗರಿಕರು ಆಗ್ರಹಿಸಿದ್ದಾರೆ.

ಸಾರ್ವಜನಿಕ ಆಸ್ಪತ್ರೆ ನಮಗೆ ಹಸ್ತಾಂತರಿಸಿಲ್ಲ. ಹೀಗಾಗಿ ಅನ್ಯಮಾರ್ಗ ಇಲ್ಲದೆ ತಾಯಿ-ಮಗು ಆಸ್ಪತ್ರೆಯಲ್ಲಿಯೇ ಆರೋಗ್ಯ ಸೇವೆ ನೀಡಬೇಕಾದ ಅನಿವಾರ್ಯತೆ ಇದೆ. ಆಸ್ಪತ್ರೆ ಹಸ್ತಾಂತರಿಸಿದರೆಕೂಡಲೆ ಸೇವೆಕೂಡ ಸ್ಥಳಾಂತರಿಸುತ್ತೇವೆ.
ಡಾ| ಭಾಸ್ಕರ್‌, ಆಡಳಿತಾಧಿಕಾರಿ,
ಸಾರ್ವಜನಿಕ ಆಸ್ಪತ್ರೆ

– ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next