Advertisement
ಇಲ್ಲಿನ ವೈದ್ಯರು ತಿಂಗಳಿಗೆ ಬರೋಬ್ಬರಿ 200 ಮಹಿಳೆಯರಿಗೆ ಸುರಕ್ಷಿತ ಹೆರಿಗೆ ಮಾಡಿಸುತ್ತಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ದುಬಾರಿ ವೆಚ್ಚ ಪಾವತಿಸಬೇಕಾದ ಹೊರೆ ಇಳಿಸಿದ್ದಾರೆ.
Related Articles
Advertisement
ಖಾಸಗಿ ಆಸ್ಪತ್ರೆಗೆ ಕಳುಹಿಸದೇ ನಿರ್ವಹಣೆ: ತಾವರಗೇರಾದ ಯಲ್ಲಮ್ಮ ಎನ್ನುವರಿಗ ಗರ್ಭಚೀಲದಲ್ಲಿ ಬ್ಲಾಕ್ ಇರುವ ಹಿನ್ನೆಲೆಯಲ್ಲಿ ಆಪರೇಷನ್ ಮಾಡಬೇಕಿತ್ತು. ಅದನ್ನು ಇಲ್ಲಿನ ವೈದ್ಯ ಡಾ|ನಾಗರಾಜ್ ಕಾಟವಾ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆ ಬಳಿಕ ಅವ ಧಿ ಪೂರ್ವ ಹೆರಿಗೆ ಹಿನ್ನೆಲೆಯಲ್ಲಿ ಎರಡು ತಿಂಗಳು ಆಸ್ಪತ್ರೆಯಲ್ಲೇ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಕುಷ್ಟಗಿ ತಾಲೂಕಿನ ತಾವರಾಗೇರಾದಿಂದ 40 ಕಿ.ಮೀ. ಬಂದು ಹೋಗುವ ನಡುವೆ ಗರ್ಭಪಾತ ಭೀತಿ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲೇ ದಾಖಲಿಸಿಕೊಳ್ಳಲಾಗಿದೆ. ಯಾದಗಿರಿ ಜಿಲ್ಲೆಯ ಮಮತಾ ಎಂಬುವರನ್ನು ಕೂಡ ಹೆರಿಗೆಯ ರಿಸ್ಕ್ ಗಮನಿಸಿ 2 ತಿಂಗಳಿಂದ ಇಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ.
ಇದನ್ನೂ ಓದಿ :ಕೃಷಿಹೊಂಡದ ನೀರಿನಲ್ಲಿ ಮುಳುಗಿ ನಾಲ್ಕು ವರ್ಷ ಪ್ರಾಯದ ಇಬ್ಬರು ಮಕ್ಕಳ ಸಾವು
ಆರೋಗ್ಯ ಇಲಾಖೆ ಜಂಟಿ ನಿರ್ದೇಶಕರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದಾಗ ಅವಧಿ ಪೂರ್ವ ಹೆರಿಗೆ, ತೀವ್ರ ರಕ್ತಸ್ರಾವ ಪ್ರಕರಣ ಗಮನಿಸಿ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆರಿಗೆಗೆ ಖಾಸಗಿ ಆಸ್ಪತ್ರೆಯೇ ಗತಿ ಎಂಬ ವಾದವನ್ನು ತಳ್ಳಿ ಹಾಕುವುದರ ಮೂಲಕ ಇಲ್ಲಿನ ವೈದ್ಯರು ಬಡವರ ಪಾಲಿಗೆ ಆಶಾಕಿರಣವಾಗಿದ್ದಾರೆ.