Advertisement
ಪ್ರಧಾನಿ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಆದಾಯವನ್ನು ಶೇ. 50ರಷ್ಟು ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿ ಭರವಸೆಗೆ ಪೂರಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕ್ವಿಂಟಾಲ್ ಭತ್ತದ ಬೆಂಬಲ ಬೆಲೆಯನ್ನು 200 ರೂ. ಏರಿಕೆ ಮಾಡಲಾಗಿದ್ದು, ಈಗ ಕ್ವಿಂಟಾಲ್‌ಗೆ 1,570 ರೂ. ಆಗಿದೆ. ಎ ಶ್ರೇಣಿಯ ಭತ್ತಕ್ಕೆ 160 ರೂ. ಏರಿಕೆ ಮಾಡಲಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಈ ಘೋಷಣೆ ಪ್ರಕಟಿಸಿದ್ದು ಅತ್ಯಂತ ಮಹತ್ವದ್ದಾಗಿದೆ. ತೊಗರಿಗೆ 5,450 ರೂ.ಗಳಿಂದ 5,675 ರೂ. ಹಾಗೂ ಹೆಸರು ಕಾಳಿಗೆ 5,575ರಿಂದ 6,975 ರೂ.ಗೆ, ಉದ್ದು 5,400 ರೂ. ಗಳಿಂದ 5,600 ರೂ.ಗೆ ಏರಿಕೆ ಮಾಡಲಾಗಿದೆ.
ದೇಶದ ಇತಿಹಾಸದಲ್ಲೇ ಭತ್ತಕ್ಕೆ ಈ ಪ್ರಮಾಣದಲ್ಲಿ ಬೆಂಬಲ ಬೆಲೆ ಏರಿಕೆಯನ್ನು ಒಂದೇ ವರ್ಷದಲ್ಲಿ ಮಾಡಿದ್ದು ದಾಖಲೆಯಾಗಿದೆ. ಇನ್ನೊಂದೆಡೆ ಈ ಬಾರಿ ಮುಂಗಾರು ಕೂಡ ಉತ್ತಮವಾಗಿದ್ದು ಈಗಾಗಲೇ ಕೃಷಿಯಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. 12,000 ಕೋ.ರೂ. ಹೊರೆ
ಈ ನಿರ್ಧಾರದಿಂದ ಕೇಂದ್ರ ಸರಕಾರಕ್ಕೆ 12,000 ಕೋಟಿ ರೂ. ಹೊರೆಯಾಗಲಿದೆ. ಈ ಹಿಂದೆಯೇ ಬೆಳೆ ಬೆಳೆಯುವ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಕನಿಷ್ಠ ಬೆಲೆ ನಿಗದಿ ಮಾಡುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿತ್ತು. ಅದಕ್ಕೆ ಪೂರಕವಾಗಿ ಸರಕಾರದಿಂದ ಈ ನಿರ್ಧಾರ ಹೊರ
ಬಿದ್ದಿದೆ. ಕೇಂದ್ರ ಸರಕಾರ ರೈತರ ಬಗ್ಗೆ ಕೈಗೊಂಡ ಕ್ರಮಗಳಲ್ಲಿಯೇ ಇದು 2ನೇ ಅತೀ ದೊಡ್ಡದು ಎಂದು ಹೇಳಲಾಗುತ್ತಿದೆ.
Related Articles
ಭತ್ತ ಹಾಗೂ ಇತರ ಧಾನ್ಯಗಳ ಬೆಂಬಲ ಬೆಲೆ ಏರಿಕೆ ಮಾಡಿರುವುದರಿಂದಾಗಿ ಆಹಾರ ಹಣದುಬ್ಬರ ಹೆಚ್ಚುವ ಅಪಾಯ ಇದೆ. ಆದರೆ ಇದು ತಾತ್ಕಾಲಿಕವಾಗಿರುತ್ತದೆ ಮತ್ತು ಗ್ರಾಮೀಣ ಭಾಗದಲ್ಲಿ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಹಣದುಬ್ಬರ ದೀರ್ಘಾವಧಿಯಲ್ಲಿ ಸ್ಥಿರ
ವಾಗುತ್ತದೆ ಎಂದು ಹೇಳಲಾಗಿದೆ.
Advertisement
ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಉತ್ಪಾದನಾ ವೆಚ್ಚದ ಶೇ. 1.5ರಷ್ಟು ಹೆಚ್ಚಿನ ಪ್ರಮಾಣದ ಬೆಂಬಲ ನೀಡುತ್ತೇವೆ ಎಂದು ಹೇಳಿದ ಮಾತನ್ನು ಪೂರೈಸಿದಂತಾಗಿದೆ. ಈ ಕ್ರಮ ನಿಜಕ್ಕೂ ಐತಿಹಾಸಿಕ.
ನರೇಂದ್ರ ಮೋದಿ, ಪ್ರಧಾನಮಂತ್ರಿ ಭತ್ತ, ತೊಗರಿ, ರಾಗಿ ಸಹಿತ ಮುಂಗಾರಿನ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಸಿ ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ.
ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ