Advertisement

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

08:48 PM Nov 29, 2021 | Team Udayavani |

ನವದೆಹಲಿ: ದೇಶದಲ್ಲಿ ಆರೋಗ್ಯ ವ್ಯವಸ್ಥೆಗೆ ಕೇಂದ್ರ ಸರ್ಕಾರ ಮಾಡುವ ವೆಚ್ಚದ ಪ್ರಮಾಣ ಹೆಚ್ಚಾಗಿದೆ.

Advertisement

ಆರೋಗ್ಯ ವೆಚ್ಚದ ಪ್ರಮಾಣ 2013-14ಕ್ಕೆ ದೇಶದ ಜಿಡಿಪಿ ( ಒಟ್ಟು ದೇಶೀಯ ಉತ್ಪನ್ನ)ಯ ಶೇ.1.15ರಷ್ಟಿತ್ತು. ಅದು 2017-18ರ ವೇಳೆಗೆ ಶೇ.1.35ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಲೆಕ್ಕಪತ್ರ ಅಂದಾಜು (ಎನ್‌ಎಚ್‌ಎಇ) ಸಮಿತಿ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2013-14ನೇ ಸಾಲಿನಿಂದ 2017-18ನೇ ಅವಧಿಯಲ್ಲಿ ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ವೆಚ್ಚ ಮಾಡುವ ಮೊತ್ತ 2,336 ರೂ.ಗಳಿಂದ 2,097 ರೂ.ಗಳಿಗೆ ಇಳಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಸಂಸದೆಯರೊಂದಿಗಿನ ಟ್ವೀಟ್ ವೈರಲ್: ಶಶಿ ತರೂರ್ ಕ್ಷಮೆ ಕೇಳಿದ್ದೇಕೆ ?

ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರ (ಎನ್‌ಎಚ್‌ಎಸ್‌ಆರ್‌ಸಿ) 2014ರಿಂದ ಈ ವರದಿಯನ್ನು ಸಿದ್ಧಪಡಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಅನ್ವಯ ಲೆಕ್ಕಪತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next