Advertisement
ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರೋದ್ಯಮದ ಗಣ್ಯರ ಜತೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಈ ವಿಷಯ ತಿಳಿಸಿದ್ದಾರೆ.
Related Articles
Advertisement
ಯಾವುದೇ ಉದ್ಯಮ ಹಾಗೂ ವ್ಯಕ್ತಿಗೆ ನಷ್ಟವಾಗಬಾರದೆಂಬ ಉದ್ದೇಶದಿಂದ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆಂದು ವಾಣಿಜ್ಯ ಇಲಾಖೆಯವರು ಹೇಳಿದ್ದಾರೆ. ಸಿನಿಮಾ ಮಂದಿರಗಳಿಗೆ ಹೋಗುವ ಜನರು ಮಾಸ್ಕ್ ಹಾಕಬೇಕು ಎಂದರು.
ಸಿನಿಮಾ ಮಂದಿರದ ಒಳಗೆ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಹೋಗವುದು ನಿಷಿದ್ದ. ಇದಕ್ಕೆ ಸಂಬಂಧಿಸಪಟ್ಟ ಅಧಿಕಾರಿಗಳು ಯಾವಾಗ ಬೇಕಾದರೂ ಹೋಗಿ ತಪಾಸಣೆ ಮಾಡಬಹುದು ಎಂದು ಹೇಳಿದರು.
ಇದನ್ನೂ ಓದಿ:ನೂರರ ನಿರೀಕ್ಷೆಯಲ್ಲಿ ಚಿತ್ರರಂಗ: ತೆರೆಮರೆಯಲ್ಲಿ ಬಿಡುಗಡೆ ತಯಾರಿ ಜೋರು
ಸಭೆ ಸಮಾರಂಭಗಳಲ್ಲಿ ಯಾವುದೇ ರೀತಿಯಲ್ಲೂ ಬದಲಾವಣೆ ಇಲ್ಲ. ಇರುವಂತಹ ನಿಯಮಗಳು ಯಥಾವತ್ತಾಗಿ ಮುಂದುವರಿಕೆಯಾಗುತ್ತದೆ. ಸಿನಿಮಾ ಮಂದಿರ, ಯೋಗ ಸೆಂಟರ್, ಸಿಮ್ಮಿಂಗ್ , ಜಿಮ್ ಸೆಂಟರ್ ಗಳಲ್ಲಿ ಯಾವುದೇ ಒಬ್ಬ ವ್ಯಕ್ತಿ ಪ್ರವೇಶ ಮಾಡಲು ಎರಡು ಡೋಸ್ ಲಸಿಕೆ ಕಡ್ಡಾಯ. ಇಲ್ಲವಾದರೆ ಪ್ರವೇಶ ಇಲ್ಲ ಎಂದು ತಿಳಿಸಿದರು.