ಮುಂಬಯಿ: ಟಿಲಾಪಿಯಾ ಮೀನು(ಜಲೇಬಿ ಮೀನು) ವಿಶ್ವದಲ್ಲಿಯೇ ಅತಿ ಹೆಚ್ಚು ಬೇಡಿಕೆಯಿರುವ ಮೀನುಗಳಲ್ಲಿ ಒಂದಾಗಿದ್ದು, ಇದರ ರಫ್ತು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ. ಅದಕ್ಕೆಂದೇ ಮಹಾರಾಷ್ಟ್ರದ ಮುಂಬಯಿಯ ಫೌಂಟೇನ್‌ಹೆಡ್ ಅಗ್ರೋ ಫಾಮ್ಸ್ì ಪ್ರೈ. ಲಿ. ಸಂಸ್ಥೆಗೆ ಧನ ಸಹಾಯ ಮಾಡುವುದಕ್ಕೂ ಸರಕಾರ ಸಿದ್ಧವಾಗಿದೆ.
ಫೌಂಟೇನ್‌ಹೆಡ್ ಸಂಸ್ಥೆಯು ಇಸ್ರೇಲಿ ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಜಲೇಬಿ ಮೀನು ಕೃಷಿಗೆ ಯೋಜನೆಯೊಂದನ್ನು ಹಾಕಿ ಕೊಂಡಿದೆ. 29.78 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಅದಕ್ಕೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಡಿಟಿಎಸ್) 8.42 ಕೋಟಿ ರೂ. ಸಾಲ ನೀಡಲಿದೆ.
ವಿಶೇಷವೆಂದರೆ ಫೌಂಟೇನ್‌ಹೆಡ್ ಸಂಸ್ಥೆ ಯು ಈ ಇಸ್ರೇಲಿ ಜಲೇಬಿ ಮೀನುಗಳ ತಳಿ ಸಂವರ್ಧನೆಯಿಂದ ಹಿಡಿದು ಮೀನುಗಳ ಸಂಪೂರ್ಣ ಕೃಷಿಯನ್ನು ಕರ್ನಾಟಕದ ಮುಧೋಳದಲ್ಲಿ ಮಾಡಲಿದೆ. ಒಟ್ಟು 500 ಟನ್ ಜಲೇಬಿ ಮೀನನ್ನು ಬೆಳೆಸುವ ಗುರಿ ಹಾಕಿಕೊಳ್ಳಲಾಗಿದೆ. ಇಸ್ರೇಲ್‌ನ ನಿರ್ ಡೇವಿಡ್ ಫಿಶ್ ಬ್ರಿಡಿಂಗ್ ಫಾರ್ಮ್ನಿಂದ ತರಲಾಗಿ ರುವ ಜಲೇಬಿಯ ಹರ್ಮನ್ ಜಾತಿಯ ಮೀನಿನಿಂದ ತಳಿ ಸಂವರ್ಧನೆ ಮಾಡಲಾಗು ವುದು ಎಂದು ತಿಳಿಸಲಾಗಿದೆ.
ತಳಿ ವಿಶೇಷ: ಈ ಹರ್ಮನ್ ಜಾತಿಯು ಜಲೇಬಿಯ ಓರಿಯೊಕ್ರೊಮಿಸ್ ನಿಲೊಟಿಕಸ್(ಗಂಡು) ಮತ್ತು ಓರಿಯೊಕ್ರೊಮಿಸ್ ಆರಿ ಯಸ್(ಹೆಣ್ಣು) ತಳಿಯಿಂದ ತಯಾರಿಸಲಾಗಿ ರುವ ವಿಶೇಷ ತಳಿಯಾಗಿದೆ. ಈ ತಳಿಯು ಅತ್ಯಂತ ವಿಶೇಷವಾಗಿದ್ದು, ಹೆಚ್ಚು ಬೆಳವಣಿಗೆ ಯಾಗಬಲ್ಲದ್ದಾಗಿದೆ. ಅತ್ಯಾಕರ್ಷಕ ತಿಳಿ ಬಣ್ಣ ದಲ್ಲಿರುವ ಈ ತಳಿಯ ಮೀನುಗಳು ಕಡಿಮೆ ತಾಪಮಾನವನ್ನೂ ತಡೆದುಕೊಳ್ಳಬಲ್ಲದು.