Advertisement

ರಿಟರ್ನ್ಸ್ ಸಲ್ಲಿಕೆ ಅವಧಿ ಆ.31ಕ್ಕೆ ವಿಸ್ತರಣೆ

06:00 AM Jul 27, 2018 | |

ಹೊಸದಿಲ್ಲಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವ ದಿನಾಂಕವನ್ನು ಆ.31ರ ವರೆಗೆ ವಿಸ್ತರಿಸ ಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಗುರುವಾರ ಹೇಳಿದೆ. ಸದ್ಯದ ಕೊನೆಯ ದಿನಾಂಕ ಜು.31 ಆಗಿತ್ತು. ಆ. 31ರ ಒಳಗಾಗಿಯೂ ರಿಟರ್ನ್ಸ್ ಸಲ್ಲಿಸ ದಿದ್ದರೆ ದಂಡ ಪಾವತಿ ಮಾಡ ಬೇಕಾಗುತ್ತದೆ ಎಂದಿದೆ ಮಂಡಳಿ. 5 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಇರುವವರಿಗೆ ದಂಡ ಮಿತಿ 1 ಸಾವಿರ ರೂ. ಎಂದು ನಿಗದಿ ಮಾಡಲಾಗಿದೆ. ಎ. 5ರಂದು ಹೊಸ ಮಾದರಿಯ ತೆರಿಗೆ ರಿಟರ್ನ್ಸ್ ಫಾರಂಗಳನ್ನು ಸಿಬಿಡಿಟಿ ಬಿಡುಗಡೆ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next