Advertisement

ಕಾಶ್ಮೀರದ ಒಳನಾಡಿನಿಂದ ಸೇನೆ ವಾಪಸ್‌? ಹಂತ ಹಂತವಾಗಿ ಸೇನೆ ವಾಪಸಾತಿಗೆ ಕೇಂದ್ರ ಚಿಂತನೆ

08:21 PM Feb 20, 2023 | Team Udayavani |

ನವದೆಹಲಿ:ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಮೂರೂವರೆ ವರ್ಷಗಳ ಬಳಿಕ ಈಗ ಕೇಂದ್ರ ಸರ್ಕಾರವು ಮತ್ತೂಂದು ಮಹತ್ವದ ನಿರ್ಧಾರವನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ. ಕಣಿವೆಯ ಒಳನಾಡು ಪ್ರದೇಶದಿಂದ ಹಂತ ಹಂತವಾಗಿ ಭಾರತೀಯ ಸೇನೆಯನ್ನು ವಾಪಸ್‌ ಪಡೆಯುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

Advertisement

ಈ ಪ್ರಸ್ತಾಪಕ್ಕೆ ಒಪ್ಪಿಗೆ ಸಿಕ್ಕರೆ, ಕೇವಲ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯಲ್ಲಿ ಮಾತ್ರವೇ ಸೇನೆಯ ನಿಯೋಜನೆ ಮುಂದುವರಿಯಲಿದೆ.

ಜಮ್ಮು ಮತ್ತು ಕಾಶ್ಮೀರದ ಒಳನಾಡು ಪ್ರದೇಶಗಳಲ್ಲಿ ಯೋಧರ ನಿಯೋಜನೆ ರದ್ದಾಗಲಿದೆ. ಈ ಕುರಿತು ಕಳೆದ 2 ವರ್ಷಗಳಿಂದಲೇ ರಕ್ಷಣಾ ಇಲಾಖೆ, ಕೇಂದ್ರ ಗೃಹ ಇಲಾಖೆ, ಸಶಸ್ತ್ರ ಪಡೆಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ನಡುವೆ ಚರ್ಚೆ ನಡೆಯುತ್ತಿದ್ದು, ಈಗ ಅಂತಿಮ ರೂಪ ಪಡೆಯುತ್ತಿದೆ ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ. ವಿಶೇಷ ಸ್ಥಾನಮಾನ ರದ್ದು ಮಾಡುವ ವೇಳೆ ಹೆಚ್ಚುವರಿ ಸೇನೆಯನ್ನು ಕಾಶ್ಮೀರದ ಒಳನಾಡು ಪ್ರದೇಶಗಳಿಗೆ ರವಾನಿಸಲಾಗಿತ್ತು.

ಸೇನೆ ಬದಲು ಸಿಆರ್‌ಪಿಎಫ್:
ಕಣಿವೆಯಿಂದ ಸೇನೆಯನ್ನು ವಾಪಸ್‌ ಕರೆಸಿಕೊಂಡ ಬಳಿಕ, ಒಳನಾಡಲ್ಲಿ ಕಾನೂನು-ಸುವ್ಯವಸ್ಥೆ ಮತ್ತು ಉಗ್ರ ನಿಗ್ರಹ ಕಾರ್ಯಾಚರಣೆಗಳ ಹೊಣೆ ಸಿಆರ್‌ಪಿಎಫ್ಗೆ ವಹಿಸಲಾಗುತ್ತದೆ ಎಂದು ಹೇಳಲಾಗಿದೆ. ಕಾಶ್ಮೀರವು ಸಹಜ ಸ್ಥಿತಿಗೆ ಬಂದಿದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ಹೇಳುತ್ತಿದೆ. 2018ಕ್ಕೆ ಹೋಲಿಸಿದರೆ 2019ರ ಆಗಸ್ಟ್‌ 5ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ, ಭದ್ರತಾ ಪಡೆಗಳ ಹತ್ಯೆ ಪ್ರಕರಣಗಳು ಶೇ.50ರಷ್ಟು ಕಡಿಮೆಯಾಗಿದೆ ಎಂದೂ ಸರ್ಕಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೇನೆ ವಾಪಸಾತಿಗೆ ಯೋಜಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲ್ಪಟ್ಟಿರುವ ಯೋಧರು- 1.3 ಲಕ್ಷ
ಈ ಪೈಕಿ ಗಡಿಯಲ್ಲಿ ನಿಯೋಜಿತರಾದವರು – 80,000
ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವವರು- 45,000
ಕಣಿವೆಯಲ್ಲಿ ನಿಯೋಜಿತರಾಗಿರುವ ಸಿಆರ್‌ಪಿಎಫ್ ಯೋಧರು- 60,000
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸಂಖ್ಯೆ- 83,000

Advertisement

 

 

 

Advertisement

Udayavani is now on Telegram. Click here to join our channel and stay updated with the latest news.

Next