Advertisement

ಮುಂದುವರಿದ ಮುಷ್ಕರ: ರಸ್ತೆಗಿಳಿದ 9 ಸರ್ಕಾರಿ ಬಸ್‌

12:13 PM Apr 10, 2021 | Team Udayavani |

ರಾಮನಗರ: ಕೆ.ಎಸ್‌.ಆರ್‌.ಟಿ.ಸಿ. ನೌಕರರ ಮುಷ್ಕರ ಶುಕ್ರವಾರ 3ನೇ ದಿನಕ್ಕೆ ಕಾಲಿಟ್ಟಿದ್ದು,ಖಾಸಗಿ ಬಸ್‌, ಕ್ಯಾಬ್‌ಗಳ ಜೊತೆಗೆ ಜಿಲ್ಲೆಯಲ್ಲಿ 9 ಸರ್ಕಾರಿ ಬಸ್‌ಗಳು ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದವು.

Advertisement

ಶುಕ್ರವಾರ ರಾಮನಗರ ವಿಭಾಗದಿಂದ ಒಟ್ಟು 9 ಸಾರಿಗೆ ಬಸ್‌ಗಳು 18 ಮಂದಿ ಸಿಬ್ಬಂ ದಿಯಿಂದ ಸಂಚಾರ ನಡೆಸಿದವು. ರಾಮನಗರ ಡಿಪೋದಿಂದ 5, ಆನೇಕಲ್‌ ಡಿಪೋದಿಂದ 2 ಹಾಗೂ ಹಾರೋಹಳ್ಳಿ, ಚನ್ನಪಟ್ಟಣ ಡಿಪೋಗಳಿಂದ ತಲಾ 1 ಬಸ್‌ ಸಂಚಾರ ನಡೆಸಿದವು.ಶುಕ್ರವಾರ ರಸ್ತೆಗಳಿದ ಸಾರಿಗೆ ಬಸ್‌ಗಳಲ್ಲಿ ನಿರ್ವಾಹಕರು, ಚಾಲಕರಾಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್‌, ಸಂಚಾರ ನಿಯಂತ್ರಕರು,ಜೀಪ್‌ ಚಾಲಕರು ಸೇರಿದಂತೆ ಕಚೇರಿಯಲ್ಲಿ ಬೇರೆ ಬೇರೆ ಹುದ್ದೆಗಳನ್ನು ನಿಭಾಯಿಸುತ್ತಿದ್ದವರು ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡರು.

ರಾಮನಗರ ಬಸ್‌ ನಿಲ್ದಾಣದಿಂದ ಚನ್ನಪಟ್ಟಣ, ಮಾಗಡಿ, ಕನಕಪುರ, ಬಿಡದಿ ಹಾಗೂಆನೇಕಲ್‌ ಬಸ್‌ ನಿಲ್ದಾಣದಿಂದ ಹೊಸೂರುಮಾರ್ಗದಲ್ಲಿ ಬಸ್‌ಗಳು ಸಂಚರಿಸಿದವು. ಈ ಬಸ್‌ಗಳಲ್ಲಿ ಪ್ರಯಾಣಿಕರು ಸಂಖ್ಯೆ ವಿರಳವಾಗಿತ್ತು ಎಂದು ಗೊತ್ತಾಗಿದೆ.

ಗ್ರಾಮೀಣ ಭಾಗದ ಪ್ರಯಾಣಿಕರ ಪರದಾಟ: ಜಿಲ್ಲೆಯ ಗ್ರಾಮೀಣ ಭಾಗಗಳಸಾರ್ವಜನಿಕರು ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಸಾರಿಗೆನೌಕರರ ಮುಷ್ಕರ ಕಾರಣ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಗ್ರಾಮೀಣ ಭಾಗಗಳಲ್ಲಿ ಸಂಚಾರ ನಡೆಸುತ್ತಿದ್ದ ಖಾಸಗಿ ಬಸ್‌ಗಳು ಗ್ರಾಮೀಣ ಭಾಗಗಳಿಗಿಂತ ತಾಲೂಕು ಕೇಂದ್ರಗಳು ಮತ್ತು ಬೆಂಗಳೂರು, ಮಂಡ್ಯ ಮುಂತಾದನಗರಗಳ ಕಡೆ ಮುಖಮಾಡಿವೆ. ಹೀಗಾಗಿಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೆ ಜನ ಪರದಾಡುತ್ತಿದ್ದಾರೆ.

ಖಾಸಗಿ ಬಸ್‌ಗಳು, ಕ್ಯಾಬ್‌ಗಳು ಲಭ್ಯವಿದ್ದರೂ, ಪ್ರಯಾಣಿಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಖಾಸಗಿ ಬಸ್‌ಗಳಲ್ಲಿಜನ ತುಂಬುವವರೆಗೂ ನಿಲ್ದಾಣ ಬಡುತ್ತಿಲ್ಲ.ಹೀಗಾಗಿ ತಾವು ನಿಗದಿತ ಸ್ಥಳಗಳಿಗೆ ಹೋಗುವುದು ತಡವಾಗುತ್ತಿದೆ. ಬಸ್‌ ನಿಲ್ದಾಣದಲ್ಲಿದ್ದಾಗ ಒಂದು ದರ ಹೇಳುವ ಸಿಬ್ಬಂದಿ, ಬಸ್‌ಹೊರಟ ನಂತರ ಮತ್ತೂಂದು ದರ ವಿಧಿಸುವ ದೂರು ಕೇಳಿ ಬಂದಿವೆ.

Advertisement

ಎರಡನೇ ಶನಿವಾರ ಸರ್ಕಾರಿ ರಜಾ ದಿನತದನಂತರ ಭಾನುವಾರ ನಂತರ ಯುಗಾದಿಹಬ್ಬ ಹೀಗೆ ಸಾಲು ರಜೆ ಇರುವುದರಿಂದಶುಕ್ರವಾರ ಸಂಜೆ ಪ್ರಯಾಣಿಕರ ಸಂಖ್ಯೆಯಲ್ಲಿಹೆಚ್ಚಳವಾಗಿತ್ತು. ಬೆಂಗಳೂರಿನಿಂದ ಬರುತ್ತಿದ್ದಬಸ್‌, ಕ್ಯಾಬ್‌ಗಳು ಪ್ರಯಾಣಿಕರಿಂದ ತುಂಬಿದ್ದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next