ನವದೆಹಲಿ: ಚಿಲ್ಲರೆ ಮತ್ತು ಸಗಟು ಮಾರಾಟ ಕ್ಷೇತ್ರವನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ಗಳ ಕ್ಷೇತ್ರಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಘೋಷಿಸಿದ್ದಾರೆ.
ಇದನ್ನೂ ಓದಿ:ಸದ್ಯ ಜೀವಿಸುವುದೇ ಪ್ರಧಾನ ಅನಂತರವೇ ದೇವರ ಚಿಂತನೆ : Madras High Court
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, “ಇದರಿಂದ ಚಿಲ್ಲರೆ ಮತ್ತು ಸಗಟು ಮಾರಾಟ ಕ್ಷೇತ್ರವೂ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾವಳಿಗಳ ಪ್ರಕಾರ ಸಾಲ ನೀಡಿಕೆಗೆ ಆದ್ಯತೆಯ ವಲಯವಾಗಿ ಗುರುತಿಸಿಕೊಳ್ಳಲಿದೆ ಎಂದಿದ್ದಾರೆ.
ಅಲ್ಲದೆ, “ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ನಮ್ಮ ಸರ್ಕಾರ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ (ಎಂಎಸ್‌ಎಂಇ) ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕಟಿಬದ್ಧವಾಗಿದೆ. ಆ ಮೂಲಕ ಆರ್ಥಿಕ ಬೆಳವಣಿಗೆಗೂ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ” ಎಂದು ಟ್ವೀಟ್‌ನಲ್ಲಿ ವಿವರಿಸಿದ್ದಾರೆ.
ಚಿಲ್ಲರೆ ಹಾಗೂ ಸಗಟು ಮಾರಾಟ ವ್ಯವಹಾರಗಳನ್ನುಎಂಎಸ್‌ಎಂಇ ವ್ಯಾಪ್ತಿಗೆ ಸೇರಿಸುವ ಬಗ್ಗೆಈಹಿಂದೆಯೇ ನಿರ್ಧರಿಸಲಾಗಿತ್ತಾದರೂ, 2017ರ ಗೆಜೆಟ್ ಪ್ರಕಟಣೆಯಲ್ಲಿಅವನ್ನು ಎಂಎಸ್ ಎಂಇವ್ಯಾಪ್ತಿಯಿಂದಹೊರಗಿಡುವುದಾಗಿ ಪ್ರಕಟಿಸಲಾಗಿತ್ತು. ಅವು ಉತ್ಪಾದನಾ ಘಟಕಗಳೂ ಅಲ್ಲ ಹಾಗೂ ಸೇವಾ ವಲಯಕ್ಕೂ ಒಳಪಡುವುದಿಲ್ಲ. ಹಾಗಾಗಿ, ಸೂಕ್ಷ್ಮ, ಸಣ್ಣ ಅಥವಾ ಮಧ್ಯಮ ಕೈಗಾರಿಗೆಗಳ ನೋಂದಾವಣಿಗೆ ಬೇಕಾಗುವ ಉದ್ಯೋಗ್ ಆಧಾರ್ ಮೆಮೊರಂಡಮ್ ಸಿಗುವುದಿಲ್ಲ ಎಂದು ಗೆಜೆಟ್‌ನಲ್ಲಿ ಹೇಳಲಾಗಿತ್ತು.