Advertisement

ಕೃತಕ ದರ ಆಮದು ರಾಷ್ಟ್ರಗಳಿಗೆ ಹೊರೆ

07:00 AM Apr 12, 2018 | |

ಹೊಸದಿಲ್ಲಿ: “ಪೆಟ್ರೋಲ್‌, ಡೀಸೆ‌ಲ್‌ನಂಥ ಇಂಧನಗಳ ದರ ನಿಗದಿ ಜವಾಬ್ದಾರಿಯುತವಾಗಿ ಆಗಬೇಕಿದೆ. ಎಲ್ಲರಿಗೂ ಅಗ್ಗದ ದರದಲ್ಲಿ ಇಂಧನ ಕೈಸೇರುವಂತೆ ದರ ನಿಗದಿಯಾಗಬೇಕಿದೆ. ಜಾಗತಿಕ ಮಟ್ಟದಲ್ಲಿ ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ. ಜತೆಗೆ ಕೃತಕ ದರ ನಿಗದಿಯಿಂದ ಆಮದು ರಾಷ್ಟ್ರಗಳಿಗೆ ಹೊರೆಯಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಸೌದಿ ಅರೆಬಿಯಾ, ಇರಾನ್‌, ಕತಾರ್‌ ಸೇರಿದಂತೆ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಒಕ್ಕೂಟ (ಒಪಿಇಸಿ)ದ ಪ್ರತಿನಿಧಿಗಳು ಪಾಲ್ಗೊಂಡಿದ್ದ 16ನೇ ಅಂತಾರಾಷ್ಟ್ರೀಯ ಎನರ್ಜಿ ಫೋರಂ (ಐಇಎಫ್) ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಪ್ರತಿಯೊಬ್ಬ ಗ್ರಾಹಕ ಹಾಗೂ ಪೂರೈಕೆದಾರನ ಬೇಡಿಕೆಗೆ ಅನುಗುಣವಾಗಿ, ಅಗ್ಗದ ದರ ನಿಗದಿಯಾಗುವಂತೆ ಒಮ್ಮತದ ನಿರ್ಧಾರಕ್ಕೆ ಬರಬೇಕು. ಜತೆಗೆ ದರದಲ್ಲಿ ಸಮತೋಲನ ಕಾಪಾಡಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಹೆಜ್ಜೆ ಇಡಬೇಕಾದ ಅಗತ್ಯವಿದೆ. ಕೃತಕವಾಗಿ ದರ ನಿಗದಿ ಮಾಡುವುದರಿಂದ ಇಂಧನಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಿಗೆ ಭಾರೀ ಹೊರೆಯಾಗಲಿದೆ ಎಂದಿದ್ದಾರೆ. ತೈಲ ಮತ್ತು ಅನಿಲ ಉತ್ಪಾದನಾ ಕ್ಷೇತ್ರದಲ್ಲಿ ಪಾರದರ್ಶಕ ಹಾಗೂ ಸುಲಭವಾಗಿ ಲಭ್ಯವಾಗಬಲ್ಲ ಮಾರುಕಟ್ಟೆ ನಿರ್ಮಾಣಗೊಳ್ಳಬೇಕಿದೆ ಎಂದೂ ಹೇಳಿದ್ದಾರೆ.

Advertisement

ಪೆಟ್ರೋಲ್‌, ಡೀಸೆಲ್‌ ದರ ಇನ್ನಷ್ಟು ಏರಿಕೆ ಇಲ್ಲ
ಪೆಟ್ರೋಲ್‌, ಡೀಸೆಲ್‌ ಸಗಟು ಮಾರಾಟದ ಬೆಲೆಗಳನ್ನು ಈಗಿರುವುದಕ್ಕಿಂತ ಜಾಸ್ತಿ ಏರಿಸದಂತೆ ದೇಶದ ತೈಲೋತ್ಪನ್ನ ಮಾರಾಟ ಸಂಸ್ಥೆಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ ಎಂದು ಬ್ಲೂಂಬ ರ್ಗ್‌ ವರದಿ ಮಾಡಿ ದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ್‌, ಹಿಂದೂಸ್ತಾನ್‌ ಪೆಟ್ರೋಲಿಯಂ ಸಂಸ್ಥೆಗಳು ಸರಕಾರದ ಸೂಚನೆ ಬಗ್ಗೆ  ಮಾಹಿತಿ ಇಲ್ಲ ಎಂದಿವೆ.

ದರ ಯಥಾಸ್ಥಿತಿ ಅವಶ್ಯ ಏಕೆ?: ದಕ್ಷಿಣ ಏಷ್ಯಾ ದಲ್ಲೇ ಇಂಧನ ಅತಿ ದುಬಾರಿ ಬೆಲೆಗೆ ಮಾರಾಟ ವಾಗುವ ರಾಷ್ಟ್ರವೆಂಬ ಕುಖ್ಯಾತಿಗೆ ಭಾರತ ಪಾತ್ರವಾಗಿದೆ. 2014ನ ನವೆಂಬರ್‌ನಿಂದ 2016ರ ಜನವರಿವರೆಗೆ ಜಾಗತಿಕ ತೈಲ ಬೆಲೆ ಕುಸಿಯುತ್ತಿದ್ದರೂ, ಭಾರತ ತೈಲ ಮೇಲಿನ ಅಬಕಾರಿ ಸುಂಕವನ್ನು 9 ಬಾರಿ ಏರಿಸಿದೆ. ಇದೀಗ, ಸರಕಾರದ ಸೂಚನೆಯಿಂದಾಗಿ, ಪ್ರತಿ ಲೀ.ಗೆ ಏನಿಲ್ಲವೆಂದರೂ 1 ರೂ. ನಷ್ಟವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next