Advertisement
2007ರ ಹಣಕಾಸು ಕಾಯ್ದೆ ಪ್ರಕಾರ ಜಾರಿಗೊಳಿಸಲಾಗಿರುವ ಶಿಕ್ಷಣ ಮತ್ತು ಆರೋಗ್ಯ ಸೆಸ್ ಮೂಲಕ ಸಂಗ್ರಹವಾಗುವ ಹಣವನ್ನು ಈ ನಿಧಿಯಲ್ಲಿ ಸಂಗ್ರಹಿಸಲಾಗುತ್ತದೆ. ಅದನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ), ಆಯುಷ್ಮಾನ್ ಭಾರತ್ – ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು (AB-HWC), ರಾಷ್ಟ್ರೀಯ ಆರೋಗ್ಯ ಮಿಷನ್, ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ), ತುರ್ತು ಚಿಕಿತ್ಸೆ, ಪ್ರಕೃತಿ ವಿಕೋಪ ಸಿದ್ಧತೆ-ಆರೋಗ್ಯ ತುರ್ತು ಸಂದರ್ಭಗಳ ಸ್ಪಂದನೆ ಹಾಗೂ ಭವಿಷ್ಯದಲ್ಲಿ ಕೈಗೊಳ್ಳಲಾಗುವ ಯಾವುದೇ ಆರೋಗ್ಯ ಸೇವೆಗಳಿಗೆ ಬಳಸಬಹುದಾಗಿದೆ. ನಿಧಿಯ ನಿರ್ವಹಣೆಯ ಜವಾಬ್ದಾರಿಯನ್ನು ಕೇಂದ್ರ ಆರೋಗ್ಯ ಇಲಾಖೆಗೆ ವಹಿಸಲಾಗಿದೆ.
Advertisement
ಪಿಎಂ ಸ್ವಾಸ್ಥ್ಯ ನಿಧಿ ಸ್ಥಾಪನೆಗೆ ಕೇಂದ್ರ ಸಂಪುಟ ಅಸ್ತು: ನಿರ್ವಹಣೆ ಹೊಣೆ ಆರೋಗ್ಯ ಇಲಾಖೆಗೆ
08:16 PM Mar 10, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.