ನವದೆಹಲಿ: ಮಹಾರಾಷ್ಟ್ರದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರು ಸಿಬಿಐನ ಹೊಸ ನಿರ್ದೇಶಕರಾಗಲಿದ್ದಾರೆ. ಸದ್ಯ ಅವರು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಮುಖ್ಯಸ್ಥರಾಗಿದ್ದಾರೆ.
ಅವರು ಅಧಿಕಾರದ ವಹಿಸಿದ ದಿನದಿಂದ ಎರಡು ವರ್ಷಗಳ ಕಾಲ ಹುದ್ದೆಯಲ್ಲಿ ಇರಲಿದ್ದಾರೆ. ಹೊಸ ನೇಮಕದ ಬಗ್ಗೆ ಕೇಂದ್ರ ಸಂಪುಟದ ನೇಮಕ ಸಮಿತಿ ಮಂಗಳವಾರ ರಾತ್ರಿ ಆದೇಶ ಹೊರಡಿಸಿದೆ.
ಅವರು 1985ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಫೆಬ್ರವರಿ ಮೊದಲ ವಾರದಲ್ಲಿ ರಿಷಿ ಕುಮಾರ್ ಶುಕ್ಲಾ ಅವರು ಕೇಂದ್ರ ತನಿಖಾ ಸಂಸ್ಥೆಯ ನಿರ್ದೇಶಕ ಹುದ್ದೆಯಿಂದ ನಿವೃತ್ತಿಯಾಗಿದ್ದರು. ಅಂದಿನಿಂದ ಹುದ್ದೆ ತೆರವಾಗಿಯೇ ಇತ್ತು.
ಇದನ್ನೂ ಓದಿ :ಕೋವಿಡ್ ಪ್ರಕರಣ ಹೆಚ್ಚಳ : ಹಳ್ಳಿಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲು ಸಿಎಂ ಸೂಚನೆ
ನೂತನ ನಿರ್ದೇಶಕರ ಆಯ್ಕೆಗೆ ಸೋಮವಾರ ಪ್ರಧಾನಿ ಮೋದಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಮೂವರು ಐಪಿಎಸ್ ಅಧಿಕಾರಿಗಳ ಹೆಸರು ಅಂತಿಮಗೊಳಿಸಲಾಗಿತ್ತು. ಕೇಂದ್ರ ಸರ್ಕಾರ ಬಿಎಸ್‌ಎಫ್ ಮುಖ್ಯಸ್ಥ ರಾಕೇಶ್ ಅಸ್ತಾನ ಜು.31ಕ್ಕೆ, ಎನ್‌ಐಎ ಮುಖ್ಯಸ್ಥ ವೈ.ಸಿ.ಮೋದಿ ಮಾಸಾಂತ್ಯಕ್ಕೆ ನಿವೃತ್ತಿಯಾಗುವವರಿದ್ದರು. ಆದರೆ ಸಭೆಯಲ್ಲಿದ್ದ ಸಿಜೆಐ ನ್ಯಾ.ಎನ್.ವಿ.ರಮಣ, ನಿವೃತ್ತಿಯ ಅಂಚಿನಲ್ಲಿರುವ ಅಧಿಕಾರಿಗಳನ್ನು ಪ್ರಮುಖ ಹುದ್ದೆಗೆ ನೇಮಕ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಉಲ್ಲೇಖೀಸಿದ್ದರಿಂದ ಅವರ ಹೆಸರು ಕೈಬಿಡಲಾಗಿತ್ತು.