Advertisement
ಚಿತ್ರೋದ್ಯಮ ಕೂಡ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿತ್ತು. ಆದರೆ ಇದ್ದಕ್ಕಿದ್ದಂತೆ, ಕೋವಿಡ್ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ಕರ್ನಾಟಕದ ಥಿಯೇಟರ್ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಶೇಕಡ ನೂರರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಬ್ರೇಕ್ ಹಾಕಿತ್ತು. ಈ ತಿಂಗಳ ಅಂತ್ಯದವರೆಗೂ ಥಿಯೇಟರ್‌ಗಳಲ್ಲಿ ಈ ಹಿಂದಿನ ಆದೇಶದಂತೆ ಶೇಕಡಾ ಐವತ್ತರಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸೂಚಿಸಿತ್ತು.
Related Articles
Advertisement
ರಾಜಕೀಯ ಸಭೆ – ಸಮಾರಂಭಗಳು, ಪ್ರತಿಭಟನೆ – ಹೋರಾಟಗಳು, ಮಾರ್ಕೆಟ್ – ಮಾಲ್, ಹೋಟೆಲ್‌ಗಳು, ವಿಮಾನ, ರೈಲು, ಬಸ್ ಹೀಗೆ ಎಲ್ಲ ಕಡೆ ಜನರ ಓಡಾಟ ನಡೆಯುತ್ತಿದೆ. ಆದರೆ, ಎಲ್ಲೂ ಇದರ ನಿರ್ಬಂಧ ಚಿತ್ರಮಂದಿರಕ್ಕೆ ಮಾತ್ರ ಯಾಕೆ? ಎಂದು ಸಿನಿಮಾ ಮಂದಿ ಪ್ರಶ್ನೆ ಎತ್ತಿದ್ದರು. ಇನ್ನು ಫೆಬ್ರವರಿ 19ಕ್ಕೆ ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ಕೂಡ ಭರದಿಂದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ. ಕನ್ನಡ, ತೆಲುಗು ಹಾಗೂ
ತಮಿಳಿನಲ್ಲಿ ಏಕಕಾಲಕ್ಕೆ “ಪೊಗರು’ ರಿಲೀಸ್‌ಗೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಇದರ ನಡುವೆಯೇ ರಾಜ್ಯ ಸರ್ಕಾರದ ಈ ನಿರ್ಧಾರ “ಪೊಗರು’ ಚಿತ್ರತಂಡವನ್ನು ಗರಂ ಆಗುವಂತೆ ಮಾಡಿತ್ತು.
ಥಿಯೇಟರ್‌ನಿಂದ ಕಲೆಕ್ಷನ್‌ಗಾಗಿ..
ಚಿತ್ರಮಂದಿರಗಳಿಗೆ ಶೇ 100 ರಷ್ಟು ಅವಕಾಶ ನೀಡದ್ದನ್ನು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದು ಥಿಯೇಟರ್‌ನಿಂದ ಕಲೆಕ್ಷನ್ ಪಡೆಯುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿರ ಬಹುದು ಎಂದರು
ಉದಯವಾಣಿ ವರದಿಗೆ ಎಲ್ಲೆಡೆಯಿಂದ ಸ್ಪಂದನೆ
ಚಿತ್ರೋದ್ಯಮ ಮತ್ತೆ ಸಂಕಷ್ಟಕ್ಕೆ ಸಿಲುಕುವ ಕುರಿತು ಉದಯವಾಣಿ ಬುಧವಾರ ವರದಿ ಮಾಡಿತ್ತು.ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ನಡೆದ ಬಿರುಸಿನ ಅಭಿಯಾನಕ್ಕೆ ಎಲ್ಲೆಡೆಯಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ನಟರಾದ ಧ್ರುವ ಸರ್ಜಾ, ದುನಿಯಾ ವಿಜಯ್ ಟ್ವಿಟ್ಟರ್ ಮೂಲಕ ಪ್ರಶ್ನಿಸಿದ್ದರು. ಈ ಬಗ್ಗೆ ಟ್ವಿಟ್ಟರ್‌ನಲ್ಲಿ “ಉದಯವಾಣಿ’ ವಿನ್ಯಾಸದ ಪೋಸ್ಟರ್ ಫೋಟೋವನ್ನು ಹಂಚಿಕೊಂಡಿರುವ ಧ್ರುವ ಸರ್ಜಾ, “ಬಸ್ ನಲ್ಲಿ ಫುಲ್ ರಶ್..! ಮಾರ್ಕೆಟ್‌ನಲ್ಲಿ ಗಿಜಿ ಗಿಜಿ..! ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಯಾಕೆ?’ ಪ್ರಶ್ನಿಸಿ ಸಿಎಂ, ಡಿಸಿಎಂ ಹಾಗೂ ಸಚಿವ ಡಾ. ಸುಧಾಕರ್ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ನಟ ದುನಿಯಾ ವಿಜಯ್ ಕೂಡ ಅದೇ ಪೋಸ್ಟ್‌ನ್ನು ಹಂಚಿಕೊಂಡು ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ. ಅದಾದ ನಂತರ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರ ಹಿಂದೊಬ್ಬರು ಸ್ಟಾರ್‌ಗಳು ಅಭಿಯಾನ ರೂಪದಲ್ಲಿ ಈ ಹೋರಾಟದಲ್ಲಿ ಕೈ ಜೋಡಿಸಿದ್ದರು. ಅವರು ಮಾಡಿರುವ ಟ್ವೀಟ್‌ಗಳು ಇಲ್ಲಿವೆ..
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದ ಡೆಂತಯ್ನಾ? ಊರೆಲ್ಲ ಜನಜಂಗುಳಿ ತುಂಬಿ ತುಳುಕುತಿರಲು ಥಿಯೇಟರ್ ಒಳಗೆ ಮಾತ್ರ ಕೊರೋನಾಗೆ ಅಂಜಿದೊಡೆಂತಯ್ಯ?
- ಧನಂಜಯ್, ನಟ
- ರಕ್ಷಿತ್ ಶೆಟ್ಟಿ, ನಟ
- ಸುನಿ, ನಿರ್ದೇಶಕ