2011ರಲ್ಲಿ ತೆರೆಕಂಡ “ಆಟ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಪರಿಚಯವಾದವರು ಸುಮಂತ್ ಶೈಲೇಂದ್ರ. “ಆಟ’ ಚಿತ್ರದ ಬಳಿಕ “ದಿಲ್‌ವಾಲ’, “ತಿರುಪತಿ ಎಕ್ಸ್‌ಪ್ರೆಸ್’, “ಬೆತ್ತನಗೆರೆ’, “ಭಲೇ ಜೋಡಿ’, “ಲೀ’ ಮೊದಲಾದ ಚಿತ್ರಗಳಲ್ಲಿ ಡಿಫರೆಂಟ್ ಲುಕ್‌ನಲ್ಲಿ ಗಮನ ಸೆಳೆದಿದ್ದ ಸುಮಂತ್, ನಂತರ ಸುಮಾರು ಎರಡು ವರ್ಷಗಳ ಕಾಲ ತೆಲುಗು ಚಿತ್ರವೊಂದಕ್ಕಾಗಿ ಟಾಲಿವುಡ್‌ನತ್ತ ಮುಖ ಮಾಡಿದ್ದರು. ಇದೀಗ ಮತ್ತೆ ಸ್ಯಾಂಡಲ್ ವುಡ್‌ನಲ್ಲಿ ಕಂ ಬ್ಯಾಕ್ ಆಗಲು ತೆರೆಮರೆಯಲ್ಲಿ ತಯಾರಿ ನಡೆಸಿರುವ ಸುಮಂತ್, ಈ ಬಾರಿ “ಗೋವಿಂದ ಗೋವಿಂದ’ ಎಂದು ನಾಮ ಸ್ಮರಣೆ ಮಾಡುತ್ತ ಹೊಸ ಜೋಶ್ ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ.
“ಗೋವಿಂದ ಗೋವಿಂದ’ ಚಿತ್ರ ತಮ್ಮ ಸಿನಿಕೆರಿಯರ್‌ಗೆ ಮತ್ತೂಂದು ಬಿಗ್ ಬ್ರೇಕ್ ಕೊಡಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಸುಮಂತ್ ಶೈಲೇಂದ್ರ ಇಂದು (ಸೆ.7) 32ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ವೇಳೆ “ಉದಯವಾಣಿ’ ಜೊತೆ ಮಾತಿಗೆ ಸಿಕ್ಕಸುಮಂತ್, ತಮ್ಮ ಹೊಸಚಿತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
“ಫ್ಯಾಮಿಲಿ, ಬ್ಯುಸಿನೆಸ್ ಅಂತ ಒಂದಷ್ಟು ಸಮಯಕೊಡಬೇಕಾಗಿ ಬಂದಿದ್ದರಿಂದ, ಕಳೆದ ಎರಡು ವರ್ಷಗಳಿಂದ ಕನ್ನಡದಲ್ಲಿ ಯಾವ ಸಿನಿಮಾಗಳನ್ನೂ ಮಾಡಲಾಗಿರಲಿಲ್ಲ. “ತಿರುಪತಿ ಎಕ್ಸ್‌ಪ್ರೆಸ್’ ಸಿನಿಮಾದ ಥರದ್ದೇ ಔಟ್ ಆ್ಯಂಟ್ ಔಟ್ ಕಾಮಿಡಿ ಸಿನಿಮಾ ಮಾಡುವಂತೆ ಫ್ಯಾನ್ಸ್ ಕೇಳುತ್ತಿದ್ದರೂ, ಒಳ್ಳೆಯ ಸಬೆjಕ್ಟ್ ಸಿಕ್ಕಿರಲಿಲ್ಲ. ಈಗ “ಗೋವಿಂದ ಗೋವಿಂದ’ ಸಿನಿಮಾದಲ್ಲಿ ಅಂಥದ್ದೇ ಒಂದು ಸಬ್ಜೆಕ್ಟ್ ಸಿಕ್ಕಿದೆ. ಈಗಾಗಲೇ ಈ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ನಮ್ಮ ಪ್ಲಾನ್ ಪ್ರಕಾರ ಇದೇ ಮಾರ್ಚ್‌ನಲ್ಲಿ “ಗೋವಿಂದ ಗೋವಿಂದ’ ಸಿನಿಮಾ ರಿಲೀಸ್ ಮಾಡ್ಬೇಕಾಗಿತ್ತು. ಆದ್ರೆ ಅದೇ ಟೈಮ್‌ನಲ್ಲಿ ಕೊರೊನಾ ಲಾಕ್‌ಡೌನ್ ನಿಂದ ಥಿಯೇಟರ್‌ಗಳು ಬಂದ್ ಆಗಿದ್ದರಿಂದ, ಅನಿವಾರ್ಯವಾಗಿ ಸಿನಿಮಾ ರಿಲೀಸ್ ಮಾಡೋದು ಲೇಟ್ ಆಗಿದೆ’ ಎನ್ನುತ್ತಾರೆ ಸುಮಂತ್.
ಇನ್ನು “ಗೋವಿಂದ ಗೋವಿಂದ’ ಸಿನಿಮಾದ ಸಬ್ಜೆಕ್ಟ್ ಮತ್ತು ತಮ್ಮ ಕ್ಯಾರೆಕ್ಟರ್ ಬಗ್ಗೆ ಮಾತನಾಡುವ ಸುಮಂತ್, “ಈ ಸಿನಿಮಾದ ಕಥೆ ಎರಡು ದಿನಗಳಲ್ಲಿ ನಡೆಯುವಂಥದ್ದು. ಒಂದು ಸ್ಕೂಲ್‌ನಲ್ಲಿ ಶುರುವಾಗಿ ಸ್ಕೂಲ್ ನಲ್ಲೇ ಈ ಕಥೆ ಮುಗಿಯುತ್ತದೆ. ಇದೊಂದು ಕಂಪ್ಲೀಟ್ ಸಸ್ಪೆನ್ಸ್ – ಕಾಮಿಡಿ ಶೈಲಿಯ ಸಿನಿಮಾ. ಈ ಥರದ ಸಬೆjಕ್ಟ್ ಸಿಗೋದು, ಕನ್ನಡದಲ್ಲಿ ಬಂದಿರುವುದು ಕೂಡ ಕಡಿಮೆ. ಸ್ಕ್ರೀನ್ ಪ್ಲೇ, ಅನಿರೀಕ್ಷಿತ ತಿರುವುಗಳು ಸಿನಿಮಾದ ಹೈಲೈಟ್. ಪಕ್ಕಾ ತೆಲುಗು ಸಿನಿಮಾಗಳ ವರ್ಕಿಂಗ್ ಸ್ಟೈಲ್ ಈ ಸಿನಿಮಾದಲ್ಲಿದೆ. ಅದು ಏನು ಅನ್ನೋದನ್ನ ಸ್ಕ್ರೀನ್ ಮೇಲೆ ನೋಡಬೇಕು.ಇದಕ್ಕಿಂತ ಹೆಚ್ಚಾಗಿ ಸಿನಿಮಾದ ಬಗ್ಗೆ ಈಗಲೇ ಹೆಚ್ಚೇನು ಗುಟ್ಟು ಬಿಟ್ಟುಕೊಡಲಾರೆ. ಒಟ್ಟಾರೆ ಕನ್ನಡ ಆಡಿಯನ್ಸ್ ಗೆ ಈ ಸಿನಿಮಾ ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಕೊಡೋದಂತೂ ಗ್ಯಾರಂಟಿ’ ಎನ್ನುತ್ತಾರೆ.
“ಶ್ರೀ ಶೈಲೇಂದ್ರ ಪ್ರೊಡಕ್ಷನ್ಸ್’, “ಎಲ್.ಜಿ ಕ್ರಿಯೇಶನ್ಸ್’ ಮತ್ತು “ರವಿ ಗರಣಿ ಪ್ರೊಡಕ್ಷನ್ಸ್’ ಸಹಯೋಗದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರಕ್ಕೆ ತಿಲಕ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ಸಿ. ರವಿಚಂದ್ರನ್ ಸಂಕಲನ, ಹಿತನ್ ಹಾಸನ್ ಸಂಗೀತವಿದೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಒಂದು ರ್ಯಾಪ್ ಸಾಂಗ್‌ಗೆ ರ್ಯಾಪರ್ ಅಲೋಕ್ ಬಾಬು ಧ್ವನಿಯಾಗಿದ್ದಾರೆ.
ಒಟ್ಟಾರೆ ಈ ಬಾರಿ “ಗೋವಿಂದ ಗೋವಿಂದ’ನ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿರುವ ಸುಮಂತ್, ಕನ್ನಡ ಸಿನಿಪ್ರಿಯರಿಗೆ ಚಿತ್ರ ಭರಪೂರ ಮನರಂಜನೆ ನೀಡಲಿದೆ ಎಂಬ ಭರವಸೆಯಲ್ಲಿದ್ದಾರೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, “ಗೋವಿಂದ ಗೋವಿಂದ’ದ ಟೀಸರ್, ಆಡಿಯೋ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
ಗೋವಿಂದ ಗೋವಿಂದ’ ನಿಜವಾಗಿಯೂ ಒಂದು ಒಳ್ಳೆಯ ಸಿನಿಮಾ. ನಾನು ಚಿತ್ರರಂಗದಲ್ಲಿ 3 ದಶಕಕ್ಕೂ ಹೆಚ್ಚಿನ ಕಾಲದಿಂದ ಇದ್ದೇನೆ. ಇದೇ ಫಸ್ಟ್ ಟೈಮ್ ಕನ್ನಡದ ಒಂದು ಸಿನಿಮಾವನ್ನ ಬೇರೆ ಭಾಷೆಗಳಿಗೆ ಡಬ್ ಮಾಡಿ, ಒಟ್ಟಿಗೆ ರಿಲೀಸ್ ಮಾಡ್ಬೇಕು ಅಂಥ ನಿರ್ಧರಿಸಿ ದ್ದೇವೆ. ತಮಿಳು ಹಾಗೂ ಮಲಯಾಳಂನಲ್ಲಿ ಡಬ್ ಮಾಡಿ ರಿಲೀಸ್ ಮಾಡೋದು ಖಚಿತ. ಉಳಿದಂತೆ ಇನ್ನು ಬೇರೆ ಭಾಷೆಗಳಲ್ಲಿ ಮಾಡಬೇಕೆ ಬೇಡವೆ ಅನ್ನೋದರ ಬಗ್ಗೆ ಯೋಚಿಸುತ್ತಿದ್ದೇವೆ. –
ಎಸ್. ಶೈಲೇಂದ್ರ ಬಾಬು ನಿರ್ಮಾಪಕ
ಈ ಸಿನಿಮಾದ ಕಥೆ ನನಗೆ ಇಷ್ಟವಾಯ್ತು. ಹಾಗಾಗಿಹೆಚ್ಚು ಯೋಚಿಸದೆ ಈ ಸಿನಿಮಾ ಮಾಡಲು ಒಪ್ಪಿಕೊಂಡೆ. ಸಿನಿಮಾ ಮಾಡಿದ ಮೇಲೆ ನಿಜಕ್ಕೂಬಹಳ ಖುಷಿಯಾಯ್ತು. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಕನ್ನಡ ಸಿನಿಮಾ ಆಡಿಯನ್ಸ್‌ಗೆ”ಗೋವಿಂದ ಗೋವಿಂದ’ ಖಂಡಿತ ಇಷ್ಟವಾಗಲಿದೆ ಅನ್ನೋ ಕಾನ್ಫಿಡೆನ್ಸ್ ಇದೆ.
-ಸುಮಂತ್ ಶೈಲೇಂದ್ರ, ನಾಯಕ ನಟ