Advertisement
ವಿಕಾಸೌಧದಲ್ಲಿಂದು ಇತ್ತೀಚೆಗೆ ರಾಜ್ಯ ಪರಿಷತ್ತು ಅನುಮೋದಿಸಿದ 2019-20 ನೇ ಸಾಲಿನ ಎಸ್ ಸಿ ಪಿ ಮತ್ತು ಟಿಎಸ್ ಪಿ ಯೋಜನೆಯಡಿ ಕಾರ್ಯ ಕ್ರಮಗಳ ಅನುಷ್ಠಾನ ಕುರಿತ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಯಡಿ 30 ಸಾವಿರ ಕೋಟಿ ರೂ ವೆಚ್ಚದ ಕಾರ್ಯ ಕ್ರಮಗಳಿಗೆ ಅನುಮೋದನೆಯಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಶೇ.100 ರಷ್ಟು ಪ್ರಮಾಣದಲ್ಲಿ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಬೇಕು. ರಾಜ್ಯ ಪರಿಷತ್ತಿನಲ್ಲಿ ಕಾರ್ಯಕ್ರಮಗಳಿಗೆ ಅನುಮೋದನೆಯಾಗಿರುವುದರಿಂದ ಪುನಃ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯುವ ಅಗತ್ಯ ಇಲ್ಲ. ಎಲ್ಲಾ ಇಲಾಖೆಗಳು ಯಾವುದೇ ತಾಂತ್ರಿಕ ನೆಪ ಹೇಳದೇ ತ್ವರಿತವಾಗಿ ಕಾರ್ಯಕ್ರಮ ಗಳನ್ನು ಅನುಷ್ಠಾನ ಗೊಳಿಸಬೇಕು. ಜಲಾನಯನ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಈ ಯೋಜನೆಯಡಿ ಪರಿಶಿಷ್ಟರಿಗೆ ಅನುಕೂಲವಾಗಿಲ್ಲ. ಈ ಯೋಜನೆಯಡಿ ಪರಿಶಿಷ್ಟರ ಜಮೀನಿನಲ್ಲಿ ಜಲಾನಯನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಕೃಷಿ ಇಲಾಖೆಯು ಪರಿಶಿಷ್ಟರಿಗೆ ನೀಡುವ ಪರಿಕರಗಳ ಪ್ರಮಾಣವನ್ನು ಹೆಚ್ಚಿಸಬೇಕು. ಕಬ್ಬು ಕಟಾವು ಯಂತ್ರಗಳನ್ನು ನೀಡಬೇಕು. ಆವರ್ಥ ನಿಧಿ ಯಡಿ ಪರಿಶಿಷ್ಟರ ಬೆಳೆಗಳಿಗೆ ಬೆಂಬಲ ಬೆಲೆಯಡಿ ಖರೀದಿ ಮಾಡಬೇಕು ಎಂದು ಅವರು ತಿಳಿಸಿದರು.
Advertisement
ಜಲಾನಯನ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಡಿಸಿಎಂ ಕಾರಜೋಳ ತಾಕೀತು
02:02 PM Dec 16, 2019 | keerthan |