Advertisement
ಕೂಲಿ ಕಾರ್ಮಿಕರ ಸಮಸ್ಯೆಯಿಂದ ಬೆಳೆದ ಗೇರು ಬೀಜ ಬಿದ್ದು ಕಾಡು ಪ್ರಾಣಿ ಗಳ ಪಾಲಾಗಿದೆ.ಇದರಿಂದಾಗಿ ಗೇರು ಗುತ್ತಿಗೆದಾರರಿಗೆ ಅಪಾರ ನಷ್ಟ ಉಂಟಾಗಿದೆ. ಈ ಹಂತದಲ್ಲಿ ಸರಕಾರ ಸ್ಪಂದಿಸಬೇಕು ಎನ್ನುವುದು ಗೇರು ಬೆಳೆಗಾರರ ಹಾಗೂ ಗುತ್ತಿಗೆದಾರರ ಆಗ್ರಹವಾಗಿದೆ. ಈ ಬಾರಿ ಆರಂಭದಲ್ಲಿಯೇ ಗೇರು ಬೆಳೆ ಕುಸಿದಿದ್ದು, ಇನ್ನೇನು ಬೆಳೆ ಸ್ವಲ್ಪ ಮಟ್ಟಿಗಾದರೂ ಕೈ ಹಿಡಿಯಬಹುದು ಎನ್ನು ವಷ್ಟರಲ್ಲಿಯೇ ಕೋವಿಡ್-19 ದಿಂದಾಗಿ ದೇಶ ಲಾಕ್‌ಡೌನ್ ಆಗಿದೆ.
ಈ ವರ್ಷ ಇಳುವರಿ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಯಾಗಿ ರುವ ಜತೆಗೆ ದರ ಕೂಡ ಕುಸಿತಗೊಂಡಿದೆ. ಕಳೆದ ವರ್ಷ ಪ್ರತಿ ಕೆ.ಜಿ. ಗೇರುಬೀಜಕ್ಕೆ 110-120 ರೂ. ಧಾರಣೆ ಇದ್ದು ಈ ಬಾರಿ ಇದುವರೆಗೆ ಕೇವಲ 80 – 90 ರೂ. ಗೆ ಇಳಿದಿದೆ. ಹವಾಮಾನ ವೈಪರೀತ್ಯ ಹಾಗೂ ಗೇರು ಬೆಳೆಗೆ ಕೀಟ ಬಾಧೆ ಆವರಿಸಿಕೊಂಡ ಹಿನ್ನೆಲೆಯಲ್ಲಿ ಆರಂಭ ದಲ್ಲಿಯೇ ಬೆಳೆ ಕುಸಿದಿದೆ. ಅಲ್ಲದೇ ಕೋವಿಡ್-19 ವೈರಸ್‌ನಿಂದ ಲಾಕ್‌ಡೌನ್ ಆಗಿ ಗೇರು ಬೀಜವನ್ನು ತೆಗೆಯಲು ಕೂಲಿ ಕಾರ್ಮಿಕರ ಸಮಸ್ಯೆ ಕಾಣಿಸಿಕೊಂಡು ಬಿದ್ದ ಗೇರು ಬೀಜಗಳನ್ನು ಕಾಡು ಪ್ರಾಣಿಗಳು ತಿಂದು ಸಂಪೂರ್ಣ ನಷ್ಟವುಂಟಾಗಿದೆ, ಗೇರು ಅಭಿವೃದ್ಧಿ ನಿಗಮ ಹಾಗೂ ಸರಕಾರ ಎಲ್ಲ ಗೇರು ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸಿ, ನಷ್ಟ ಭರಿಸಿಕೊಡುವ ಕೆಲಸಮಾಡಬೇಕು ಎನ್ನುವುದು ಗೇರು ಗುತ್ತಿಗೆದಾರ ರಾಜು ಪೂಜಾರಿ ಅವರ ಅಭಿಪ್ರಾಯವಾಗಿದೆ.
Related Articles
-ಉದಯ್ ಕುಮಾರ ಜೋಗಿ, ಡಿ.ಎಫ್.ಒ.
Advertisement
ಕೋವಿಡ್-19 ದಿಂದಾಗಿ ಗೇರು ಗುತ್ತಿಗೆದಾರರು ಮಹಾ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆ.ಸಿ.ಡಿ.ಸಿ. ಹರಾಜಿನಲ್ಲಿ ಪಡೆದ ತೋಟಗಳಲ್ಲಿ ಈ ವರ್ಷ ಗೇರು ಸಂಗ್ರಹಿಸಲು ಹೊರಜಿಲ್ಲೆಯಿಂದ ಜನ ಬಾರದಂತಾಗಿದೆ. ಟಿ. ಸೊಳ್ಳೆಯಿಂದ ಬೆಳೆ ಕಡಿಮೆ ಇದೆ. ಕಾಡು ಪ್ರಾಣಿ ಹಾವಳಿ ಜನರ ಕೊರತೆಯಿಂದ ಸಂಕಷ್ಟದಲ್ಲಿರುವ ಗುತ್ತಿಗೆದಾರರ ನೆರವಿಗೆ ಸರಕಾರ ಸ್ಪಂದಿಸಬೇಕಾಗಿದೆ.-ರಾಜೀವ ಭಟ್ ಗೇರು ಗುತ್ತಿಗೆದಾರರು