Advertisement
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ 15ನೇ ವಾರ್ಡ್ ನಿವಾಸಿ ಮೊಹಮ್ಮದ್ ಜುಬೇರ್ ಮತ್ತು ಆತನ ಪತ್ನಿ ರುಹಿ ಜುವಾರಿಯೂ ಪೊಲೀಸರ ಅತಿಥಿಯಾಗಿದ್ದಾರೆ. ಕೋಟ್ಯಂತರ ರೂ. ವಂಚನೆಯ ಜತೆ ರಾಜ್ಯಪಾಲ ಮತ್ತು ರಿಸರ್ವ ಬ್ಯಾಂಕಿನ ಮುದ್ರೆ, ಸಹಿಯ ಜೊತೆ ಪತ್ರವು ನಕಲಿಯ ದೂರು ಸೇರಿ ಈಗ ಈತನ ಮೇಲೆ 15ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ನಗರದ ಕೆಂಗೇರಿ ಪಿಎಸೈ ಮುರುಳಿ ಅವರೊಂದಿಗೆ ಕೊರಟಗೆರೆ ಪೊಲೀಸರ ತಂಡವು ಆರೋಪಿ ಜುಬೇರ್ ಮನೆ ಮತ್ತು ಇಟ್ಟಿಗೆ ಫ್ಯಾಕ್ಟರಿ ಕಚೇರಿಯ ತಪಾಸಣೆ ನಡೆಸಿದ್ದಾರೆ. ಮನೆ ಮತ್ತು ಕಚೇರಿಯಲ್ಲಿ ರಾಜ್ಯಪಾಲರ ನಕಲಿ ದಾಖಲೆಯ ಪತ್ರದ ಜತೆಯಲ್ಲಿ ಐದಾರು ಬ್ಯಾಂಕುಗಳ ನಕಲಿ ಮುದ್ರೆ ಮತ್ತು ಸಹಿಯುಳ್ಳ ಹಲವು ಪತ್ರಗಳು ಪೊಲೀಸರಿಗೆ ದೊರಕಿವೆ. ಮಹಿಳೆಯಿಂದ ಪ್ರಕರಣಕ್ಕೆ ತಿರುವು
ಕೆಂಗೇರಿಯ ವಾಸಿ ಸೈದಾ ತಬಾಸುಮ್ ಎಂಬಾಕೆಯಿಂದ 1ಕೋಟಿ 15ಲಕ್ಷ ನಗದು ಮತ್ತು 184ಗ್ರಾಪಂ ಚಿನ್ನ ಪಡೆದು ಕಳೆದ 4ವರ್ಷದಿಂದ ವಂಚಿಸುತ್ತಿದ್ದ ದೂರಿನ ಅನ್ವಯ ಮೊಹಮ್ಮದ್ ಬುಬೇರ್ ಎಂಬಾತನ ಮೇಲೆ ಪ್ರಕರಣ ದಾಖಲಾದ ಬೆನ್ನಲ್ಲೇ ಕೆಂಗೇರಿ ಠಾಣೆಯಲ್ಲಿ 13ಪ್ರಕರಣ, ರಾಜರಾಜೇಶ್ವರಿ ಠಾಣೆ-1 ಮತ್ತು ಶಿರಾ ನಗರ-1 ಪ್ರಕರಣ ಸೇರಿ ಈತನ ಮೇಲೆ 15ಪ್ರಕರಣ ದಾಖಲು ಆಗಿರೋದು ಬೆಳಕಿಗೆ ಬಂದು ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.
Related Articles
Advertisement
ಕೆಂಗೇರಿಯ ಸೈದಾ ತಬಾಸುಮ್ ದೂರಿನ ಅನ್ವಯ ಕೊರಟಗೆರೆ ಪಟ್ಟಣದ ಮಹಮ್ಮೊದ್ ಜುಬೇರ್ ಮತ್ತು ರುಹಿ ಜುಬೈರ್ ಎಂಬುವರು ಈಗ ಕೆಂಗೇರಿ ಪೊಲೀಸರ ಅತಿಥಿ ಆಗಿದ್ದಾರೆ. ಬೆಂಗಳೂರು ನಗರದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಪಿಎಸೈ ಮೋಹನ್‍ಮುರುಳಿ ನೇತೃತ್ವದ ತಂಡ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ
ಗೃಹಸಚಿವರ ಫೋಟೋ ದುರ್ಬಳಕೆವಂಚಕ ಜುಬೇರ್ ಕೊರಟಗೆರೆ ಪಟ್ಟಣದ ಮುಸ್ಲಿಮರನ್ನು ಯಾಮಾರಿಸಿ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷನು ಆಗಿದ್ದಾನೆ. ಡಾ.ಜಿ.ಪರಮೇಶ್ವರ್ ಜತೆಗಿರುವ ಹಳೆಯ ಫೋಟೊ ತೋರಿಸಿ ಅಮಾಯಕ ಜನರಿಗೆ ಸರಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಗೃಹಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಇದಲ್ಲದೇ ಕೊರಟಗೆರೆಯಲ್ಲಿ ಇಟ್ಟಿಗೆ ಪ್ಯಾಕ್ಟರಿ ಮತ್ತು ರಿಯನ್ ಎಸ್ಟೇಟ್ ವ್ಯಾಪಾರಕ್ಕೂ ಧುಮುಕಿದ್ದಾನೆ. ನ್ಯಾಯ ಕೊಡಿಸುವ ವಿಶ್ವಾಸವಿದೆ
ಬ್ಯಾಂಕಿನಲ್ಲಿ ಇರುವ ಸಾಲ ಮನ್ನಾ ಮಾಡಿಸುವ ಆಮಿಷವೊಡ್ಡಿ ನನ್ನಿಂದ ಕೊರಟಗೆರೆಯ ಮೊಹಮ್ಮದ್ ಬುಬೇರ್ 1ಕೋಟಿ 15ಲಕ್ಷ ನಗದು ಹಣ ಮತ್ತು 184ಗ್ರಾಪಂ ಬಂಗಾರ ಪಡೆದು ವಂಚಿಸಿದ್ದಾನೆ. ನನಗೇ ನಕಲಿ ದಾಖಲೆ ನೀಡಿ 4ವರ್ಷದಿಂದ ಸಾಲ ಮನ್ನಾ ಮಾಡಿಸುವುದಾಗಿ ಸುಳ್ಳು ಹೇಳಿದ್ದಾನೆ. ನೀಡಿರುವ ಹಣ ಕೇಳಿದರೇ ಬೆದರಿಕೆ ಹಾಕಿದ್ದು ನಾನು ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಪೊಲೀಸರು ನನಗೇ ನ್ಯಾಯ ಕೊಡಿಸುವ ವಿಶ್ವಾಸವಿದೆ ಎಂದು ದೂರು ನೀಡಿರುವ ಕೆಂಗೇರಿಯ ಸೈದಾ ತಬಾಸುಮ್ ಹೇಳಿದ್ದಾರೆ.