Advertisement

ರಾಜಸ್ಥಾನ ವಿಧಾನಸಭೆ ಅಧಿವೇಶನ ಕರೆಯಲು ಗೆಹ್ಲೋಟ್ ಸರ್ಕಾರಕ್ಕೆ ಷರತ್ತು ವಿಧಿಸಿದ ಗವರ್ನರ್

06:02 PM Jul 27, 2020 | Nagendra Trasi |

ಜೈಪುರ:ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದ್ದ ರಾಜ್ಯಪಾಲರು ಮತ್ತು ಸ್ಪೀಕರ್ ನಡುವಿನ ಜಟಾಪಟಿ ಮುಂದುವರಿದಿದ್ದು ವಿಧಾನಸಭೆ ಅಧಿವೇಶನ ಕರೆಯಲು ನಮ್ಮದೇನೂ ಅಭ್ಯಂತರವಿಲ್ಲ. ಒಂದು ವೇಳೆ ಶಾಸಕರಿಗೆ 21 ದಿನಗಳ ಕಾಲಾವಧಿಯ ನೋಟಿಸ್ ನೀಡಲು ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಒಪ್ಪಿಗೆ ಸೂಚಿಸಿದರೆ ಅಧಿವೇಶನ ಕರೆಯಲು ತೊಂದರೆ ಇಲ್ಲ ಎಂಬುದಾಗಿ ರಾಜ್ಯಪಾಲ ಕಲ್ ರಾಜ್ ಮಿಶ್ರಾ ಅವರು ಸೋಮವಾರ  ಗಂಭೀರವಾದ ಷರತ್ತನ್ನು ಮುಂದಿಟ್ಟಿದ್ದಾರೆ.

Advertisement

ರಾಜಭವನ ವಿಧಾನಸಭೆ ಅಧಿವೇಶನ ನಡೆಸಲು ವಿರೋಧಿಸಿಲ್ಲ. ಗೆಹ್ಲೋಟ್ ಅವರ ಮನವಿಯಂತೆ ನಾವು ಒಪ್ಪಿಗೆ ನೀಡುತ್ತೇವೆ. ಆದರೆ ಮೂರು ಷರತ್ತುಗಳನ್ನು ಅನುಸರಿಸಬೇಕು. ಯಾಕೆಂದರೆ ಕೋವಿಡ್ 19 ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಒಂದು ವೇಳೆ ಸರ್ಕಾರ 21 ದಿನಗಳ ನೋಟಿಸ್ ಅವಧಿ ನೀಡುತ್ತಿತ್ತೇ ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್‌ನಲ್ಲೇ ಭಿನ್ನಮತ ; ಬೇರೆ ದಾರಿ ಕಂಡುಕೊಳ್ಳಲು ಹಲವರ ಸಲಹೆ

ಕೋವಿಡ್ 19 ಸಂದರ್ಭದಲ್ಲಿ (ಶಾಸಕರು) ಹೇಗೆ ದೈಹಿಕ ಅಂತರ ಕಾಯ್ದುಕೊಳ್ಳುತ್ತಿದ್ದೀರಿ. ತುಂಬಾ ಕಡಿಮೆ ಅವಧಿಯಲ್ಲಿ ಎಲ್ಲಾ ಶಾಸಕರನ್ನು ಕರೆಯಿಸುವುದು ಕಷ್ಟಕರವಾದ ಕೆಲಸವಾಗಿದೆ. ಹೀಗಾಗಿ ಶಾಸಕರಿಗೆ 21 ದಿನಗಳ ಕಾಲಾವಧಿಯ ನೋಟಿಸ್ ನೀಡಲು ನೀವು ಒಪ್ಪುತ್ತೀರಾ? ಎಂದು ಗವರ್ನರ್ ಕೇಳಿದ್ದಾರೆ. ಸಾಮಾಜಿಕ ಅಂತರ, ನೋಟಿಸ್ ನೀಡುವಿಕೆ ಷರತ್ತು ವಿಧಿಸಿ ವಿಧಾನಸಭೆ ಅಧಿವೇಶನ ಕರೆಯಲು ರಾಜ್ಯಪಾಲರು ಒಪ್ಪಿಗೆ ನೀಡಲಿದ್ದಾರೆ ಎಂದು ವರದಿ ತಿಳಿಸಿದೆ.

ಈ ಮೊದಲು ವಿಧಾನಸಭೆ ಅಧಿವೇಶನ ಕರೆಯುವಂತೆ ಮಾಡಿದ್ದ ಸಿಎಂ ಗೆಹ್ಲೋಟ್ ಅವರ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಇದರಿಂದ ಕಾಂಗ್ರೆಸ್ ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಗವರ್ನರ್ ಬಿಜೆಪಿ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿತ್ತು.

Advertisement

ಇದನ್ನೂ ಓದಿ:ಅಂದು ರಾಜಸ್ಥಾನ ರಾಜಕೀಯ ಅಲ್ಲೋಲಕಲ್ಲೋಲ! 35 ವರ್ಷದ ಹಿಂದಿನ ಕೊಲೆ ಪ್ರಕರಣ…

ಸುಪ್ರೀಂಕೋರ್ಟ್ ಆದೇಶದಂತೆ ರಾಜಸ್ಥಾನ ವಿಧಾನಸಭೆ ಸ್ಪೀಕರ್ ಸಿಪಿ ಜೋಶಿ ಅವರು ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿಂಪಡೆದಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next