Advertisement

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ರಾಜ್ಯಪಾಲ ಗೆಹ್ಲೋತ್‌ ಭೇಟಿ

11:18 AM Mar 25, 2022 | Team Udayavani |

ದಾವಣಗೆರೆ: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ಗುರುವಾರ ಹರಿಹರದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ನೀಡಿದ್ದರು.

Advertisement

ಶ್ರೀ ವಚನಾನಂದ ಸ್ವಾಮೀಜಿ ಕೆಲವು ದಿನಗಳ ಹಿಂದೆ ರಾಜಭವನಕ್ಕೆ ತೆರಳಿದ್ದ ವೇಳೆ ಯೋಗ ಸಾಧನೆ ಹಾಗೂ ಸಾಮಾಜಿಕ ಸುಧಾರಣೆ ಬಗ್ಗೆ ಸುಮಾರು ಎರಡು ಗಂಟೆಗಳ ಕಾಲ ವಿಸ್ತೃತವಾಗಿ ಚರ್ಚೆ ನಡೆಸುವ ಅವಕಾಶವನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌ ನೀಡಿದ್ದರು. ಹರಿಹರಕ್ಕೆ ಭೇಟಿ ನೀಡುವಂತೆ ಶ್ರೀಗಳು ಅವರಲ್ಲಿ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ರಾಜ್ಯಪಾಲರು ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೂ ಆಗಮಿಸಿದ್ದರು.

ಸಿಖ್‌ ಸಂಪ್ರದಾಯದ ಗುರುದ್ವಾರದಲ್ಲಿ ಕಂಡು ಬರುವಂತಹ ವಾತಾವರಣ ಇಲ್ಲಿದೆ. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಅನುಭವವನ್ನು ಹೊಂದಿರುವಂತಹ ಶ್ರೀ ವಚನಾನಂದ ಸ್ವಾಮೀಜಿ ಮುತುವರ್ಜಿಯಿಂದ ಕೈಗೊಂಡಿರುವಂತಹ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಠದ ಪರಂಪರೆ, ಇತಿಹಾಸದ ಹಾಗೂ ಪಂಚಮಸಾಲಿ ಸಮಾಜ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಮಹಾಯೋಗಿನಿ ಅಕ್ಕಮಹಾದೇವಿ, ಕಿತ್ತೂರಿನ ರಾಣಿ ಚೆನ್ನಮ್ಮ ,ಕೆಳದಿ ರಾಣಿ ಚೆನ್ನಮ್ಮ, ಬೆಳವಡಿ ರಾಣಿ ಮಲ್ಲಮ್ಮ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಮೈಲಾರ ಮಹಾದೇವಪ್ಪ, ಅಕ್ಷರಯೋಗಿ ಅರಟಾಳ ರುದ್ರಗೌಡ, ಸರ್‌. ಕಂಬಳಿ ಸಿದ್ದಪ್ಪ, ಅದರಗುಂಚಿ ಶಂಕರಗೌಡ ಮುಂತಾದ ಮಹನೀಯರ ಬಗ್ಗೆ ಮಾಹಿತಿ ಪಡೆದುಕೊಂಡ ರಾಜ್ಯಪಾಲರು, ಪಂಚಮಸಾಲಿ ಸಮುದಾಯದ ವೀರ ಮಹಿಳೆಯರು ರಾಜ್ಯಕ್ಕೆ ನೀಡಿದಂತಹ ಕೊಡುಗೆಯನ್ನು ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next