Advertisement

ವಿಧಾನಸಭಾ ಕಲಾಪ ಮುಂದೂಡಿಕೆ : ವಿಶ್ವಾಸ ಮತ ಕ್ಲೈಮ್ಯಾಕ್ಸ್ ಸೋಮವಾರ

09:17 AM Jul 20, 2019 | Nagendra Trasi |

ಬೆಂಗಳೂರು: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದ ಭವಿಷ್ಯ ಶುಕ್ರವಾರವೂ ನಿರ್ಧಾರವಾಗಲಿಲ್ಲ. ಇಂದು ಮಧ್ಯಾಹ್ನ 1.30 ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸಬೇಕೆಂಬ ರಾಜ್ಯಪಾಲರ ನಿರ್ದೇಶನವನ್ನೂ ಮೈತ್ರಿಪಕ್ಷದ ನಾಯಕರು ಗಂಭೀರವಾಗಿ ಪರಿಗಣಿಸಲಿಲ್ಲ. ದಿನವಿಡೀ ವಿಪ್ ಮತ್ತು ಅತೃಪ್ತ ಶಾಸಕರ ಗೈರಿಗೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆ ನಡೆಯಿತು.

Advertisement

ಮಧ್ಯಾಹ್ನ ಭೋಜನ ವಿರಾಮಕ್ಕೆ ಸದನ ಮುಂದೂಡಲ್ಪಟ್ಟಾಗ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ ಪ್ರಸಂಗವೂ ನಡೆಯಿತು. ಆದರೆ ಮಧ್ಯಾಹ್ನ ಮತ್ತೆ ಸದನ ಕಲಾಪ ಪುನರಾರಂಭಗೊಂಡಾಗಲೂ ಮುಖ್ಯಮಂತ್ರಿಯವರು ವಿಶ್ವಾಸಮತ ಯಾಚಿಸುವ ಯಾವ ಲಕ್ಷಣವೂ ಕಾಣಿಸಲಿಲ್ಲ. ಇತ್ತ ಬಿಜೆಪಿ ಇಂದೇ ವಿಶ್ವಾಸಮತ ಯಾಚನೆಗೆ ಪಟ್ಟು ಹಿಡಿದರೆ ಆಡಳಿತ ಪಕ್ಷದ ಸದಸ್ಯರು ಕಲಾಪ ಮುಂದೂಡುವಂತೆ ಆಗ್ರಹಿಸಿದರು. ಅಂತಿಮವಾಗಿ ಸ್ಪಿಕರ್ ರಮೇಶ್ ಕುಮಾರ್ ಅವರು ಸದನವನ್ನು ಸೋಮವಾರಕ್ಕೆ ಮುಂದೂಡಿದರು. ಇದರೊಂದಿಗೆ ಸರಕಾರದ ಭವಿಷ್ಯವೂ ಅಂದೇ ನಿರ್ಧಾರವಾಗುವ ಸಾಧ್ಯತೆ ಇದೆ.

ಶುಕ್ರವಾರದಂದು ವಿಧಾನಸಭೆಯಲ್ಲಿ ನಡೆದ ಬೆಳವಣಿಗೆಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ:

Advertisement

Udayavani is now on Telegram. Click here to join our channel and stay updated with the latest news.

Next