Advertisement

ಸರ್ಕಾರಗಳೇ ರೈತರ ಸಮಸ್ಯೆಗೆ ಸ್ಪಂದಿಸಿ

03:00 PM Feb 10, 2017 | Team Udayavani |

ಮಾದನಹಿಪ್ಪರಗಿ: ರೈತರು ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುತ್ತಾರೆ. ಒಮ್ಮೆ ಬರಗಾಲದಿಂದ ತತ್ತರಿಸಿದರೆ ಇನ್ನೊಮ್ಮೆ ಬೆಳೆದಂತ ಬೆಳೆಗೆ ಬೆಂಬಲ ಬೆಲೆ ಸಿಗದೆ ಕಂಗಾಲುತ್ತಾರೆ. ಇಂತಹ ಸಂದರ್ಭದಲ್ಲಿ ಆಳುವ ಸರಕಾರಗಳು ರೈತರ ಬೆನ್ನಿಗೆ ನಿಂತರೆ, ರೈತ ದೇಶದ ಬೆನ್ನಲೆಬು ಆಗುತ್ತಾನೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿ ಸರಕಾರಗಳದ್ದು ಎಂದು ಶಿವಲಿಂಗೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ ಹೇಳಿದರು.

Advertisement

ಗ್ರಾಮದಲ್ಲಿ ನಡೆದ ಹೈದ್ರಾಬಾದ ಕರ್ನಾಟಕ ರೈತ ಸಂಘದ ಹೋಬಳಿ ಘಟಕ ಹಾಗೂ ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರಕೃತಿ ರೈತರಿಗೆ ಸಾತ್‌ ನೀಡಿತ್ತಿಲ್ಲ. ಮಾಡಿದ ಸಾಲ ತೀರಿಸಲು ಸಾಧ್ಯವಾಗದೆ ರೈತರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಕಿಸಾನ್‌ ಮತ್ತು ಜವಾನ್‌ ದೇಶದ ನಿಜವಾದ ದೇವರಾಗಿದ್ದು, ಸರಕಾರ ಸದಾ ಕಾಲ ಇವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು. 

ಸಮಾರಂಭ ಉದ್ಘಾಟಿಸಿದ ಹೈದ್ರಾಬಾದ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ದಯಾನಂದ ಪಾಟೀಲ ಮಾತನಾಡಿ, ರೈತರ ಬದುಕು ಇಂದು ಕೂಲಿ ಕಾರ್ಮಿಕರಿಗಿಂತ ಕಡೆಯಾಗಿದೆ. ಅವರ ನೋವಿಗೆ ಸ್ವಂದಿಸುವಲ್ಲಿ ಸರಕಾರಗಳು ಸಂಪೂರ್ಣ ವಿಫಲವಾಗಿದೆ. ರೈತರ ಸಾಲ ಮನ್ನಾ, ತೊಗರಿ ಬೆಳೆಗೆ ಸೂಕ್ತ ಬೆಂಬಲ ಬೆಲೆ ನಿಗದಿ, ಸ್ವಾಮಿನಾಥನ್‌ ವರದಿ ಜಾರಿ ಮುಂತಾದ ಬೇಡಿಕೆಗಳನ್ನು ಇಟ್ಟಿಕೊಂಡು ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗವುದು.

ಅದಕ್ಕಾಗಿ ರೈತರು ಸಂಘಟಿತರಾಗವುದು ಅವಶ್ಯಕವಾಗಿದೆ ಎಂದರು. ರೈತ ಮುಖಂಡ ವಿಶ್ವನಾಥ ಸರಸಂಬಿ ಮಾತನಾಡಿ, ರೈತರು ಇಂದು ಸರಕಾರ ನೀಡುವ ಸೌಲತ್ತುಗಳನ್ನು ಬೇಡಿ ಪಡೆಯುವಂತಾಗಿದೆ. ನಾವು ಸಂಘಟಿತರಾಗಿ ಹೋರಾಟ ಮಾಡಿ ನಮಗೆ ಸಿಗಬೇಕಾದ ಹಕ್ಕುಗಳನ್ನು ಪಡೆಯೋಣ ಎಂದರು. ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಶ್ರೀಕಂಠ ದೇವರು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಧುಮತಿ ದೇಶಮುಖ, ನಾಗಮ್ಮಾ ದೇಸಾಯಿ, ಬಿ.ಜಿ. ಪಾಟೀಲ ಮಾತನಾಡಿದರು.

ರೈತ ಮುಖಂಡರಾದ ಮಲ್ಲಯ್ನಾ ಸ್ವಾಮಿ ಮದಗುಣಕಿ, ಸಿದ್ದರಾಮ ಪಾಟೀಲ, ರಾಜಶೇಖರ ಹರಿಹರ, ಮಲ್ಲಿನಾಥ ಎಳಮೇಲಿ, ಅಡವಯ್ನಾ ಸ್ವಾಮಿ ಶರಣಪ್ಪಾ ಪಾಟೀಲ, ಸೀತಾರಾಮ ಜಮಾದಾರ, ರಾಜಕುಮಾರ ಪಾಟೀಲ, ಮಲ್ಲಿನಾಥ ವಿ.ಪರೇಣಿ, ಸಿದ್ದರಾಮ ಕಿರನಳ್ಳಿ, ಬಸವರಾಜ ಪಾಟೀಲ ಹಾಜರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮ ಘಟಕಗಳ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಮಹಾಂತಯ್ನಾ ಸ್ವಾಮಿ ಸ್ವಾಗತಿಸಿದರು. ಕಲ್ಯಾಣಪ್ಪಾ ಗುಳಗಿ ನಿರೂಪಿಸಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next