Advertisement

ನಿರುದ್ಯೋಗ ನೀಗಿಸುವಲ್ಲಿ ಸರ್ಕಾರಗಳು ವಿಫ‌ಲ

12:47 PM May 27, 2017 | |

ಬೆಂಗಳೂರು: “ಉದ್ಯೋಗ ಸೃಷ್ಟಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫ‌ಲವಾಗಿವೆ,’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವ ಜನತಾದಳ(ಸಂಯುಕ್ತ) ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Advertisement

“ಪದವಿ ಪಡೆದ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಇದನ್ನು ನಿವಾರಿಸುವ ಭರವಸೆ ನೀಡಿ ಸರ್ಕಾರದ ಸೌಲಭ್ಯ ಪಡೆಯುತ್ತಿರುವ ಹಲವು ಸಂಘ, ಸಂಸ್ಥೆಗಳಿಂದ ಪ್ರಯೋಜನವಾಗುತ್ತಿಲ್ಲ. ರಾಜ್ಯ ಮತ್ತು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಶೀಘ್ರವೇ ಪರಿಹಾರ ಕಂಡುಹಿಡಿಯದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಭೀಕರವಾಗಲಿದೆ,’ ಎಂದು ಆತಂಕ ವ್ಯಕ್ತಪಡಿಸಿದರು. 

“ಸರ್ಕಾರದ ಮಟ್ಟದಲ್ಲಿ ಹಣದ ಸೋರಿಕೆಯಾಗುತ್ತಿದೆ. ತೆರಿಗೆ ಹಣದಲ್ಲಿ 1.5 ಲಕ್ಷ ಕೋಟಿ ರೂ ಅಕ್ರಮ ನಡೆದಿದೆ. ಸಾಮಾಜಿಕ ಕ್ಷೇತ್ರದಲ್ಲಿ 7 ಲಕ್ಷ ಕೋಟಿ ರೂ., ಆಹಾರ ಧಾನ್ಯ ಸರಬರಾಜು, ದಾಸ್ತಾನಿನಲ್ಲಿ 1999ರಲ್ಲಿ ಶೇ. 23.9 ಸೋರಿಕೆಯಾಗಿತ್ತು. ಈ ದರವು 2011-12ನೇ ಸಾಲಿನಲ್ಲಿ ಎರಡರಷ್ಟಾಗಿದೆ. ಉದ್ಯೋಗ ಕ್ಷೇತ್ರದಲ್ಲಿ 22 ಸಾವಿರ ಕೋಟಿ ರೂ.ನಷ್ಟ ಉಂಟಾಗಿದೆ,’ ಎಂದು ಆರೋಪಿಸಿದರು.

ಮಾಜಿ ಶಾಸಕ ಮಹಿಮಾ ಪಟೇಲ್‌ ಮಾತನಾಡಿ, “ಕೇಂದ್ರ ಸರ್ಕಾರ ಕೂಡಲೇ ಉದ್ಯೋಗ ಸೃಷ್ಟಿಸುವತ್ತ ಚಿತ್ತ ಹರಿಸಬೇಕು. ನಿರುದ್ಯೋಗವನ್ನು ತೊಲಗಿಸಲು ಯುವ ಜನತಾದಳ (ಸಂಯುಕ್ತ) ಕರ್ನಾಟಕ ಮೇ 27ರಂದು ನಗರದ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ,’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಮಿಕರ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಒಕ್ಕೂಟದ ಶ್ರೀನಿವಾಸ್‌, ಯುವ ಜನತಾದಳ ಪ್ರಧಾನ ಕಾರ್ಯದರ್ಶಿ ಎಚ್‌. ಮಂಜುನಾಥ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೆ. ರವಿಚಂದ್ರ ಉಪಸ್ಥಿತರಿದ್ದರು.

Advertisement

ಅನ್ನಭಾಗ್ಯದಿಂದ ರಾಜ್ಯದಲ್ಲಿ ಸೋಮಾರಿತನ ಬೆಳೆಯುತ್ತಿದೆ. ರೈತರಿಗೆ ಬದುಕಲು ದುಡಿಯಲು ಜಮೀನು ನೀಡಿ ಸದೃಢರನ್ನಾಗಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ.
-ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next