ಇಂಥದ್ದೊಂದು ಸಂಭವನೀಯ ಅಂದಾಜನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರ ಕೋವಿಡ್ 19 ವಿರುದ್ಧ ಸಮರಕ್ಕೆ ಸಿದ್ಧವಾಗುತ್ತಿದೆ. ಅದರ ನಿಯಂತ್ರಣಕ್ಕಾಗಿ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್‌ಗಳು ಮತ್ತು ಇತರ ಮೂಲ ಸೌಕರ್ಯಗಳನ್ನು ಪೂರೈಸುವುದಕ್ಕೂ ರಾಜ್ಯ ಸರಕಾರ ಸಿದ್ಧವಾಗುತ್ತಿದೆ.
Advertisement
ಈ ಬಗ್ಗೆ ಸ್ವತಃ ರಾಜ್ಯ ಸರಕಾರ ಹೈಕೋರ್ಟ್‌ಗೆ ಲಿಖೀತ ಹೇಳಿಕೆ ಮೂಲಕ ತಿಳಿಸಿದೆ. ಒಂದೊಮ್ಮೆ ರಾಜ್ಯದಲ್ಲಿ ಎಪ್ರಿಲ್ ಅಂತ್ಯದ ವೇಳೆಗೆ ಸೋಂಕು ಪೀಡಿತರ ಸಂಖ್ಯೆ 10 ಸಾವಿರ ತಲುಪಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವುದಕ್ಕೆ ಸಿದ್ಧತೆ ಮತ್ತು ಸಾಮರ್ಥ್ಯ ಹೊಂದುವ ಯೋಜನೆ ತನ್ನಲ್ಲಿದೆ ಎಂಬುದನ್ನು ಈ ಮೂಲಕ ಅರುಹಿದೆ.
ರಾಜ್ಯ ಸರಕಾರ ಸಿದ್ಧಪಡಿಸಿರುವ “ಆಪತ್ಕಾಲದ ಸಂಭವನೀಯ ಯೋಜನೆ’ (ಕಂಟಿಂಜೆನ್ಸಿ ಪ್ಲಾನ್) ಪ್ರಕಾರ ಸದ್ಯದ ಕೋವಿಡ್ ಕೇಸ್ ಲೋಡ್‌ಗೆ ಅನುಗುಣವಾಗಿ ಎನ್-95 ಮಾಸ್ಕ್, ಮಾಸ್ಕ್, ಪಿಪಿಇ ಕಿಟ್‌ಗಳು, ಸ್ಯಾನಿಟೈಸರ್‌ಗಳು ಸಾಕಷ್ಟು ಪ್ರಮಾಣದಲ್ಲಿವೆ. ಜತೆಗೆ ಈ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಮಾಡಿ ಕೊಳ್ಳಲಾಗಿದೆ. ಎಪ್ರಿಲ್ ಅಂತ್ಯಕ್ಕೆ 10 ಸಾವಿರ ಕೋವಿಡ್ 19 ಪ್ರಕರಣಗಳ ಅಂದಾಜು ಹಾಕಿ ಕೊಂಡು, ಅದಕ್ಕೆ ಅನುಗುಣವಾಗಿ ಸುರಕ್ಷಾ ವಸ್ತುಗಳು ಮತ್ತು ಮೂಲ ಸೌಕರ್ಯ ಒದಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸ್ಯಾನಿ ಟೈಸರ್ ಉತ್ಪಾದನೆಯನ್ನು ದಿನಕ್ಕೆ 50 ಸಾವಿರ ಲೀ.ಗೂ ಅಧಿಕ ಹೆಚ್ಚಿಸಲಾಗಿದೆ ಎಂದು ಸರಕಾರ ಹೇಳಿದೆ. ರಾಜ್ಯದಲ್ಲಿ ಕೋವಿಡ್ 19 ವ್ಯಾಪಕವಾಗಿ “ಹೆಚ್ಚಳವಾದರೆ…’ ಎಂಬ ಸಂಭಾವ್ಯತೆ ಅಂದಾಜಿಸಿ ಆರೋಗ್ಯ ಇಲಾಖೆ ಮುಂಜಾಗ್ರತೆ ಕ್ರಮವಾಗಿ ಸಿದ್ಧತೆ ಮಾಡಿ ಕೊಳ್ಳುತ್ತಿದೆ. ಮಾಸಾಂತ್ಯಕ್ಕೆ ಪೀಡಿತರ ಸಂಖ್ಯೆ 10 ಸಾವಿರ ತಲುಪಬಹುದು ಎಂಬ ಬಗ್ಗೆ ಆರೋಗ್ಯ ಇಲಾಖೆ ಯಾವುದೇ ಹೇಳಿಕೆ ನೀಡಿಲ್ಲ. ಜನರು ಆತಂಕಕ್ಕೆ ಒಳಗಾಗಬೇಕಿಲ್ಲ.
– ಪಂಕಜ್‌ಕುಮಾರ್ ಪಾಂಡೆ, ಆರೋಗ್ಯ ಇಲಾಖೆ ಆಯುಕ್ತ