Advertisement

“ಸರಕಾರದ ಸವಲತ್ತುಗಳು ನೇರವಾಗಿ ಜನರಿಗೆ ತಲುಪಲು ಸಾಧ್ಯ’

06:50 AM Jul 31, 2017 | |

ಕಾಪು: ಸರಕಾರಿ ಇಲಾಖೆಗಳು ಜನರ ಮುಂದೊಡ್ಡುವ ಕಾನೂನಾತ್ಮಕ ತೊಡಕುಗಳನ್ನು ಎದುರಿಸಿ ಇಲಾಖೆಗಳ ಮೂಲಕವಾಗಿ ಸಿಗುವ ಯೋಜನೆಗಳ ಸವಲತ್ತುಗಳನ್ನು ಗ್ರಾಮಸ್ಥರು ಸರಳವಾಗಿ ಪಡೆಯುವಲ್ಲಿ ಪಾರದರ್ಶಕ ಮತ್ತು ಅನುಕೂಲಕರ ವಾತಾವರಣ ಸೃಷ್ಠಿ ಇಂದಿನ ಅನಿವಾರ್ಯತೆಯಾಗಿದೆ ಎಂದು ಬೆಳಪು ಗ್ರಾ. ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಹೇಳಿದರು.

Advertisement

ಜು. 25ರಂದು ಬೆಳಪು ಗ್ರಾ. ಪಂ. ನ ಅಬ್ದುಲ್‌ ನಜೀರ್‌ಸಾಬ್‌ ಸಭಾಂಗಣದಲ್ಲಿ ನಡೆದ ಬೆಳಪು ಗ್ರಾ. ಪಂ. ನ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸರಕಾರಿ ಇಲಾಖೆಗಳ ಕುರಿತಾದ ಮಾಹಿತಿಯು ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಸಮರ್ಪಕವಾಗಿ ಜನರಿಗೆ ದೊರೆತಾಗ ಮಾತ್ರ ಸರಕಾರದ ಯೋಜನೆಗಳು ಸಫಲವಾಗಲು ಸಾಧ್ಯ. ಬೆಳಪು ಗ್ರಾಮವು ಗ್ರಾಮಸ್ಥರ ಬೇಡಿಕೆಗಳಿಗೆ ಅನುಗುಣವಾಗಿ ತನ್ನದೇ ಆದ ವಿನೂತನ ಚಿಂತನೆಗಳನ್ನು ಗ್ರಾಮಾಭಿವೃದ್ಧಿ ಕಾರ್ಯಗಳಲ್ಲಿ ರೂಪಿಸುವ ಮೂಲಕ ಮಾದರಿ ಗ್ರಾಮವೆನಿಸಿದೆ ಎಂದರು.

ಉಡುಪಿ ಪಶುಸಂಗೋಪನಾ ಇಲಾಖೆಯ ದಯಾನಂದ ಪೈ ಮಾರ್ಗದರ್ಶಕ ಅಧಿಕಾರಿಯಾಗಿ ಭಾಗವಹಿಸಿದ್ದರು.
ಸರಕಾರದ ವಿವಿಧ ಇಲಾಖೆಗಳಾದ ಶಿಕ್ಷಣ, ತೋಟಗಾರಿಕೆ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಸ್ಕಾಂ, ಪೊಲೀಸ್‌, ಅರಣ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿದರು.

ಎಲ್ಲೂರು ಜಿ. ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾ. ಪಂ. ಸದಸ್ಯ ಯು. ಸಿ. ಶೇಖಬ್ಬ, ಬೆಳಪು ಗ್ರಾ. ಪಂ. ಉಪಾಧ್ಯಕ್ಷೆ ಶೋಭ ಭಟ್‌, ಸದಸ್ಯರಾದ ಕರುಣಾಕರ ಶೆಟ್ಟಿ, ದಿನೇಶ್‌ ಪೂಜಾರಿ, ಶರತ್‌ ಕುಮಾರ್‌, ಸುರೇಶ್‌ ದೇವಾಡಿಗ, ಉಷಾ, ಪೈಗಂಬಾನು, ನೂರ್‌ಜಹಾನ್‌, ವಿಜಯಲಕ್ಷ್ಮೀ ದೇವಾಡಿಗ ಉಪಸ್ಥಿತರಿದ್ದರು.

ಬೆಳಪು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ರಮೇಶ್‌ ಸ್ವಾಗತಿಸಿದರು. ಸಿಬಂದಿ ಮಮತಾ ವಂದಿಸಿದರು. ಲೆಕ್ಕ ಸಹಾಯಕ ರಾಜೇಶ್‌ ಸಿ. ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next