Advertisement

ಪಾಲಿಕೆ ಬಜೆಟ್‌ಗೆ ಸಿಗದ ಸರ್ಕಾರದ ಒಪ್ಪಿಗೆ

01:19 PM May 23, 2021 | Team Udayavani |

ಬೆಂಗಳೂರು: ಪಾಲಿಕೆಯ 2021-22ನೇಸಾಲಿನ ಬಜೆಟ್‌ಗೆ ಸರ್ಕಾರಕ್ಕೆ ಪ್ರಸ್ತಾವನೆಕಳುಹಿಸದೆ ಇರುವುದರಿಂದ ಸರ್ಕಾರದಿಂದಇನ್ನೂ ಅನುಮೋದನೆ ಸಿಕ್ಕಿಲ್ಲ. ಪಾಲಿಕೆಯಬಜೆಟ್‌ನಲ್ಲಿ ನಗರದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರಗಳು ಇಲ್ಲದ ವಾರ್ಡ್‌ಗಳಲ್ಲಿ ಮೊದಲಹಂತದ ಆರೋಗ್ಯ ಕೇಂದ್ರಗಳನ್ನು ಸ್ಥಾಪನೆಮಾಡುವುದು ಹಾಗೂ ಪಾಲಿಕೆಯಶಾಲೆಗಳನ್ನು ಅಭಿವೃದ್ಧಿಪಡಿಸುವುದುಸೇರಿದಂತೆಹಲವುಅಭಿವೃದ್ಧಿಯೋಜನೆಗಳನ್ನುರೂಪಿಸಿಕೊಳ್ಳಲಾಗಿತ್ತು.ಕೊರೊನಾ ಸೋಂಕು ಮೊದಲ ಅಲೆ ಮತ್ತುಎರಡನೇ ಅಲೆಯಿಂದಾಗಿ 2019-20 ಹಾಗೂ2021-22ನೇ ಸಾಲಿನ ಬಜೆಟ್‌ ಮೇಲೆಪರಿಣಾಮ ಬೀರಿದೆ.

Advertisement

2019-20ನೇ ಸಾಲಿನಬಜೆಟ್‌ ಅನುಷ್ಠಾನವೂ ಸಹ ಸರ್ಮಕವಾಗಿ ಆಗಿರಲಿಲ್ಲ. ಇದೀಗ ಕೊರೊನಾ ಎರಡನೇ ಅಲೆಯಿಂದಾಗಿ 2021-22 ನೇ ಸಾಲಿನ ಬಜೆಟ್‌ಅನುಮೋದನೆಆಗಿಲ್ಲ.ಪಾಲಿಕೆಯಿಂದಬಜೆಟ್‌ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸುವುದರಲ್ಲೂ ಸಾಕಷ್ಟು ವಿಳಂಬವಾಗಿದೆ.ಕೊರೊನಾ ಸೋಂಕು ಭೀತಿಯನಡುವೆಯುಕೆಲವುಅಭಿವೃದ್ಧಿಕಾಮಗಾರಿಗಳುನಡೆಯುತ್ತಿವೆ. ಸರ್ಕಾರವು ಪಾಲಿಕೆಯಬಜೆಟ್‌ಗೆ ಅನುಮೋದನೆ ನೀಡಿದರೆ, ತುರ್ತುಅವಶ್ಯವಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದುರಸ್ತಿಯಲ್ಲಿರುವ ಬಿಬಿಎಂಪಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ತುರ್ತು ಯೋಜನೆಗಳಿಗೆ ಕ್ರಿಯಾ ಯೋಜನೆ ರೂಪಿಸಿಕೊಂಡು, ಮುಂದುವರಿಯಬಹುದು.

ಇದಕ್ಕೂ ಮುನ್ನ ಪಾಲಿಕೆಯ ಬಜೆಟ್‌ ಅನ್ನುಸರ್ಕಾರಕ್ಕೆ ಕಳುಹಿಸಿಕೊಡಬೇಕಿದೆ ಎಂದುಪಾಲಿಕೆಯ ಅಧಿಕಾರಿಗಳು.ಪಾಲಿಕೆ 2021-22 ನೇ ಸಾಲಿನಲ್ಲಿ9,286.80 ಕೋಟಿ ರೂ. ಮೊತ್ತದ ಬಜೆಟ್‌ಮಂಡನೆ ಮಾಡಿತ್ತು. ಇದರಲ್ಲಿ 250 ಕೋಟಿರೂ. ಆಡಳಿತಾತ್ಮಕ ವೆಚ್ಚ, 80 ಕೋಟಿ ರೂ.ಇಂದಿರಾ ಕ್ಯಾಂಟೀನ್‌ ನಿರ್ವಹಣೆ ಸೇರಿದಂತೆಪಾಲಿಕೆಯ ಆಡಳಿತಾತ್ಮಕ ನಿರ್ವಹಣೆ ಹಾಗೂಘನತ್ಯಾಜ್ಯ ನಿರ್ವಹಣಾ ಅನುದಾನವೂ ಇದೆ.

ವಲಯವಾರು ಅಭಿವೃದ್ಧಿಗೂ ಹಿನ್ನಡೆ:ಪಾಲಿಕೆಯ 2021-22ನೇ ಸಾಲಿನ ಬಜೆಟ್‌ನಲ್ಲಿ ಎರಡು ಸಾವಿರ ಕೋಟಿ ರೂ.ಅನುದಾನವನ್ನು ಪಾಲಿಕೆಯ ಎಂಟುವಲಯಗಳ ಅಭಿವೃದ್ಧಿಗೆ ಎಂದುಮೀಸಲಿಡಲಾಗಿತ್ತು. ಈ ಅನುದಾನದಲ್ಲಿಆಯಾ ವಲಯಗಳಲ್ಲಿ ಯಾವ ನಿರ್ದಿಷ್ಟವಿಷಯಗಳಿಗೆ ಆದ್ಯತೆ ನೀಡಬೇಕುಎನ್ನುವುದನ್ನು ತಿಳಿದುಕೊಳ್ಳಲು ಪ್ರತ್ಯೇಕಸಮಿತಿಯನ್ನೂ ರಚನೆ ಮಾಡಲಾಗಿತ್ತು.ಆದರೆ, ಈ ಪ್ರಕ್ರಿಯೆಗಳಿಗಿಂತಲೂ ಮುನ್ನಸರ್ಕಾರಕ್ಕೆ ಪಾಲಿಕೆಯ ಬಜೆಟ್‌ ಮಂಡನೆಅನುಮೋದನೆ ಪ್ರಸ್ತಾವನೆಯೇ ಬಾಕಿಉಳಿದಿದೆ

Advertisement

Udayavani is now on Telegram. Click here to join our channel and stay updated with the latest news.

Next