Advertisement

ಸರಕಾರವೇ ಶಿವಾಜಿ ಜಯಂತಿ ಆಚರಿಸಲಿ: ಕೆ.ಎಸ್‌.ಈಶ್ವರಪ್ಪ

04:33 PM Jul 03, 2018 | |

ಶಿವಮೊಗ್ಗ: ಛತ್ರಪತಿ ಶಿವಾಜಿ ಮಹಾರಾಜರು ಒಂದು ಜಾತಿ, ಧರ್ಮಕ್ಕೆ ಸೀಮಿತರಲ್ಲ. ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಆದ್ದರಿಂದ ಅವರ ಜಯಂತಿಯನ್ನು ಸರ್ಕಾರವೇ ಆಚರಣೆ  ಮಾಡುವಂತಾಗಬೇಕು ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ ಶಿವಮೊಗ್ಗ ಶಾಖೆ, ಕ್ಷತ್ರಿಯ ಮರಾಠ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 344ನೇ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿವಾಜಿ ಮಹಾರಾಜರ ಅದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಅವರ ಧೈರ್ಯ, ಸಾಹಸ ಎಲ್ಲರಿಗೂ ಮಾದರಿಯಾಗಬೇಕು. ಹಿಂದೂ ಸಾಮ್ರಾಜ್ಯ ಕೇವಲ ಹಿಂದೂಗಳಿಗಷ್ಟೇ ಅಲ್ಲ, ಎಲ್ಲರಿಗೂ ಅನ್ವಯ ಎಂದರು. 

ವಾಗ್ಮಿ ಚೈತ್ರಾ ಕುಂದಾಪುರ ಮಾತನಾಡಿ, ಆದರ್ಶ ಪುರುಷರಾಗಿದ್ದ ಛತ್ರಪತಿ ಶಿವಾಜಿ ಅವರ ವಿಚಾರಧಾರೆಗಳು ಎಲ್ಲರಿಗೂ ದಾರಿದೀಪ. ಶಿವಾಜಿಗೆ ಆತನ ತಾಯಿಯೇ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದ್ದಳು. ಚಿಕ್ಕ ವಯಸ್ಸಿನಲ್ಲಿಯೇ ದೇಶಾಭಿಮಾನ ಬೆಳೆಸಿಕೊಂಡಿದ್ದರು. ನಮ್ಮ ಹೆಣ್ಣು ಮಕ್ಕಳ
ಮಾನ, ಪ್ರಾಣ ಉಳಿಸುವ ಕೆಲಸವನ್ನು ನಾವೇ ಮಾಡಬೇಕಿದೆ ಎಂದರು. 

ನೆರೆಯ ದೇಶಗಳ ಶತ್ರುಗಳಿಗಿಂತ ನಮ್ಮ ನಡುವೆಯೇ ಇದ್ದು ಧರ್ಮದ ಅವಹೇಳನ ಮಾಡುವವರು ಮತ್ತು ಧರ್ಮ ವಿಭಜನೆ ಮಾಡುವವರು ನಿಜವಾದ ಶತ್ರುಗಳು. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡಲಾಗುತ್ತಿದೆ. ಇಂಥವರ ಬಗ್ಗೆ ಜಾಗೃತವಾಗಿರಬೇಕು ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಎಸ್‌. ರುದ್ರೇಗೌಡ ಮಾತನಾಡಿದರು. ಕೆಕೆಎಂಪಿ ಅಧ್ಯಕ್ಷ ಎಸ್‌.ಸುರೇಶ್‌ರಾವ್‌ ಸಾಠೆ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಹಿರಿಯರಿಗೆ ಸಹಾಯಧನ, ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಮಾಜಿ ಶಾಸಕ ಚಂದ್ರಶೇಖರ್‌, ಕೆಕೆಎಂಪಿ ಗೌವರ್ನಿಂಗ್‌ ಕೌನ್ಸಿಲ್‌ ಛೇರನ್‌ ವಿ.ಎ.ರಾಣೇಜಿರಾವ್‌ ಸಾಠೆ, ಕೆಕೆಎಂಪಿ ರಾಜ್ಯ ಸಮಿತಿ ಸಲಹೆಗಾರ ಆರ್‌.ಚಂದ್ರರಾವ್‌ ಘಾರ್ಗೆ, ರಾಜ್ಯ ಉಪಾಧ್ಯಕ್ಷರಾದ ಟಿ.ಆರ್‌. ವೆಂಕಟರಾವ್‌ ಚೌಹಾಣ್‌ ಮತ್ತಿತರರು ಇದ್ದರು. ಇದೇ ವೇಳೆ ಸಮಾಜದ ಬಾಂಧವರಿಗೆ ವೃದ್ಧಾಪ್ಯ ವೇತನ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು

ಶಿವಾಜಿ ಮಹಾರಾಜರ ಅದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಅವರ ಧೈರ್ಯ, ಸಾಹಸ ಎಲ್ಲರಿಗೂ ಮಾದರಿಯಾಗಬೇಕು. ಹಿಂದೂ ಸಾಮ್ರಾಜ್ಯ ಕೇವಲ ಹಿಂದೂಗಳಿಗಷ್ಟೇ ಅಲ್ಲ, ಎಲ್ಲರಿಗೂ ಅನ್ವಯ.  ಕೆ.ಎಸ್‌.ಈಶ್ವರಪ್ಪ, ಶಾಸಕ 

Advertisement

Udayavani is now on Telegram. Click here to join our channel and stay updated with the latest news.

Next