Advertisement
ಶಾಲೆ ಆವರಣದಲ್ಲಿ ಬಾದಾಮ, ರುದ್ರಾಕ್ಷಿ, ಸಂಕೇಶ್ವರ ಗಿಡಗಳು, ಬೇವಿನಮರ, ಟೆಂಗಿನಮರ, ದುಂಡು ಮಲ್ಲಿಗೆ ಸೇರಿದಂತೆ ವಿವಿಧ ಬಗೆಯ ಗಿಡಗಳು ಶಾಲಾ ಆವರಣದ ಅಂದ ಹೆಚ್ಚಿಸಿವೆ.
Related Articles
Advertisement
ಗ್ರಾಮ ಪಂಚಾಯಿತಿ, ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಈ ಶಾಲೆಗೆ 2016-17ನೇ ಸಾಲಿನಲ್ಲಿ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಲಭಿಸಿದೆ. ಶಾಲೆಯಿಂದ ಪ್ರತಿವರ್ಷ ಮಕ್ಕಳು ಮೊರಾರ್ಜಿ ವಸತಿ, ನವೋದಯ ಶಾಲೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಶಾಲೆಯಲ್ಲಿ ಗುಣಮಟ್ಟದ ರುಚಿಯಾದ ಅಡುಗೆ ತಯಾರಿಸಿ ಮಕ್ಕಳ ನೀಡಲಾಗುತ್ತಿದೆ.
ಶಾಲೆಯಲ್ಲಿ ಶಿಕ್ಷಕರ ಕೊರತೆ: ಕಳೆದ ಒಂದು ವರ್ಷದಿಂದ ಮುಖ್ಯಗುರು, ದೈಹಿಕ ಶಿಕ್ಷಕರ ಕೊರತೆಯಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸುವುದು ಅಗತ್ಯವಿದೆ.
ಶತಮಾನ ಕಂಡ ಶಾಲೆ: ಕ್ರಿ.ಶ.1874ರಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸ್ಥಾಪನೆಗೊಂಡಿತು. ಮುಧೋಳದ ಮರಾಠಾ ಸಂಸ್ಥಾನಿಕ ಕಾಲದಲ್ಲಿ ಈ ಶಾಲೆ ಮರಾಠಿ ಭಾಷೆಯಲ್ಲಿ ಆರಂಭಗೊಂಡು ಕೆಲವು ವರ್ಷಗಳ ನಂತರ ಕನ್ನಡ ಶಾಲೆಯಾಗಿ ಪರಿವರ್ತನೆಗೊಂಡಿತು.
ನಾನು ಈ ಶಾಲೆಯಲ್ಲಿ 1978 ರಿಂದ 1998ವರೆಗೆ ಸಹ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಪಟ್ಟಣದ ಜನತೆ ಈ ಶತಮಾನ ಕಂಡ ಶಾಲೆಯ ಅಭಿವೃದ್ಧಿ ಕಡೆಗೆ ಮುತುವರ್ಜಿ ವಹಿಸಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಕಾಳಜಿ ವಹಿಸಬೇಕು. -ಜಿ.ಬಿ. ಜೋಶಿ, ರಾಜ್ಯ ಪ್ರಶಸ್ತಿ ಪುರಸ್ಕೃತರು, ನಿವೃತ್ತ ಶಿಕ್ಷಕರು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2007ರಿಂದ 2014ರವರೆಗೆ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಸೇವಾ ಅವ ಧಿಯಲ್ಲಿ ಎಲ್ಲರ ಸಹಕಾರದಿಂದ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆ ನೀಡಿದ್ದಾರೆ. –ಎಂ.ಎಸ್. ನಾಗರೇಶಿ, ನಿವೃತ್ತ ಮುಖ್ಯ ಶಿಕ್ಷಕ ಚಿಕ್ಕೂರ
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಇನ್ನಷ್ಟು ಈ ಶಾಲೆಗೆ ತಾಂತ್ರಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅಥವಾ ದಾನಿಗಳು ಶಾಲೆ ಅಭಿವೃದ್ಧಿಗೆ ಕೈ ಜೋಡಿಸಬೇಕು. -ಕೆ.ಎಲ್. ಮಾಳೇದ, ಸಿಆರ್‌ಪಿ ಲೋಕಾಪುರ ಕ್ಲಸ್ಟರ್
ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಗ್ರಾಮಸ್ಥರ ಸಹಕಾರ ಮುಖ್ಯ. ಪಟ್ಟಣದ ಜನತೆ ಶತಮಾನ ಕಂಡ ಈ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಇನ್ನಷ್ಟು ಸೌಲಭ್ಯ ಒದಗಿಸಲು ಸಹಾಯ ಸಹಕಾರ ನೀಡಬೇಕು. –ಎಚ್.ಎಫ್. ಖವಾಸ್ತ, ಪ್ರಭಾರಿ ಮುಖ್ಯಶಿಕ್ಷಕ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಲೋಕಾಪುರ
ಸಲೀಮ ಐ. ಕೊಪ್ಪದ