ನವದೆಹಲಿ: ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಲಿಬರ್ಟಿ (NMML) ಹೆಸರನ್ನು ಅಧಿಕೃತವಾಗಿ ಪ್ರಧಾನಮಂತ್ರಿಗಳ ಮ್ಯೂಸಿಯಂ ಮತ್ತು ಲಿಬರ್ಟಿ ಸೊಸೈಟಿ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಎನ್ ಎಂಎಂಎಲ್ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಬುಧವಾರ (ಆಗಸ್ಟ್ 16) ತಿಳಿಸಿದ್ದಾರೆ.
ಇದನ್ನೂ ಓದಿ:Maharashtra ಜೀವಮಾನದಲ್ಲಿ ಬಿಜೆಪಿ ಜೊತೆ ಶರದ್ ಪವಾರ್ ಕೈಜೋಡಿಸಲ್ಲ: ಸಂಜಯ್ ರಾವುತ್
ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆಯಂದು ಈ ಹೆಸರನ್ನು ಅಧಿಕೃತಗೊಳಿಸಲಾಗಿದೆ ಎಂದು ಮಿಶ್ರಾ ಹೇಳಿದರು. ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಲಿಬರ್ಟಿಯ ಹೆಸರನ್ನು ಮರುನಾಮಕರಣ ಮಾಡಿರುವ ಬಗ್ಗೆ ಮಿಶ್ರಾ ಅವರು ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಲಿಬರ್ಟಿ ಇನ್ಮುಂದೆ ಪ್ರಧಾನಮಂತ್ರಿಗಳ ಮ್ಯೂಸಿಯಂ ಮತ್ತು ಲಿಬರ್ಟಿ (ಪಿಎಂಎಂಎಲ್)ಎಂದಾಗಲಿದೆ. ಜೂನ್ ತಿಂಗಳಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಎನ್ ಎಂಎಂಎಲ್ ಸೊಸೈಟಿಯ ವಿಶೇಷ ಸಭೆ ನಡೆದಿದ್ದು, ಅಂದು ಹೆಸರು ಬದಲಾವಣೆ ಕುರಿತು ಚರ್ಚೆ ನಡೆದಿರುವುದಾಗಿ ವರದಿ ವಿವರಿಸಿದೆ.
ಹೊಸ ಹೆಸರಿಗೆ ಅಧಿಕೃತ ಮುದ್ರೆ ಹಾಕಲು ಕೆಲವೊಂದು ಆಡಳಿತಾತ್ಮಕ ಪ್ರಕ್ರಿಯೆಗಳ ಅಗತ್ಯವಿದೆ ಎಂದು ಮೂಲಗಳು ಪಿಟಿಐ ನ್ಯೂಸ್ ಏಜೆನ್ಸಿಗೆ ತಿಳಿಸಿರುವುದಾಗಿ ವರದಿಯಾಗಿದೆ.