ಪಡುಬಿದ್ರಿ: ಎಳೆಯ ಮಕ್ಕಳಿಗೆ ಆರಂಭಿಕ ಶಿಕ್ಷಣ ಉತ್ತಮವಾಗಿ ಸಿಗಬೇಕೆಂಬ ಉದ್ದೇಶದಿಂದ ರಾಜ್ಯ ಸರಕಾರವು ಅಂಗನವಾಡಿಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ಅಂಗನವಾಡಿ ಕಟ್ಟಡಗಳಿಗೆ ಹೆಚ್ಚು, ಅನುದಾನ ಇದಕ್ಕಾಗಿ ನೀಡುತ್ತಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಮಾ. 6ರಂದು ಹೆಜಮಾಡಿಯ ಉತ್ತರ ಸುಲ್ತಾನ್ ರಸ್ತೆ ಬಳಿ ಶಾಸಕರ 10 ಲ. ರೂ. ಅನುದಾನದಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಗನವಾಡಿಗಳ ಆಸುಪಾಸಿನವರು ತಮ್ಮ ಮನೆಯ ಶುಭ ಕಾರ್ಯಗಳ ಸಂದರ್ಭ ಅಂಗನವಾಡಿ ಮಕ್ಕಳನ್ನು ಮನೆ ಮಂದಿಯೆಂದು ಪರಿಗಣಿಸಿ ಅವರಿಗೆ ಸಹಾಯ ನೀಡಬೇಕೆಂದು ಅವರು ಮನವಿ ಮಾಡಿದರು. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ 2-3 ಅಂಗನವಾಡಿಗಳಿಗೆ ಅನುದಾನ ನೀಡಲು ಉದ್ದೇಶಿಸಲಾಗಿದೆ ಎಂದರು.
ಅಂಗನವಾಡಿ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ಹಾಜಿ ಸಿಯಾಲಿ ಸಾಹೇಬ್, ಅನುದಾನ ಒದಗಿಸಿದ ಶಾಸಕ ಲಾಲಾಜಿ ಆರ್ ಮೆಂಡನ್ ಅವರನ್ನು ಸಮ್ಮಾನಿಸಲಾಯಿತು.
ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಜಿ. ಪಂ. ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ತಾ. ಪಂ. ಸದಸ್ಯೆ ರೇಣುಕಾ ಪುತ್ರನ್, ಗ್ರಾ.ಪಂ. ಪಿಡಿಒ ಮಮತಾ ವೈ. ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಕರ್ಕೇರ, ಸದಸ್ಯರಾದ ವಾಮನ ಕೋಟ್ಯಾನ್ ನಡಿಕುದ್ರು, ಕಬೀರ್, ಜಯಶ್ರೀ, ಅಬ್ದುಲ್ ರೆಹಮಾನ್ ಪುತ್ತು, ಎಚ್. ಸೂಫಿ, ಅಂಗನವಾಡಿ ಮೇಲ್ವಿಚಾರಕಿ ಶಕುಂತಳಾ, ಶಿಕ್ಷಕಿ ಸಫಿಯಾ ಮುಖ್ಯ ಅತಿಥಿಗಳಾಗಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಪ್ರಸ್ತಾವಿಸಿ ಸ್ವಾಗತಿಸಿ ದರು. ಗ್ರಾ. ಪಂ. ಸದಸ್ಯ ಗೋವರ್ಧನ್ ಕೋಟ್ಯಾನ್ ನಿರ್ವಹಿಸಿ ವಂದಿಸಿದರು.