Advertisement

ಲಿಂಬೆ ಅಭಿವೃದ್ಧಿ ಮಂಡಳಿಗೆ ಹುಳಿ ಹಿಂಡಿದ ಸರ್ಕಾರ

01:41 AM Jan 26, 2019 | |

ಇಂಡಿ:ರಾಜ್ಯದಲ್ಲಿಯೇ ಹೆಚ್ಚು ಲಿಂಬೆ ಬೆಳೆಯುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಿಂಬೆ ಬೆಳೆಗಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪಟ್ಟಣದಲ್ಲಿ ಆರಂಭಿಸಿರುವ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಇಲ್ಲ.

Advertisement

ವಿಜಯಪುರ ಜಿಲ್ಲೆಯಲ್ಲಿ ಒಟ್ಟು 3017 ಹೆಕ್ಟೇರ್‌ ಪ್ರದೇಶದಲ್ಲಿ ಲಿಂಬೆ ಬೆಳೆಯಲಾಗುತ್ತದೆ. ವಾರ್ಷಿಕವಾಗಿ  ಸುಮಾರು 11,313 ಲಕ್ಷ ರೂ.ವಹಿವಾಟು ನಡೆಯುತ್ತಿದೆ. ಇಂಡಿಯಲ್ಲಿ 1602 ಹೆಕ್ಟೇರ್‌, ಬಸವನಬಾಗೇವಾಡಿಯಲ್ಲಿ 140 ಹೆಕ್ಟೇರ್‌, ವಿಜಯಪುರ 550 ಹೆಕ್ಟೇರ್‌, ಮುದ್ದೇಬಿಹಾಳ 65 ಹೆಕ್ಟೇರ್‌, ಸಿಂದಗಿಯಲ್ಲಿ 660 ಹೆಕ್ಟೇರ್‌ನಲ್ಲಿ ಲಿಂಬೆ ಬೆಳೆಯಲಾಗುತ್ತದೆ. ಇಂಡಿಯಿಂದ ಪ್ರತಿ ಎರಡು ದಿನಕ್ಕೊಮ್ಮೆ ಸುಮಾರು 80ರಿಂದ 90 ಲಾರಿಗಳು ಲಿಂಬೆಹಣ್ಣು ತುಂಬಿಕೊಂಡು ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಹೋಗುತ್ತವೆ. ಬಹು ವಾರ್ಷಿಕ ಲಿಂಬೆ ಬೆಳೆ ಅಭಿವೃದ್ಧಿಗೆ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಅಂದಿನ ಸಿಎಂ ಸಿದ್ದರಾಮಯ್ಯನವರು 2017ರ ನ.10ರಂದು ಉದ್ಘಾಟನೆ ಮಾಡಿದ್ದರು. ಒಂದು ವರ್ಷ ಕಳೆದರೂ ಇಲ್ಲಿವರೆಗೆ ಲಿಂಬೆ ಅಭಿವೃದ್ಧಿ ಮಂಡಳಿಗೆ ಪೂರ್ಣಾವಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವ್ಯವಸ್ಥೆ ಮಾಡಿಲ್ಲ. ಹೀಗಾಗಿ, ಇದು ಇದ್ದೂ ಇಲ್ಲದಂತಾಗಿದೆ.

ಕೊಳೆಯುತ್ತಿದೆ ಅನುದಾನ: ಲಿಂಬೆ ಅಭಿವೃದ್ಧಿ ಮಂಡಳಿಗೆ ಸರ್ಕಾರ 2017-18ರಲ್ಲಿ 1 ಕೋಟಿ ರೂ.ಅನುದಾನ ಬಿಡುಗಡೆ ಮಾಡಿತ್ತು. ಅಧಿ ಕಾರಿಗಳು ಹಾಗೂ ಸಿಬ್ಬಂದಿ, ಕಚೇರಿ ಪೀಠೊ ಪಕರಣಕ್ಕಾಗಿ ಕೇವಲ 99 ಸಾವಿರ ಮಾತ್ರ ಖರ್ಚು ಮಾಡಿದ್ದಾರೆ. 2018-19ರಲ್ಲಿ 50 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಇರದ ಕಾರಣ ಕಳೆದ ವರ್ಷದ ಅನುದಾನ ಹಾಗೂ ಪ್ರಸಕ್ತ ವರ್ಷದ ಅನುದಾನ ಬಳಕೆಯಾಗದೆ ಕೊಳೆಯುತ್ತಿದೆ.

ಲಿಂಬೆ ಬೆಳೆಗೆ ಸಂಬಂ ಧಿಸಿದ ಮಾಹಿತಿ ಪಡೆಯಲು ರೈತರು ನಿಗಮದ ಕಚೇರಿಗೆ ಹೋದರೆ ಅಧಿ ಕಾರಿಗಳು ಇರದಿದ್ದರಿಂದ ನಿರಾಸೆಗೊಂಡು ಮರಳಿ ಬರುವಂತಾಗಿದೆ. ತಾಲೂಕು ಕೇಂದ್ರ ಇಂಡಿ ಪಟ್ಟಣದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಇದೆ ಎಂಬ ಬಗ್ಗೆ ಯಾವುದೇ ಬೋರ್ಡ್‌, ಮಾಹಿತಿ ನೀಡುವ ಫಲಕಗಳು ಇಲ್ಲ. ಕಾಫಿ, ರಬ್ಬರ್‌, ತೊಗರಿ ಅಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಅಧಿ ಕಾರಿಗಳನ್ನು ನೇಮಿಸಿದಂತೆ ಲಿಂಬೆ ಅಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಅಧಿಕಾರಿ ಹಾಗೂ ಸಿಬ್ಬಂದಿ ಒದಗಿಸಿದರೆ ಮಾತ್ರ ಇಂಡಿಯಲ್ಲಿ ರಾಜ್ಯಮಟ್ಟದ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪಿಸಿರುವುದು ಸಾರ್ಥಕವಾಗುತ್ತದೆ ಎಂಬುದು ರೈತರ ಆಗ್ರಹ.ವಿಜಯಪುರದ ತೊಟಗಾರಿಕೆ ಇಲಾಖೆ ಉಪನಿರ್ದೇಶಕರನ್ನು ಲಿಂಬೆ ಅಭಿವೃದ್ಧಿ ಮಂಡಳಿ ಎಂಡಿ ಆಗಿ, ತಾಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ಅಧಿ ಕಾರಿಯನ್ನು ಲಿಂಬೆ ಅಭಿವೃದ್ಧಿ ಮಂಡಳಿಗೆ ಜನರಲ್‌ ಮ್ಯಾನೇಜರ್‌ ಆಗಿ ಹೆಚ್ಚುವರಿಯಾಗಿ ಸರ್ಕಾರ ನೇಮಕ ಮಾಡಿ ಆದೇಶಿಸಿದೆ.

ತೋಟಗಾರಿಕೆ ಇಲಾಖೆಯ ಕಾರ್ಯಗಳ ಜೊತೆಗೆ ಲಿಂಬೆ ಅಭಿವೃದ್ಧಿ ಮಂಡಳಿಯ ಕಾರ್ಯಗಳನ್ನು ಮಾಡಿದರೆ ಲಿಂಬೆ ಬೆಳೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ವಿಜಯಪುರ ಜಿಲ್ಲೆಯವರೇತೋಟಗಾರಿಕೆ ಸಚಿವರಾಗಿದ್ದರೂ ಸಹ ಲಿಂಬೆ ಅಭಿವೃದ್ಧಿ ಮಂಡಳಿ ಒಂದು ಬಾರಿಯೂ ಸಭೆ ಕರೆದು ಚರ್ಚಿಸಿಲ್ಲ

Advertisement

ಯಾವ್ಯಾವ ಹುದ್ದೆ ಖಾಲಿ?
ಲಿಂಬೆ ಅಭಿವೃದ್ಧಿ ಮಂಡಳಿಗೆ ವ್ಯವಸ್ಥಾಪಕ ನಿರ್ದೇಶಕರು, ಜನರಲ್‌ ಮ್ಯಾನೇಜರ್‌ (ಅಭಿವೃದ್ಧಿ, ಸಂಸ್ಕರಣೆ), ಜನರಲ್‌ ಮ್ಯಾನೇಜರ್‌ (ಮಾರುಕಟ್ಟೆ), ಸಹಾಯಕ ಮ್ಯಾನೇಜರ್‌ (ಯೋಜನೆ), ಕ್ಷೇತ್ರ ಅಧಿ ಕಾರಿ (ಅಭಿವೃದ್ಧಿ, ಮಾರುಕಟ್ಟೆ), ತಾಂತ್ರಿಕ ಅಧಿಕಾರಿಗಳು, ಪತ್ರಾಂಕಿತ ವ್ಯವಸ್ಥಾಪಕರು (ಗೆಜೆಟೆಡ್‌ ಮ್ಯಾನೇಜರ್‌), ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಗಣಕಯಂತ್ರ ನಿರ್ವಾಹಕರು, ಕಚೇರಿ ಸೇವಕ, ವಾಹನ ಚಾಲಕರು ಸೇರಿ ಒಟ್ಟು 16 ಅಧಿ ಕಾರಿಗಳು/ಸಿಬ್ಬಂದಿ ಬೇಕು.

ಯಾವ್ಯಾವ ಹುದ್ದೆ ಖಾಲಿ?
ಲಿಂಬೆ ಅಭಿವೃದ್ಧಿ ಮಂಡಳಿಗೆ ವ್ಯವಸ್ಥಾಪಕ ನಿರ್ದೇಶಕರು, ಜನರಲ್‌ ಮ್ಯಾನೇಜರ್‌ (ಅಭಿವೃದ್ಧಿ, ಸಂಸ್ಕರಣೆ), ಜನರಲ್‌ ಮ್ಯಾನೇಜರ್‌ (ಮಾರುಕಟ್ಟೆ), ಸಹಾಯಕ ಮ್ಯಾನೇ ಜರ್‌ (ಯೋಜನೆ), ಕ್ಷೇತ್ರ ಅಧಿ ಕಾರಿ (ಅಭಿವೃದ್ಧಿ, ಮಾರುಕಟ್ಟೆ), ತಾಂತ್ರಿಕ ಅಧಿಕಾರಿಗಳು, ಪತ್ರಾಂಕಿತ ವ್ಯವಸ್ಥಾಪಕರು (ಗೆಜೆಟೆಡ್‌ ಮ್ಯಾನೇಜರ್‌), ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಗಣಕಯಂತ್ರ ನಿರ್ವಾಹಕರು, ಕಚೇರಿ ಸೇವಕ, ವಾಹನ ಚಾಲಕರು ಸೇರಿ ಒಟ್ಟು 16 ಅಧಿ ಕಾರಿಗಳು/ಸಿಬ್ಬಂದಿ ಬೇಕು.

Advertisement

Udayavani is now on Telegram. Click here to join our channel and stay updated with the latest news.

Next