ದೇವನಹಳ್ಳಿ: ಬೀರಸಂದ್ರ ಗ್ರಾಮದ ಸುತ್ತ ಮುತ್ತ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಸ್ಥಳೀಯ ರೈತರನ್ನು ಒಕ್ಕಲೆಬ್ಬಿಸಲು ಆಂಧ್ರ ಹಾಗೂ ಉತ್ತರ ಭಾರತದ ಪ್ರಭಾವಿ ಮಧ್ಯವರ್ತಿಗಳು ಕಿರುಕುಳ ನೀಡುತ್ತಿದ್ದು, ಕೃಷಿ ಭೂಮಿ ಉಳಿಸಿಕೊಳ್ಳಲು ಜೀವ ಭಯ ದಿಂದ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೀರಸಂದ್ರದ ರೈತ ರವಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೂಮಿ ಉಳಿವಿಗೆ 200 ಅರ್ಜಿ ನೀಡಿದ್ದೇವೆ, ಆದರೆ ರೈತರಿಂದ ಭೂಮಿ ಕಿತ್ತುಕೊಳ್ಳಲು ಸಹಕಾರಿಯಾಗುವಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಅಕ್ರಮ ಪ್ರವೇಶ, ಗೂಂಡ ವರ್ತನೆ, ದೈಹಿಕ ಹಲ್ಲೆ ನಡೆಸಿ ಮೂಲ ನಿವಾಸಿ ಗಳಿಗೆ ಭಯ ಹುಟ್ಟಿಸುತ್ತಿದ್ದಾರೆ. ಇವರ ವಿರುದ್ಧ ಎಫ್ಐಆರ್ ದಾಖಲು ಮಾಡಿ ದ್ದರೂ, ಪೊಲೀಸರೊಂದಿಗೆ ಆರೋಪಿಗಳು ಬಂದು ರೈತರ ಕೃಷಿ ಚಟುವಟಿಕೆಗಳಿಗೆ ತಡೆ ನೀಡಲು ಯತ್ನಿಸುತ್ತಿದ್ದಾರೆ ಎಂದರು.
ದಲಿತ ಮುಖಂಡ ಸಿದ್ಧಾರ್ಥ್ ಮಾತ ನಾಡಿ, ರಾತ್ರೋ ರಾತ್ರಿ ಜಮೀನುಗಳ ದಾಖ ಲೆ ಸೃಷ್ಟಿಸುತ್ತಾರೆ. ಈಗಾಗಲೆ ಹೊಸಕೋಟೆಯ ಶಾಂತನಪುರ, ಚನ್ನರಾಯಪಟ್ಟಣದಲ್ಲಿ ಅಕ್ರ ಮಗಳಿಂದ ಅಮಾನತುಗೊಂಡಿದ್ದರೂ ಬುದ್ಧಿ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ದುದ್ದನಹಳ್ಳಿಯ 20, ಬೀರಸಂದ್ರದ 30 ಎಕರೆ ಸರ್ಕಾರಿ ಭೂಮಿ ಒತ್ತುವಾರಿಯಾಗಿದೆ. ರೈತ ಜೀವನಕ್ಕೆ ಭೂಮಿಗೆ ರಕ್ಷಣೆ ನೀಡುವುದು ಯಾರು ಎಂದರು.
ಅರಣ್ಯೀಕರಣಕ್ಕೆ ಒತ್ತು ನೀಡಿಲ್ಲ: ದೇವನ ಹಳ್ಳಿಯ ವಿಮಾನ ನಿಲ್ದಾಣ ಪ್ರಾರಂಭವಾದ ನಂತರ 25 ಕಿ.ಮೀ ವ್ಯಾಪ್ತಿಯಲ್ಲಿ ಅರಣ್ಯೀ ಕರಣಕ್ಕೆ ಅಭಿವೃದ್ಧಿ ಪ್ರಾಧಿಕಾರ ಬಯಾಪ್ಪದಲ್ಲಿ 9 ಕೋಟಿ ಕ್ರಿಯಾ ಯೋಜನೆ ರೂಪಗೊಂಡಿ ದ್ದು ಅದರಲ್ಲಿ ಖರ್ಚಾಗಿರುವುದು 1.5 ಕೋಟಿ ಮಾತ್ರ. ಇನ್ನೂ ಕೆರೆಗಳ ಅಭಿವೃದ್ಧಿ ಗಾಗಿ ಮೀಸಲಾಗಿರುವ ಹಣವನ್ನೂ ಬಳಕೆ ಮಾಡುತ್ತಿಲ್ಲ. ಅರ್ಕಾವತಿ ನದಿ ಪಾತ್ರದ ಅಭಿವೃದ್ಧಿಗೆ 21 ಕೋಟಿ ಹಣ ವ್ಯಯ ಮಾಡಿದ್ದು, ಅದರ ಪಳೆಯುಳಿಕೆಯೂ ಇಂದು ಕಾಣುವುದಿಲ್ಲ ಎಂದು ರೈತರು ದಾಖಲೆ ಸಮೇತ ಆರೋಪಿಸಿದರು.
ಕುಂದಾಣ ಭಾಗದ ರೈತ ರಾಮಾಂಜಿನಪ್ಪ ಮಾತನಾಡಿ, ಒಂದು ಕಡೆ ಕೆಐಎಡಿಬಿ ಭೂ ಸ್ವಾಧೀನ, ಇನ್ನೊಂದೆಡೆ ಖಾಸಗಿಯವರ ಭೂ ಮಾಫಿಯಾದಿಂದ ರೈತರು ಬದುಕುವುದು ಹೇಗೆ ಎಂದು ಪ್ರಶ್ನಿಸಿದ್ದರು.
ಅಕ್ರಮ ದಾಖಲೆ ಸೃಷ್ಟಿ: ಕೊಯಿರ ಚಿಕ್ಕೇಗೌಡ ಮಾತನಾಡಿ, ಅರ್ಕಾವತಿ ನದಿ ಪಾತ್ರದ 23 ಗ್ರಾಮಗಳಲ್ಲಿ ರುವ ಕೃಷಿ ಭೂಮಿ ಪರಿವರ್ತನೆ ಮಾಡಲು ಬರಲ್ಲ. ಆದರೂ ಎಲ್ಲ ನಿಯಮಬಾಹಿರ ದಾಖಲೆ, ಸೃಷ್ಟಿಯಾಗುತ್ತಿದೆ ಎಂದು ರೈತರು ಆರೋಪಿಸಿದರು.