Advertisement
ಪತ್ರಕರ್ತರೊಂದಿಗೆ ಅವರು ಮಾತನಾಡಿ, ರಾಜ್ಯಪಾಲರ ಎಲ್ಲ ಪತ್ರಗಳಿಗೂ ಉತ್ತರಿಸೋಣ. ಸಚಿವ ಸಂಪುಟದ ಗಮನಕ್ಕೆ ತಂದು ಉತ್ತರ ನೀಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇವೆ. ಇಲಾಖೆಗಳಿಂದ ನೇರವಾಗಿ ಮಾಹಿತಿ ಕೊಡಬೇಡಿ ಎಂದಿದ್ದೇವೆ. ಅದು ಅರ್ಕಾವತಿ ಪ್ರಕರಣ ಇರಲಿ, ಮತ್ತೂಂದಿರಲಿ. ಈ ಮಾಹಿತಿಯ ಅಗತ್ಯವಿಲ್ಲ ಎಂದು ಸಂಪುಟಕ್ಕೆ ಎನಿಸಿದರೆ ರಾಜ್ಯಪಾಲರಿಗೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ರಾಜೀನಾಮೆಗೆ ಒತ್ತಾಯಿಸಿದ್ದ ಕೆ.ಬಿ. ಕೋಳಿವಾಡ ಅವರು ಯಾವ ಸ್ಥಾನಮಾನದಲ್ಲೂ ಇಲ್ಲ. ಪಕ್ಷದಲ್ಲಿ ಒಬ್ಬ ಹಿರಿಯ ನಾಯಕ. ಅವರ ವೈಯಕ್ತಿಕ ಅಭಿಪ್ರಾಯ ಅಷ್ಟೇ ಅದು. ಪತ್ರಕರ್ತರು ತನಿಖಾ ಪತ್ರಿಕೋದ್ಯಮ ಮಾಡಿ, ಗೊತ್ತಾಗುತ್ತದೆ ಎಂದು ಚಟಾಕಿ ಹಾರಿಸಿದರು.