Advertisement

Magadi: ಶೋಷಿತರ ಅಭಿವೃದ್ಧಿಗೆ ಸರ್ಕಾರ ಬದ್ಧ: ಗೃಹ ಸಚಿವ ಡಾ. ಜಿ.ಪರಮೇಶ್ವರ್

11:38 AM Jan 05, 2024 | Team Udayavani |

ಮಾಗಡಿ: ಶೋಷಿತ ಸಮುದಾಯಗಳ ಸಾಮಜಿಕ ನ್ಯಾಯ ಒದಗಿಸಲು ಸರ್ವತೋಮುಖಿ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಹೇಳಿದರು.

Advertisement

ಜ. 5ರ ಶುಕ್ರವಾರ ಮಾಗಡಿ ಪಟ್ಟಣದ ಪುರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಗೊಳಿಸಿ, “ಮಾಗಡಿ ಅಂಬೇಡ್ಕರ್ ಹಬ್ಬ-2024″ವನ್ನು ಉದ್ಘಾಟಿಸಿ ಮಾತನಾಡಿದರು.

ಎಸ್ಸಿ, ಎಸ್‌ಟಿ ಸಮುದಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ, ಸರಕಾರದಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ.‌ಈ ಸಮುದಾಯಗಳ ಅಭುವೃದ್ಧಿಗಾಗಿ ಮೀಸಲಿಟ್ಟಿರುವ ಅನುದಾನವನ್ನು ಬೇರಡ ಉದ್ದೇಶಗಳಿಗೆ ಬಳಕೆಯಾಗದಂತೆ ಕಾನೂನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.

ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ, ಸಮಾನತೆ ಕೊಟ್ಟ ದೇಶ ಕಂಡ ಮಹಾನ್ ನಾಯಕ ಅಂಬೇಡ್ಕರ್ ಅವರ ಮೂರ್ತಿ ಸ್ಥಾಪನೆಗೆ ರಾಜಕೀಯ ಸಲ್ಲದು‌. ಜಾತೀಯತೆ ಬಿಟ್ಟು ನಾವೆಲ್ಲ ಮನುಷ್ಯತ್ವವನ್ನು ಮೆರೆಯಬೇಕು ಎಂದರು.

ಮನುಷ್ಯನಿಗೆ ಸಮಾನತೆ, ಮುಕ್ತ ಅವಕಾಶಗಳ ಅವಶ್ಯಕತೆ ಇದೆ.  ಆದರೆ, ಸಮಾಜದಲ್ಲಿ ಮೇಲು, ಕೀಳು ಎಂಬ ಭಾವನೆ ಹುಟ್ಟು ಹಾಕಿರುವುದು ಬೇಸರ. ಅಂಬೇಡ್ಕರ್ ಅವರು ಬುದ್ದಸ, ಬಸವೇಶ್ವರರ ಸಮಾನತೆಯ ಪರಿಕಲ್ಪನೆಯನ್ನು ಪ್ರತಿಪಾದಿಸಿದರು. ಇದನ್ನೇ ಅಡಿಪಾಯವಾಗಿ ಇಟ್ಟುಕೊಂಡು ಶೋಷಿತ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು  ಕಲ್ಪಿಸಿದರು. ವಿಶ್ವವೇ ಬೆರಗಾಗುವಂತಹ ಸಂವಿಧಾನವನ್ನು ನೀಡಿದರು‌ ಎಂದರು.

Advertisement

ಜನರ ಮನಸ್ಥಿತಿ ಬದಲಾದರೆ ಮಾತ್ರ ಜಾತೀಯತೆ ಹೋಗಲಾಡಿಸಲು ಸಾಧ್ಯ. ಉತ್ತರ ಭಾರತದ ಭಾಗದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪರಿಸ್ಥಿತಿ ಉತ್ತಮವಾಗಿದೆ. ಎಲ್ಲಿಯವರೆಗೆ ಶೋಷಣೆ, ದೌರ್ಜನ್ಯ ನಡೆಯುತ್ತವೆಯೋ, ಅಲ್ಲಿವರೆಗೆ ಅಂಬೇಡ್ಕರ್ ಅವರ ಚಿಂತನೆ, ಆದರ್ಶಗಳು‌ ಜೀವಂತವಾಗಿರುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಎಮ್.ರೇವಣ್ಣ, ಕಾಂಗ್ರೆಸ್ ಮುಖಂಡ ಬಿ.ವಿ.ಜಯರಾಂ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next